ಬೀದಿನಾಯಿ ಕಚ್ಚಿ ಕುರಿಗಳು ಸಾವು: ರೈತರ ಪ್ರತಿಭಟನೆ

KannadaprabhaNewsNetwork |  
Published : Nov 29, 2026, 01:45 AM IST
ಬೀದಿ ನಾಯಿ ಕಚ್ಚಿ ಸಾವಿಗೀಡಾದ ಕುರಿಗಳನ್ನು ಶಿಕಾರಿಪುರ ಪುರಸಭೆ ಮುಂಭಾಗ ತಂದು ಶನಿವಾರ ಸಂತ್ರಸ್ಥರು ತೀವ್ರವಾಗಿ ಪ್ರತಿಭಟಿಸಿದರು | Kannada Prabha

ಸಾರಾಂಶ

ಬೀದಿನಾಯಿಗಳ ಹಾವಳಿ ವಿಪರೀತವಾಗಿ ಮಕ್ಕಳು, ಮಹಿಳೆಯರು, ವೃದ್ಧರ ಸಹಿತ ಜನ, ಜಾನುವಾರುಗಳು ರಸ್ತೆಯಲ್ಲಿ ಓಡಾಡಲು ಭಯ ಪಡುವ ವಾತಾವರಣ ನಿರ್ಮಾಣಗೊಂಡಿದ್ದು, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಾದ ಪುರಸಭೆ ದಿವ್ಯ ನಿರ್ಲಕ್ಷ ಧೋರಣೆಯಿಂದಾಗಿ ಶುಕ್ರವಾರ ರಾತ್ರಿ ನಾಯಿಗಳ ಹಿಂಡು ರೈತ ದಿನೇಶ್ ಅವರ ಲಕ್ಷಾಂತರ ಬೆಲೆ ಬಾಳುವ ಕುರಿಗಳನ್ನು ಕಚ್ಚಿ ಸಾಯಿಸಿದ ಘಟನೆ ಕಡೇಕೇರಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಬೀದಿನಾಯಿಗಳ ಹಾವಳಿ ವಿಪರೀತವಾಗಿ ಮಕ್ಕಳು, ಮಹಿಳೆಯರು, ವೃದ್ಧರ ಸಹಿತ ಜನ, ಜಾನುವಾರುಗಳು ರಸ್ತೆಯಲ್ಲಿ ಓಡಾಡಲು ಭಯ ಪಡುವ ವಾತಾವರಣ ನಿರ್ಮಾಣಗೊಂಡಿದ್ದು, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಾದ ಪುರಸಭೆ ದಿವ್ಯ ನಿರ್ಲಕ್ಷ ಧೋರಣೆಯಿಂದಾಗಿ ಶುಕ್ರವಾರ ರಾತ್ರಿ ನಾಯಿಗಳ ಹಿಂಡು ರೈತ ದಿನೇಶ್ ಅವರ ಲಕ್ಷಾಂತರ ಬೆಲೆ ಬಾಳುವ ಕುರಿಗಳನ್ನು ಕಚ್ಚಿ ಸಾಯಿಸಿದ ಘಟನೆ ಕಡೇಕೇರಿಯಲ್ಲಿ ನಡೆದಿದೆ.

ನೊಂದ ಜನತೆ ಸತ್ತ ಕುರಿಗಳನ್ನು ಶನಿವಾರ ಬೆಳಿಗ್ಗೆ ಪುರಸಭೆ ಮುಂಭಾಗದಲ್ಲಿಟ್ಟು ಮುಖ್ಯಾಧಿಕಾರಿ ವಿರುದ್ಧ ಘೋಷಣೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಬೆಳಿಗ್ಗೆ ಈ ಬಗ್ಗೆ ಮುಖ್ಯಾಧಿಕಾರಿಗೆ ತಿಳಿಸಿದರೂ ಮಧ್ಯಾಹ್ನವಾದರೂ ಸ್ಥಳಕ್ಕೆ ಧಾವಿಸದ ಅಧಿಕಾರಿ ನಿರ್ಲಕ್ಷದ ಬಗ್ಗೆ ಪ್ರತಿಭಟನಾಕಾರರ ಆಕ್ರೋಶದ ಕಿಚ್ಚು ಹೆಚ್ಚಾಯಿತು.

ಟಿಎಪಿಸಿಎಂಎಸ್ ನಿರ್ದೇಶಕ ರಾಘವೇಂದ್ರ ಎಸ್.ಎಸ್ ಮಾತನಾಡಿ, ಕಳೆದ 5 ದಿನಗಳಲ್ಲಿ ಕಡೆಕೇರಿಯಲ್ಲಿ ಹಸು ಹಾಗೂ ಕುರಿಯನ್ನು ನಾಯಿಗಳು ಕಚ್ಚಿ ಸಾಯಿಸಿದ್ದು, ಅದೇ ರೀತಿ ಸೊಪ್ಪಿನಕೇರಿ ಮತ್ತು ದೊಡ್ಡಕೇರಿಯಲ್ಲಿ ನಡೆದಿದೆ.

ಚನ್ನಕೇಶವ ನಗರದಲ್ಲಿ ಕೆಲ ಮಕ್ಕಳಿಗೂ ನಾಯಿ ಕಚ್ಚಿದ ಪ್ರಕರಣ ನಡೆದಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಪುರಸಭೆಯಿಂದ ನಾಯಿಗಳನ್ನು ಹಿಡಿಯಲು ಟೆಂಡರ್ ಕರೆದು ಹಿಡಿಸಿ ಸಂತಾನಹರಣ ಶಸ್ತ್ರಕ್ರಿಯೆ ನಡೆಸಿ ಪುನಃ ಬಿಡಲಾಗುತ್ತದೆ.

ನಾಯಿಗಳ ಉಪಟಳದಿಂದಾಗಿ ರಾತ್ರಿ ವೇಳೆ ಒಂಟಿಯಾಗಿ ಮಕ್ಕಳು, ಮಹಿಳೆಯರು, ವೃದ್ಧರು ಸಹಿತ ಜಾನುವಾರು ಓಡಾಡುವುದು ಕಷ್ಟವಾಗಿದೆ ಎಂದು ದೂರಿದರು.

ಈ ಅನಾಹುತಕ್ಕೆ ನೇರವಾಗಿ ಕಾರಣರಾಗಿದ್ದು ವೈಯುಕ್ತಿಕವಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಪಟ್ಟಣದ ಹಲವು ಕಡೆಗಳಲ್ಲಿ ಸಾರ್ವಜನಿಕರ ಲಕ್ಷಾಂತರ ಹಣ ಪೋಲು ಮಾಡಿ ಸಿ.ಸಿ ಕ್ಯಾಮರ ಅಳವಡಿಸಲಾಗಿದೆ.ಮುಖ್ಯಾಧಿಕಾರಿ ಖುದ್ದು ವಾರ್ಡ್ ಗಳ ಬೇಟಿ ಮಾಡಿ ಸಮಸ್ಯೆ ಆಲಿಸುತ್ತಿಲ್ಲ.ಜನರ ಬಗ್ಗೆ ಕಾಳಜಿ ಇಲ್ಲದ ಅಧಿಕಾರಿ ಪುರಸಭೆ ಕಚೇರಿಯಲ್ಲಿ ವೈಯುಕ್ತಿಕ ಹಿತಾಸಕ್ತಿಗಾಗಿ ಮಾತ್ರ ತಡರಾತ್ರಿವರೆಗೂ ಕಾರ್ಯನಿರ್ವಹಿಸುತ್ತಾ ಸಾರ್ವಜನಿಕರ ಸಮಸ್ಯೆಗೆ ಕರೆ ಮಾಡಿದರೆ ಧಾವಿಸದ ಇಂತಹ ಅಧಿಕಾರಿ ನಮಗೆ ಬೇಡ ಈ ಕೂಡಲೇ ಅಮಾನತ್ತು ಗೊಳಿಸಿ ಆತನ ಭ್ರಷ್ಟಾಚಾರದ ಬಗ್ಗೆ ವಿಚಾರಣೆ ನಡೆಸಿ ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಧಿಕ್ಕಾರ ಹಾಕಿದರು.

ಈ ಹಿಂದೆ ಎರಡು ಬಾರಿ ವರ್ಗಾವಣೆಯಾದರೂ ಇಲ್ಲಿಯೇ ಉಳಿದಿದ್ದಾರೆ. ಇದರಲ್ಲಿ ರಾಜಕೀಯದ ಕೈವಾಡವಿದ್ದರೂ ಈ ಮುಖ್ಯಾಧಿಕಾರಿ ನಮಗೆ ಬೇಡ ಎಂದು ಕಿಡಿಕಾರಿದ ಪ್ರತಿಭಟನಾಕಾರರು ಅಧಿಕಾರಿ ಬರಲಿಲ್ಲವಾದರೆ ಸತ್ತ ಕುರಿಗಳನ್ನು ಪುರಸಭೆಯಲ್ಲಿ ಬಿಟ್ಟು ತೆರಳುವುದಾಗಿ ಎಚ್ಚರಿಸಿದರು.

ಸಾರ್ವಜನಿಕರ ಬಗ್ಗೆ ನಿರ್ಲಕ್ಷ್ಯ ಧೂರಣೆ ತೋರಿದಲ್ಲಿ ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿಗೆ ಹಿಡಿ ಶಾಪ ಹಾಕಿದರು.

ಘಟನೆ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿ ಕೂಡಲೇ ಮುಖ್ಯಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.

ನೂರಾರು ಜನ ಪ್ರತಿಭಟನೆ ಸ್ಥಳದಲ್ಲಿ ಜಮಾಯಿಸಿ ಮುಖ್ಯಾಧಿಕಾರಿ ವಿರುದ್ಧ ದಿಕ್ಕಾರದ ಘೋಷಣೆ ಹಾಕಿದರು.

ನಂತರ ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ಭರತ್ ಪ್ರತಿಭಟನಾಕಾರರಿಗೆ ಶೀಘ್ರದಲ್ಲೇ ನಾಯಿಗಳನ್ನು ಸಂತಾನ ಹರಣ ಚಿಕಿತ್ಸೆಗೆ ಬೇರೆ ಕಡೆಗೆ ಸ್ಥಳಾಂತರಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಾಗರಾಜ್, ಗಿರೀಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅವಕಾಶವನ್ನು ಬಳಸಿಕೊಳ್ಳುವ ಚಾಕಚಕ್ಯತೆ ವಿದ್ಯಾರ್ಥಿಗಳಲ್ಲಿರಬೇಕು: ಕ್ಯಾ. ಚೌಟ
ಆನೆ ದಾಳಿ ಸಮಸ್ಯೆ: ರಾಮಲಿಂಗ ರೆಡ್ಡಿ ಜೊತೆ ಕೋಟ ಚರ್ಚೆ