ಮುಂಗಾರು ಹಂಗಾಮಿನಲ್ಲಿ ಉತ್ತಮ ಗುಣಮಟ್ಟದ ರಾಗಿ ತಳಿ ವಿತರಣೆ: ಅಶೋಕ್

KannadaprabhaNewsNetwork |  
Published : Jul 26, 2025, 12:00 AM IST
25ಕೆಕೆಡಿಯ1.. | Kannada Prabha

ಸಾರಾಂಶ

ಕಡೂರು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಡೂರು ಕೃಷಿ ಇಲಾಖೆಯಿಂದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ರಾಗಿ ತಳಿಗಳಾದ ಎಂ.ಆರ್ -1, ಎಂ.ಆರ್-06, ಎಂ.ಎಲ್ - 365, , ಜಿ.ಪಿ.ಯು 28, ತಳಿಗಳನ್ನು ವಿತರಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಅಶೋಕ್ ತಿಳಿಸಿದರು.

ರೈತರ ಬೇಡಿಕೆಗೆ ಅನುಗುಣವಾಗಿ 1275 ಕ್ವಿಂಟಾಲ್ ಬಿತ್ತನೆ ರಾಗಿ ಹಂಚಿಕೆ

ಕನ್ನಡಪ್ರಭ ವಾರ್ತೆ, ಕಡೂರು

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಡೂರು ಕೃಷಿ ಇಲಾಖೆಯಿಂದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ರಾಗಿ ತಳಿಗಳಾದ ಎಂ.ಆರ್ -1, ಎಂ.ಆರ್-06, ಎಂ.ಎಲ್ - 365, , ಜಿ.ಪಿ.ಯು 28, ತಳಿಗಳನ್ನು ವಿತರಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಅಶೋಕ್ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಈವರೆಗೂ 1275 ಕ್ವಿಂಟಾಲ್ ಬಿತ್ತನೆ ರಾಗಿ ಬೀಜವನ್ನು 21673 ರೈತರ ಬೇಡಿಕೆಗೆ ಅನುಗುಣವಾಗಿ ವಿತರಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ 2162 ಕ್ವಿಂಟಾಲ್ ರಾಗಿ ಬಿತ್ತನೆ ಬೀಜವನ್ನು ಒಟ್ಟು ೩೨,೬೫೬ ರೈತರಿಗೆ ವಿತರಣೆ ಮಾಡಿದ್ದು, ಸರ್ಕಾರದಿಂದ ರಾಗಿಗೆ ಉತ್ತಮ ಬೆಂಬಲ ಬೆಲೆ ಘೋಷಣೆಯಾಗಿ ರುವುದರಿಂದ ಹೆಚ್ಚಿನ ನಿರೀಕ್ಷೆ ಮಾಡಲಾಗಿದೆ. ರೈತರು ಆಧಾರ್ ಕಾರ್ಡ್, ಎಫ್.ಐ.ಡಿ. ನಂಬರ್ ಹಾಗೂ ಸೂಕ್ತ ದಾಖಲಾತಿ ಯನ್ನು ಸಲ್ಲಿಸಿ ಬಿತ್ತನೆ ಬೀಜ ಪಡೆಯಬಹುದು ಎಂಬ ಮಾಹಿತಿ ನೀಡಿದರು.

ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದಲ್ಲಿ ಅನುದಾನ ಲಭ್ಯವಿದ್ದು , ಅರ್ಜಿ ಸಲ್ಲಿಸಿದ ಮತ್ತು ಅರ್ಜಿ ಸಲ್ಲಿ ಸುವ ಅರ್ಹ ರೈತರಿಗೆ ಶೇ. 50 ರ ಸಹಾಯಧನದಲ್ಲಿ ಪವರ್ ಟಿಲ್ಲರ್, ಪವರ್ ವೀಡರ್, ಬ್ರಷ್ ಕಟರ್, ಚಾಪ್ ಕಟರ್, ರಾಗಿ ಕಟಾವು ರೀಪರ್, ಒಕ್ಕಣೆ ಯಂತ್ರ ಮತ್ತು ಟ್ರಾಕ್ಟರ್ ಚಾಲಿತ ಉಪಕರಣಗಳಾದ ರೋಟವೇಟರ್, ಕಲ್ಟಿವೇಟರ್, ಡಿಸ್ಕ್ ನೇಗಿಲು, ರಾಗಿ ಬಿತ್ತನೆ ಕೂರಿಗೆ, ಕೊಕನಟ್ ಶ್ರೆಡ್ಡರ್ (ಸಿಪ್ಪೆ /ಎಡೆ ಮಟ್ಟೆ ಪುಡಿ ಮಾಡುವ ಮಿಷನ್) ಮುಂತಾದವುಗಳನ್ನು ವಿತರಣೆ ಮಾಡುತ್ತಿದ್ದು, ಆಸಕ್ತ ರೈತರು ಇದರ ಪ್ರಯೋಜನ ಪಡೆಯಬಹುದು ಎಂದರು. ಕಡೂರು ತಾಲೂಕಿನ ಪ್ರಮುಖ ಬೆಳೆಯಾದ ರಾಗಿಗೆ ಆಗಸ್ಟ್-16 ರವರೆಗೆ ಬೆಳೆ ವಿಮಗೆ ಅವಕಾಶವಿದೆ. ಎಲ್ಲ ವರ್ಗದ ರೈತರು ತುಂತುರು ನೀರಾವರಿ ಘಟಕವನ್ನು ಶೇ. 90 ರ ರಿಯಾಯಿತಿ ದರದಲ್ಲಿ ಪಡೆಯಬಹುದು. ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ರಾಗಿ ಕ್ಲೀನಿಂಗ್ ಯಂತ್ರ , ಹಿಟ್ಟಿನ ಗಿರಣಿ, ರಾಗಿ ಪ್ಲೋರ್ ಮಿಲ್, ಸಣ್ಣ ಎಣ್ಣೆ ಗಾಣ ಯಂತ್ರ, ದಾಲ್ ಮೇಕಿಂಗ್ ಮಿಷನ್ ಯಂತ್ರಗಳನ್ನು ಶೇ. 50 ರ ಸಹಾಯಧನದಲ್ಲಿ ನೀಡಲಾಗುತ್ತಿದೆ.ಕೃಷಿ ಭಾಗ್ಯ ಯೋಜನೆಯಡಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಡೀಸೆಲ್ ಪಂಪ್ ಸೆಟ್ಟನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.80 ರ ಸಹಾಯಧನದಲ್ಲಿ ಪರಿಶಿಷ್ಟ ಜಾತಿ/ಪಂಗಡಕ್ಕೆ ಶೇ.90 ರ ಸಹಾಯಧನದಲ್ಲಿ ಅನುಷ್ಟಾನ ಗೊಳಿಸಲಾಗುತ್ತಿದೆ. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೆ ಶೇ.40 ಸಹಾಯಧನ, ಪರಿಶಿಷ್ಟ ಜಾತಿ/ ಪಂಗಡ ವರ್ಗದವರಿಗೆ ಶೇ. 50 ಸಹಾಯಧನ ನೀಡಲಾಗುತ್ತಿದೆ. ಆಸಕ್ತ ರೈತರು ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಇದರ ಪ್ರಯೋಜನ ಪಡೆಯ ಬಹುದು ಎಂದರು. 2025-26 ನೇ ಸಾಲಿನ ಬೆಳೆ ಸಮೀಕ್ಷೆ ಆರಂಭಗೊಂಡಿದ್ದು, ಎಲ್ಲ ರೈತರು ತಾವು ಬೆಳೆದಿರುವ ಬೆಳೆಗಳನ್ನು ಬೆಳೆ ಸಮೀಕ್ಷೆ ಆಪ್ ಮೂಲಕ ನೊಂದಾಯಿಸುವುದು. ನೊಂದಾಯಿತ ರೈತರಿಗೆ ಮಾತ್ರ ಬೆಂಬಲ ಬೆಲೆ ಪಡೆಯಲು ಸಾಧ್ಯ. ಪ್ರಕೃತಿ ವಿಕೋಪ ಗಳಾದ ಅತಿವೃಷ್ಟಿ ಮತ್ತು ಅನಾವೃಷ್ಟಿಯಲ್ಲಿ ಬೆಳೆ ನಷ್ಟ ಸಂಭವಿಸಿದಾಗ ಮತ್ತು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ಸರ್ಕಾರದಿಂದ ಪರಿಹಾರ ಪಡೆಯಲು ಬೆಳೆ ಸಮೀಕ್ಷೆಯಲ್ಲಿ ನೊಂದಾಯಿಸಿ ಕೊಂಡಿರುವುದು ಕಡ್ಡಾಯ ಎಂದು ತಿಳಿಸಿದ್ದಾರೆ.-- ಕೋಟ್‌--

ಮುಂಗಾರು ಆರಂಭವಾಗಿರುವುದರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದು, ಕೃಷಿ ಯಾಂತ್ರೀಕರಣ ಮತ್ತು ತುಂತುರು ನೀರಾವರಿ ಘಟಕದಲ್ಲಿ ಅನುದಾನವಿದ್ದು, ತಾಲೂಕಿನ ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿ ಭಾಗ್ಯವು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಆಗಿದ್ದು, ಇದು ಬಯಲು ಸೀಮೆಯಾದ ನಮ್ಮ ಕಡೂರು ತಾಲೂಕಿಗೆ ವರದಾನ. ರೈತರು ಹೆಚ್ಚಿನ ಪ್ರಯೋಜನ ಪಡೆಯಬೇಕು. ಪ್ರತಿಯೊಬ್ಬ ರೈತರು ರಾಗಿ ಬೆಳೆಗೆ ವಿಮೆ ಮಾಡಿಸಬೇಕು.

- ಶಾಸಕ ಕೆ.ಎಸ್.ಆನಂದ್.25ಕೆಕೆಡಿಯು1.ಶಾಸಕ ಕೆ.ಎಸ್.ಆನಂದ್.

25ಕೆಕೆಡಿಯು1ಎ.ಕಡೂರು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಅಶೋಕ್.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್