ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದುವ ಜೊತೆಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಿ ಸ್ವಾಭಾವಿಕವಾಗಿ ಮೃತಪಟ್ಟ ಗ್ರಾಹಕರಾದ ಸಾಬಣ್ಣ ಗಣಪೂರ ಹತ್ತಿಕುಣಿ ಹಾಗೂ ಲಕ್ಷ್ಮೀ ರಾಮಪ್ಪನೋರ ಹೊನಗೇರಾ ಅವರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜೀವನಜ್ಯೋತಿ ಭೀಮಾ ಯೋಜನೆ (ಪಿಎಂಜೆಜೆವೈ) ಅಡಿಯಲ್ಲಿ ಮಂಜೂರಾದ ತಲಾ ₹2 ಲಕ್ಷ ಚೆಕ್‌ಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶರಣಪ್ಪಗೌಡ ಮಾಲಿ ಪಾಟೀಲ್ ಹಾಗೂ ಬ್ಯಾಂಕ್‌ನ ವ್ಯವಸ್ಥಾಪಕಿ ರೇಣುಕಾ ಗಂಧಮ್ ವಿತರಿಸಿದರು
ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದುವ ಜೊತೆಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಿ ಸ್ವಾಭಾವಿಕವಾಗಿ ಮೃತಪಟ್ಟ ಗ್ರಾಹಕರಾದ ಸಾಬಣ್ಣ ಗಣಪೂರ ಹತ್ತಿಕುಣಿ ಹಾಗೂ ಲಕ್ಷ್ಮೀ ರಾಮಪ್ಪನೋರ ಹೊನಗೇರಾ ಅವರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜೀವನಜ್ಯೋತಿ ಭೀಮಾ ಯೋಜನೆ (ಪಿಎಂಜೆಜೆವೈ) ಅಡಿಯಲ್ಲಿ ಮಂಜೂರಾದ ತಲಾ ₹2 ಲಕ್ಷ ಚೆಕ್‌ಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶರಣಪ್ಪಗೌಡ ಮಾಲಿ ಪಾಟೀಲ್ ಹಾಗೂ ಬ್ಯಾಂಕ್‌ನ ವ್ಯವಸ್ಥಾಪಕಿ ರೇಣುಕಾ ಗಂಧಮ್ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶರಣಪ್ಪಗೌಡ ಮಾಲಿಪಾಟೀಲ್, ಕೇಂದ್ರ ಸರ್ಕಾರ ಗ್ರಾಹಕರ ಆರ್ಥಿಕ ವಹಿವಾಟು ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೆ ತಂದಿದೆ. ಜನರು ತಮ್ಮ ದೈನಂದಿನ ಕೆಲಸಗಳಲ್ಲಿ ದುಡಿಮೆಯಿಂದ ಸಂಪಾದಿಸಿದ ಸ್ವಲ್ಪ ಹಣವನ್ನು ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆದು ಹಣವನ್ನು ಜಮಾ ಮಾಡುವ ಜೊತೆಗೆ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಜೀವನಜ್ಯೋತಿ ಭೀಮಾ ಯೋಜನೆಯ ಸ್ವಲ್ಪ ವಿಮಾ ಕಂತನ್ನು ಪ್ರತಿ ವರ್ಷ ಪಾವತಿಸಬೇಕು, ಇದರಿಂದ ಕೆಲವು ಸಂದರ್ಭಗಳಲ್ಲಿ ಗ್ರಾಹಕರು ಆಕಸ್ಮಿಕ ಹಾಗೂ ಸ್ವಾಭಾವಿಕವಾಗಿ ಮೃತಪಟ್ಟರೇ ಅವರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಮೊತ್ತ ಸಿಗುತ್ತದೆ ಎಂದು ಹೇಳಿದರು.
ಪರಿಹಾರ ಚೆಕ್‌ಗಳನ್ನು ಪಡೆದ ಕುಟುಂಬಸ್ಥರು ಆ ಹಣವನ್ನು ದುಂದುವೆಚ್ಚ ಮಾಡದೇ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಬಳಸಿ, ಅದು ಸಾರ್ಥಕವಾಗಿ ಅವರು ವಿದ್ಯಾವಂತರಾಗಿ ಗುರಿ ತಲುಪಿ ಕುಟುಂಬಕ್ಕೆ ಆಸರೆಯಾಗುತ್ತಾರೆ ಎಂದು ತಿಳಿಸಿದರು.
ಬ್ಯಾಂಕ್‌ನ ವ್ಯವಸ್ಥಾಪಕಿ ರೇಣುಕಾ ಗಂಧಮ್ ಮಾತನಾಡಿ, ನಾವೂ ಈಗಾಗಲೇ ಈ ಪಿಎಂಜೆಜೆವೈ ಯೋಜನೆ ಲಾಭದ ಬಗ್ಗೆ ಪ್ರತಿಯೊಬ್ಬ ಗ್ರಾಹಕರಿಗೂ ತಿಳಿಸುತ್ತಿ ದ್ದೇವೆ, ಇನ್ನೂ ಹೆಚ್ಚು ಗ್ರಾಹಕರು ಈ ಯೋಜನೆಯ ವಿಮಾ ಕಂತಿನ ಹಣವನ್ನು ಪ್ರತಿ ವರ್ಷ ಪಾವತಿಸಬೇಕು, ಅವರ ಕಷ್ಟದಲ್ಲಿ ಆರ್ಥಿಕ ನೆರವು ಸಿಗಲಿದೆ ಎಂದರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕರಾದ ಮಧುಶಂಕರ ನಾಯ್ಡು, ಖಜಾಂಚಿ ಪರಶುರಾಮ, ಸಿಬ್ಬಂಧಿಗಳಾದ ಬಸವರಾಜ ಕೌಳೂರ, ಪೃಥ್ವಿರಾಜ ಹೊನಗೇರಾ, ಚಂದ್ರಲಿಂಗ ಮುರಾರಿ, ಶರಣಪ್ಪ ಶಂಕ್ರಪ್ಪನೋರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.