ಲಯನ್ಸ್‌ ಕ್ಲಬ್‌ ವತಿಯಿಂದ ಆಹಾರ ಕಿಟ್ ವಿತರಣೆ

KannadaprabhaNewsNetwork |  
Published : Nov 29, 2026, 01:45 AM IST
28ಎಚ್ಎಸ್ಎನ್7 : ಆಹಾರದ ಕಿಟ್  ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಸಿಎನ್ ಬಾಲಕೃಷ್ಣ ಪಾಲ್ಗೊಂಡು ಫಲಾನುಭವಿಗಳಿಗೆ ಅಹಾರ ಕಿಟ್‌ಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಸಿದ್ಧರಹಟ್ಟಿ ಗ್ರಾಮದಲ್ಲಿ ಗ್ರಾಮದ ಎಲ್ಲಾ 93 ಫಲಾನುಭವಿಗಳಿಗೆ ಹಾಸನ ಲಯನ್ಸ್ ಕ್ಲಬ್ ಹಾಗೂ ಹೆಗಚಿ ಮತ್ತು ಚನ್ನರಾಯಪಟ್ಟಣ ಹಾಗೂ ಬಾಗೂರು ಲಯನ್ಸ್ ಕ್ಲಬ್ ಸಂಯುಕ್ತ ಆಶಯದಲ್ಲಿ ಹಮ್ಮಿಕೊಂಡಿದ್ದ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹೋಬಳಿಯ ಸಿದ್ಧರಟ್ಟಿ ಗ್ರಾಮದಲ್ಲಿ ಅಲೆಮಾರಿ ಜನಾಂಗದ ಜನರು ವಾಸಿಸುತ್ತಿದ್ದು ಇದರಿಂದ ಗ್ರಾಮದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಬಾಗೂರು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಗ್ರಾಮದ ಎಲ್ಲಾ 93 ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ ಲಯನ್ಸ್ ಕ್ಲಬ್ ನ ಸಮಾಜಮುಖಿ ಕೆಲಸಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಪೂರಕ ಬೆಳವಣಿಗೆಗೆ ಮತ್ತು ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಹೋಬಳಿಯ ಸಿದ್ಧರಹಟ್ಟಿ ( ಬೂವನಹಳ್ಳಿ,) ಗ್ರಾಮದಲ್ಲಿ ಗ್ರಾಮದ ಎಲ್ಲಾ 93 ಫಲಾನುಭವಿಗಳಿಗೆ ಹಾಸನ ಲಯನ್ಸ್ ಕ್ಲಬ್ ಹಾಗೂ ಹೆಗಚಿ ಮತ್ತು ಚನ್ನರಾಯಪಟ್ಟಣ ಹಾಗೂ ಬಾಗೂರು ಲಯನ್ಸ್ ಕ್ಲಬ್ ಸಂಯುಕ್ತ ಆಶಯದಲ್ಲಿ ಹಮ್ಮಿಕೊಂಡಿದ್ದ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹೋಬಳಿಯ ಸಿದ್ಧರಟ್ಟಿ ಗ್ರಾಮದಲ್ಲಿ ಅಲೆಮಾರಿ ಜನಾಂಗದ ಜನರು ವಾಸಿಸುತ್ತಿದ್ದು ಇದರಿಂದ ಗ್ರಾಮದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಬಾಗೂರು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಗ್ರಾಮದ ಎಲ್ಲಾ 93 ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ ಲಯನ್ಸ್ ಕ್ಲಬ್ ನ ಸಮಾಜಮುಖಿ ಕೆಲಸಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.ನುಗ್ಗೇಹಳ್ಳಿ -ಬಾಗೂರು ಮುಖ್ಯ ರಸ್ತೆಯಿಂದ ಸಿದ್ದರ ಹಟ್ಟಿ ಗ್ರಾಮದವರಗಿನ ಸುಮಾರು 2 ಕಿಲೋಮೀಟರ್ ರಸ್ತೆಯನ್ನು ಪ್ರಗತಿಪಥ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಜೊತೆಗೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗ್ರಾಮದ ಮಹಿಳೆಯರು ತಿಳಿಸಿದ್ದು ಈಗಾಗಲೇ ಮಲ್ಟಿ ವಿಲೇಜ್ ಸ್ಕೀಮ್ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು ಜನವರಿ ಅಂತ್ಯದೊಳಗೆ ಗ್ರಾಮದ ವಾಟರ್‌ ಟ್ಯಾಂಕ್ ಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಮೂಲಕ ನೀರಿನ ಸಮಸ್ಯೆ ಬಗೆಹರಿಸಲಾಗುತ್ತದೆ ಜೊತೆಗೆ ಈಗಾಗಲೇ ಸಮುದಾಯ ಭವನ ಅಂಗನವಾಡಿ ಕಟ್ಟಡ ವಿವಿಧ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಜೊತೆಗೆ ಗಂಗಾ ಕಲ್ಯಾಣ ಯೋಜನೆ ಮೂಲಕ 50 ರೈತರಿಗೆ ಯೋಜನೆಯ ಮೂಲಕ ಕೊಳವೆಬಾವಿ ಕೊರೆಸಿ ಕೊಡಲಾಗಿದೆ ಮುಂಬರುವ ದಿನಗಳಲ್ಲಿ ಕ್ಲಬ್ ವತಿಯಿಂದ ಭುವನಹಳ್ಳಿ ವಡ್ರಹಟ್ಟಿ ಗ್ರಾಮಕ್ಕೆ ಆಹಾರದ ಕಿಟ್ ವಿತರಣೆ ಮಾಡುವಂತೆ ತಿಳಿಸಿದರು. ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಎಚ್ ರಮೇಶ್ ಮಾತನಾಡಿ ಈಗಾಗಲೇ ಲಯನ್ಸ್ ಕ್ಲಬ್ ಪ್ರಾರಂಭಗೊಂಡು 108 ವರ್ಷಗಳು ಕಳೆದಿದ್ದು 200 ದೇಶಗಳಲ್ಲಿ ಒಟ್ಟು 50 ಸಾವಿರ ಲಯನ್ಸ್ ಕ್ಲಬ್ ಶಾಖೆಗಳನ್ನು ಹೊಂದಿದೆ ಸುಮಾರು 15 ಲಕ್ಷ ಸದಸ್ಯರನ್ನು ಹೊಂದಿದೆ ಶಿಕ್ಷಣ ಆರೋಗ್ಯ ಅತಿವೃಷ್ಟಿ ಅನಾವೃಷ್ಟಿ ಸೇರಿದಂತೆ ವಿವಿಧ ಕಷ್ಟದ ಸಂದರ್ಭಗಳಲ್ಲಿ ಜನರ ಬೆನ್ನೆಲುಬಾಗಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಬಾಗೂರು ಲಯನ್ಸ್ ಕ್ಲಬ್ ಗೌರವಾಧ್ಯಕ್ಷ ಬಿ ಎಚ್ ಶಿವಣ್ಣ ಮಾತನಾಡಿ ಬಾಗೂರು ಲಯನ್ಸ್ ಕ್ಲಬ್ ಸೇರಿದಂತೆ ಎಲ್ಲಾ 4 ಕ್ಲಬ್ ಗಳ ಸಹಕಾರದೊಂದಿಗೆ ಗ್ರಾಮದ ಎಲ್ಲಾ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ಕೊಡಲು ಸಾಧ್ಯವಾಗಿತ್ತು ಲಯನ್ಸ್ ಕ್ಲಬ್ ಉದ್ದೇಶ ಹಣ ಮಾಡುವುದಲ್ಲ ಕಷ್ಟದಲ್ಲಿರುವ ಜನರಿಗೆ ಸೇವಾ ಮನೋಭಾವನೆ ಮೂಲಕ ಸಹಾಯ ಮಾಡುವುದು ಯಾವುದೇ ರಾಜಕೀಯ ಅಪೇಕ್ಷೆ ಇಲ್ಲದೆ ನಿಸ್ವಾರ್ಥಕವಾಗಿ ಸಂಸ್ಥೆ ಸೇವೆ ಸಲ್ಲಿಸುತ್ತಾ ಬರುತ್ತಿದೆ ಎಂದರು.ಬಾಗೂರು ಲಯನ್ಸ್ ಕ್ಲಬ್ ಅಧ್ಯಕ್ಷ ಡಿ ಎನ್ ನಾಗರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ತಾಪಂ ಸದಸ್ಯ ಓಬಳಾಪುರ ಬಸವರಾಜ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಣ್ಣೇಗೌಡ, ಇಂದ್ರೇಶ್, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಚ್ ಕೆ ನಾಗೇಶ್, ಕ್ಲಬ್ ನ ಕ್ಯಾಬಿನೆಟ್ ಮಾಜಿ ಸೆಕ್ರೆಟರಿ ಚಂದ್ರೇಗೌಡ , ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಜವರಪ್ಪ, ಚನ್ನರಾಯಪಟ್ಟಣ ಲಯನ್ಸ್ ಕ್ಲಬ್ ಅಧ್ಯಕ್ಷ ಗೋವಿಂದರಾಜು, ಬಾಗೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಿ. ಕೆ. ಭುವನೇಂದ್ರ, ಖಜಾಂಚಿ ರೇವಣ್ಣ, ಮುಖಂಡರಾದ ಎಲ್ಐಸಿ ಕಾಂತರಾಜ್, ಹುಲಿಕೆರೆ ಸಂಪತ್ ಕುಮಾರ್, ಗ್ರಾಮದ ಪ್ರಮುಖರಾದ ಮಂಜಣ್ಣ, ನಾಗರಾಜ್, ಜಯರಾಮ್, ಸಿದ್ದೇಶ್, ಪಾಪಣ್ಣ, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ರೈತರಿಗೆ ₹ 50 ಸಾವಿರ ಪರಿಹಾರ ನೀಡಿ
ಕಣ್ಣು ಕತ್ತಲಾದರೂ ಅಕ್ಷರಗಳ ಬೆಳಕು ಆರಲಿಲ್ಲ!