ಮನೆ ಮನೆಗೆ ಕಸದ ಡಬ್ಬಿಗಳ ವಿತರಣೆ

KannadaprabhaNewsNetwork |  
Published : Nov 01, 2024, 12:33 AM IST
ಘಟಪ್ರಭಾದಲ್ಲಿ ಕಸದ ಡಬ್ಬಿಗಳನ್ನು ಸರಬರಾಜು ಮಾಡುತ್ತಿರುವ ಸಿಬ್ಬಂದಿ ವರ್ಗ ಪ್ರತಿ ಮನೆಗೆ ಕಸದ ಡಬ್ಬಿ  (ಡಸ್ಟಬಿನ್) ವಿತರಿಸಲಾಯಿತು. | Kannada Prabha

ಸಾರಾಂಶ

ಪುರಸಭೆಯಿಂದ ಪ್ರತಿ ಮನೆಗೆ ಕಸದ ಡಬ್ಬಿಗಳನ್ನು ವಿತರಿಸಲಾಗುತ್ತಿದ್ದು, ಮನೆಯಲ್ಲಿನ ಹಸಿ ಮತ್ತು ಒಣ ಕಸವನ್ನು ಚರಂಡಿಗಳಿಗೆ ಎಸೆಯದೇ ಬೇರ್ಪಡಿಸುವ ಕಸದ ವಾಹನಗಳಲ್ಲಿ ಹಾಕುವ ಮೂಲಕ ಪಟ್ಟಣವನ್ನು ಸ್ವಛ್ಛವಾಗಿಡಬೇಕು ಎಂದ ಪುರಸಭೆ ಮುಖ್ಯಾಧಿಕಾರಿ ಎಂ.ಎಸ್. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಘಟಪ್ರಭಾ

ಪುರಸಭೆಯಿಂದ ಪ್ರತಿ ಮನೆಗೆ ಕಸದ ಡಬ್ಬಿಗಳನ್ನು ವಿತರಿಸಲಾಗುತ್ತಿದ್ದು, ಮನೆಯಲ್ಲಿನ ಹಸಿ ಮತ್ತು ಒಣ ಕಸವನ್ನು ಚರಂಡಿಗಳಿಗೆ ಎಸೆಯದೇ ಬೇರ್ಪಡಿಸುವ ಕಸದ ವಾಹನಗಳಲ್ಲಿ ಹಾಕುವ ಮೂಲಕ ಪಟ್ಟಣವನ್ನು ಸ್ವಛ್ಛವಾಗಿಡಬೇಕು ಎಂದ ಪುರಸಭೆ ಮುಖ್ಯಾಧಿಕಾರಿ ಎಂ.ಎಸ್. ಪಾಟೀಲ ಹೇಳಿದರು.

ಪ್ರತಿ ಮನೆಗೆ ಪ್ರತಿದಿನ ವಾಹನ ಬರುತ್ತಿರುವ ಕಾರಣ ಪ್ರತಿ ಮನೆಯವರು ಚರಂಡಿಯಲ್ಲಿ ಕಸವನ್ನು ಎಸೆಯದೇ ಕಸದ ಡಬ್ಬಿಯಲ್ಲಿ ಸಂಗ್ರಹಿಸಿ ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಕಾಪಾಡುಕೊಂಡು ಹೊಗಬೇಕು ಎಂದು ಹೇಳಿದರು.

ಪಟ್ಟಣದ ವಿವಿಧ ವಾರ್ಡಗಳಲ್ಲಿ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ ನಿರ್ದೇಶನದಂತೆ, ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಘಟಪ್ರಭಾ ಪುರಸಭೆ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ಕಸದ ಡಬ್ಬಿಗಳನ್ನು ಸರಬರಾಜು ಮಾಡಿ ಪ್ರತಿ ಮನೆಗೆ ಕಸದ ಡಬ್ಬಿ (ಡಸ್ಟಬಿನ್) ವಿತರಿಸುವ ಕಾರ್ಯಕ್ರಮದಲ್ಲಿ ಜನರಲ್ಲಿ ಮನವಿ ಮಾಡಿಕೊಂಡರು. ಹಿರಿಯರಾದ ಡಿ.ಎಂ.ದಳವಾಯಿ, ಪಪಂ ಮಾಜಿ ಸದಸ್ಯರಾದ ಸಲೀಂ ಕಬ್ಬೂರ, ಇಮ್ರಾನ್‌ ಬಟಕುರ್ಕಿ, ಜಾವೇದ್‌ ಡಾಂಗೆ, ನವೀನ ಉಪ್ಪಾರ, ಮಹಾಂತೇಶ ದೊಡಲಿಂಗಪ್ಪಗೋಳ, ಅಕ್ಷಯ ಮಾನಗಾವಿ, ಮುಶೀನ ಮಕಾನದಾರ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ