ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗುತ್ತಲು ಕಾಲೋನಿಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಛರಲ್ ಸೆಂಟರ್ ಹಾಗೂ ಇಂಡಿಯನ್ ಮುಸ್ಲಿಂ ಲೀಗ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ರಂಜಾನ್ ಕಿಟ್‌ನ್ನು ಶಾಸಕ ಪಿ.ರವಿಕುಮಾರ್‌ಗೌಡ ವಿತರಣೆ ಮಾಡಿದರು.ನಂತರ ಮಾತನಾಡಿದ ಅವರು, ರಂಜಾನ್ ಹಬ್ಬದಲ್ಲಿ ಯಾರೊಬ್ಬರೂ ಉಪವಾಸ ಇರಬಾರದೆಂಬ ಉದ್ದೇಶದಿಂದ ಆಹಾರ ಕಿಟ್ ವಿತರಿಸಿ ರಂಜಾನ್ ಹಬ್ಬಕ್ಕೆ ಅರ್ಥ ನೀಡಿದ್ದಾರೆ. ಇದು ಅವರ ಸಂಪ್ರದಾಯ. ಇದರ ಭಾಗವಾಗಿ ರಂಜಾನ್ ಹಬ್ಬಕ್ಕೆಂದು ಆಹಾರ ಕಿಟ್ ವಿತರಣೆ ಮಾಡಿರುವುದು ಮೆಚ್ಚುಗೆ ಕೆಲಸ ಎಂದು ಶ್ಲಾಘಿಸಿದರು.
ಆಹಾರ ಕಿಟ್ ವಿತರಣೆ ಕಳೆದ ಎಂಟು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಇಂತಹ ಕಾರ್ಯಗಳನ್ನು ಮತ್ತಷ್ಟು ಹೆಚ್ಚಾಗಿ ಮಾಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ನೆರವಾಗಲಿ ಎಂದು ಶುಭಕೋರಿದರು.ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಶ್ರೀನಿವಾಸ್, ಸೌಭಾಗ್ಯ, ಶ್ರೀಧರ್, ಮುಖಂಡರಾದ ಇದ್ರೀಶ್‌ಖಾನ್, ಜಾಕೀರ್ ಸಾಬ್, ಸಮೀರ್, ಅಬ್ದುಲ್, ಶಿವರುದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.
ಮಾರಿ ಹಬ್ಬ ವಿವಿಧ ಶಕ್ತಿ ದೇವತೆಗಳಿಗೆ ವಿಜೇಷ ಪೂಜೆಪಾಂಡವಪುರ:
ಮಾರಿ ಹಬ್ಬ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಶಕ್ತಿ ದೇವತೆಗಳ ದೇವಸ್ಥಾನದಲ್ಲಿ ವಿಜೇಷ ಪೂಜೆಗಳು ನಡೆದು ತೊಂಬಿಟ್ಟು ಆರತಿಯೊಂದಿಗೆ ಕುರಿ, ಕೋಳಿಗಳನ್ನು ಬಲಿಕೊಟ್ಟು ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.ಪಟ್ಟಣದ ಮಹಾಕಾಳೇಶ್ವರಿ ದೇವಸ್ಥಾನ, ಆಧಿಶಕ್ತಿ, ವಿ.ಸಿ.ಕಾಲೋನಿ ಮತ್ತು ಬೀರಶೆಟ್ಟಹಳ್ಳಿ ಮಾರಮ್ಮನ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಮಾರಮ್ಮನ ಗುಡಿಗಳಲ್ಲಿ ವಿಶೇಷ ಪೂಜೆಯನ್ನು ಶಕ್ತಿ ದೇವತೆಗೆ ಸಲ್ಲಿಸಲಾಯಿತು.
ಬೆಳಗ್ಗೆಯಿಂದಲೇ ಸರತಿ ಸಲಾಲಿನಲ್ಲಿ ನಿಂತು ದೇವರಿಗೆ ಪೂಜೆ ಸಲ್ಲಿಸಿದ ಭಕ್ತಾಧಿಗಳು ಸಂಪ್ರದಾಯದಂತೆ ಮಾರಿಗೆ ಕುರಿ ಮತ್ತು ಕೋಳಿಗಳನ್ನು ಬಲಿಕೊಟ್ಟು ನೈವೇಧ್ಯ ಸಮರ್ಪಿಸಿದರು.ಹಬ್ಬ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಇರುವ ಶಕ್ತಿದೇವತೆಗಳ ದೇವಸ್ಥಾನಗಳನ್ನು ತಳಿರು ತೋರಣ, ಬಾಳೆಕಂದುಗಳಿಂದ ಸಿಂಗರಿಸುವ ಜತೆಗೆ ವಿದ್ಯುತ್ ದೀಪಾಂಲಕಾರ ಮಾಡಲಾಗಿತ್ತು. ಮಾರಿಗುಡಿ ಮತ್ತು ಶಕ್ತಿ ದೇವಸ್ಥಾನಗಳ ಮುಂಭಾಗದ ದೇವರ ಕಲ್ಲಿಗೆ ಕೋಳಿ ಬಲಿಕೊಟ್ಟು ಭಕ್ತಿ ಸಮರ್ಪಿಸಲಾಯಿತು.
ಮುಂಜಾನೆಯಿಂದ ಪ್ರಾರಂಭವಾದ ವಿಶೇಷ ಪೂಜೆ ರಾತ್ರಿ 9ರ ತನಕ ನಡೆಯಿತು. ಮಹಿಳೆಯರು ದೇವರಿಗಿ ತೊಂಬಿಟ್ಟು ಆರತಿ ಬೆಳಗಿ ಕಷ್ಟ ಕಾರ್ಪಣ್ಯಗಳ ಮುಕ್ತಿಗೆ ಬೇಡಿಕೊಂಡರು.