ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

KannadaprabhaNewsNetwork |  
Published : Aug 27, 2026, 01:30 AM IST
26ಕೆಎಂಎನ್ ಡಿ15 | Kannada Prabha

ಸಾರಾಂಶ

ಪ್ರವಾದಿ ಮುಹಮ್ಮದ್ ರವರ ಜನ್ಮದಿನದ ಪ್ರಯುಕ್ತ ಪಟ್ಟಣದ ಎಪಿಎಂಸಿಯಲ್ಲಿರುವ ಚೆನ್ನಬಸವ ಅಂಧಮಕ್ಕಳ ಶಾಲೆಯಲ್ಲಿ ವಿಶೇಷಚೇತನರಿಗೆ ಎಐಎಂಐಎಂ ಪಕ್ಷದ ತಾಲೂಕು ಘಟಕದಿಂದ ಉಪಹಾರ ವಿತರಿಸಿ ಹಾಗೂ ತಾಯಿ ಮಕ್ಕಳ ಆಸ್ಪತ್ರೆಯಲ್ಲಿನ ಹೆರಿಗೆ ತಾಯಂದಿಯರಿಗೆ ಮಕ್ಕಳ ಮಚ್ಚರ್ ದಾನ್ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ಬ್ರೇಡ್ ವಿತರಿಸಲಾಯಿತು

ಮಾನ್ವಿ: ಪ್ರವಾದಿ ಮುಹಮ್ಮದ್ ರವರ ಜನ್ಮದಿನದ ಪ್ರಯುಕ್ತ ಪಟ್ಟಣದ ಎಪಿಎಂಸಿಯಲ್ಲಿರುವ ಚೆನ್ನಬಸವ ಅಂಧಮಕ್ಕಳ ಶಾಲೆಯಲ್ಲಿ ವಿಶೇಷಚೇತನರಿಗೆ ಎಐಎಂಐಎಂ ಪಕ್ಷದ ತಾಲೂಕು ಘಟಕದಿಂದ ಉಪಹಾರ ವಿತರಿಸಿ ಹಾಗೂ ತಾಯಿ ಮಕ್ಕಳ ಆಸ್ಪತ್ರೆಯಲ್ಲಿನ ಹೆರಿಗೆ ತಾಯಂದಿಯರಿಗೆ ಮಕ್ಕಳ ಮಚ್ಚರ್ ದಾನ್ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ಬ್ರೇಡ್ ವಿತರಿಸಲಾಯಿತು.

ಈ ವೇಳೆ ಸಮಿತಿ ಅಧ್ಯಕ್ಷ ನಾಸೀರ್ ಅಲಿ ಖುರೇಶಿ ಮಾತನಾಡಿ, ಪ್ರವಾದಿಗಳ ಸಂದೇಶದಂತೆ ಕಷ್ಟದಲ್ಲಿರುವವರಿಗೆ ನೆರವಿಗೆ ಬರುವುದು ಅಗತ್ಯವಿರುವವರ ಸೇವಾ ಕಾರ್ಯಗಳ ಮೂಲಕ ಆಚರಿಸುವುದು ಬಡವರು, ರೋಗಿಗಳು ಹಾಗೂ ಸಂಕಷ್ಟದಲ್ಲಿರುವ ಜನರ ಸೇವೆಯೇ ಪ್ರವಾಧಿಯವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಅವರ ಜನ್ಮದಿನದ ಪ್ರಯುಕ್ತ ಹಲವಾರು ಜನಪರ ಕಾರ್ಯಕ್ರಮಗಳನ್ನು ಪಕ್ಷಿದಿಂದ ಮಾಡುತ್ತಿದ್ದೇವೆ, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಪಕ್ಷದ ಕಾರ್ಯದರ್ಶಿ ಸಾಬೀರ್ ಪಾಷ, ಮುಖಂಡರಾದ ಅವಿನಾಶ ನಾಯಕ,ಭೀಮೇಶ್ , ಕಾಸೀಮ್ ಸಾಬ್ ಖುರೇಶಿ, ಬಹದ್ದೂರ್ ಖಾನ್ ಸಾಬ್, ಸೈಯದ್ ರಾಜಾ ವಾರ್ಡ ಅಧ್ಯಕ್ಷರು, ಅಮೀರ್ ಖಾನ್ ವಾರ್ಡ್ ಅಧ್ಯಕ್ಷರು,ಶೈಬಾಜ್ ಖುರೇಶಿ, ಶೈಬಾಜ್ ಸರ್ಮತ್, ಸೈಯದ್ ವಹಬ್ ವಾರ್ಡ್ ಅಧ್ಯಕ್ಷರು, ಸೈಯದ್ ಕರೀಮ್, ಸೇರಿದಂತೆ ಇನ್ನು ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂತ್ರಿ ಪಟ್ಟಕ್ಕಾಗಿ ರೈತರಿಗೆ ಮಧು, ಎಸ್ಸೆಸ್ಸೆಂ ಅನ್ಯಾಯ
ಗುಟ್ಕಾ, ಪಾನ್ ಮಸಾಲ ನಿಷೇಧ ವಿರೋಧಿಸಿ ಹೋರಾಟ ಶುರು