ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ತ್ಯಾಮಗೊಂಡ್ಲು ಹೋಬಳಿ ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯವಾಗಿ ಹಾಲು ವಿತರಣೆ ಮಾಡುವುದರ ಬಗ್ಗೆ ಸಭೆಯಲ್ಲಿ ಹೆಚ್ಚು ಚರ್ಚೆಯಾಗಿದೆ. ಬಮೂಲ್ ನಿರ್ದೇಶಕ ಬೈರೇಗೌಡರು ಮತ್ತು ಹಾಲು ಉತ್ಪಾದಕರ ಸಹಕಾರದಿಂದ ಬ್ಯಾಡರಹಳ್ಳಿ ಡೇರಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ. ಹೈನುಗಾರರಿಗೆ ಅಗತ್ಯ ಸೌಲಭ್ಯ ಗರಿಷ್ಠ ಪ್ರಮಾಣದಲ್ಲಿ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಡಳಿತ ಮಂಡಳಿ ಮಾಡುತ್ತಿದೆ ಎಂದು ತಿಳಿಸಿದರು.ಬಮೂಲ್ ನಿರ್ದೇಶಕ ಭವಾನಿಶಂಕರ್ ಬೈರೇಗೌಡ ಮಾತನಾಡಿ, ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ, ಐವರು ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್ ವಿತರಣೆ ಮತ್ತು 14 ಜನ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಿದ್ದು ಸ್ವಾಗತಾರ್ಹ ಕ್ರಮ ಎಂದು ಹೇಳಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಚಿಕ್ಕನರಸಯ್ಯ ನಿರ್ದೇಶಕರಾದ ರಾಜಶೇಖರ್, ಗಂಗಮಾರೇಗೌಡ, ವೆಂಕಟೇಶ್, ಶೈಲಜಾ, ಮಮತ, ನಾರಾಯಣ ಬಿ. ಆರ್., ರಾಧಾಕೃಷ್ಣ, ಕೃಷ್ಣಪ್ಪ, ರಾಮಕೃಷ್ಣ, ಶ್ರೀನಿವಾಸಮೂರ್ತಿ ಹಾಗೂ ಪ್ರಭಾರ ಕಾರ್ಯದರ್ಶಿ ಎನ್. ರಘುಕುಮಾರ, ಹಾಲು ಪರೀಕ್ಷಕ ಬಿ.ಕೆ. ನರಸಿಂಹ ಮೂರ್ತಿ, ವೀಣಾಶ್ರೀ, ಸಹಾಯಕಿ ರತ್ನಮ್ಮ ಮತ್ತು ಗ್ರಾಮದ ಮುಖಂಡರಾದ. ಮುದ್ದುಮಾರೇಗೌಡ, ದೊಡ್ಡನರಸಿಂಹಯ್ಯ, ಕೆಂಪೇಗೌಡ, ರಾಮಣ್ಣ, ಅನಂತಾರಾಮು, ಮುನಿಯಪ್ಪ, ರವಿಕುಮಾರ್, ಜಗದೀಶ್ ಗಂಗೆಗೌಡ ಸುರೇಶ್, ಹನುಮಂತರಾಜು, ಸಿದ್ದಪ್ಪ, ತೇಜಸ್, ಜಯರಾಮ್, ಗಂಗಹನುಮಕ್ಕ, ಪದ್ಮಾ, ಲಕ್ಷ್ಮಮ್ಮ, ಬಮೂಲ್ ವ್ಯವಸ್ಥಾಪಕ ಡಾ. ಆದರ್ಶ, ವಿಸ್ತರಣಾಧಿಕಾರಿ ಚಿಕ್ಕಮಾರೇಗೌಡ ಇನ್ನಿತರರಿದ್ದರು.