ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಸಂಸ್ಥೆಯ ಸ್ವತಂತ್ರ ಪಿಯು ಕಾಲೇಜು ಪ್ರಾಚಾರ್ಯ ಸಂತೋಷ ಕುಳ್ಳಿ ಮಾತನಾಡಿ, ಶಿಕ್ಷಣ ಕಲಿಯುವ ಆಸಕ್ತಿ ಇದ್ದರೂ ಕುಟುಂಬದಲ್ಲಿನ ಕಡು ಬಡತನ ಕೆಲವರಿಗೆ ಕಲಿಯಲು ಬಿಡುವುದಿಲ್ಲ. ಅಂತವರನ್ನು ಗುರುತಿಸಿ ಸಹಾಯಕ್ಕೆ ಮುಂದೆ ಬರಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಆ ದಿಸೆಯಲ್ಲಿ ಶಿಕ್ಷಕ ನೇಮಿನಾಥ ಜಮಖಂಡಿ ಅವರ ಕಾಳಜಿ ಶ್ಲಾಘನೀಯ ಎಂದು ಬಣ್ಣಿಸಿದರು. ವಿದ್ಯಾರ್ಥಿನಿ ಮಾಯಕ್ಕ ಮಾಂಗ ಮಾತನಾಡಿ, ಕಲಿಯಬೇಕೆಂಬ ಆಸೆ ಸಾಕಷ್ಟು ಇದೆ. ಆದರೆ ಮನೆಯಲ್ಲಿನ ಪರಿಸ್ಥಿತಿ ಚೆನ್ನಾಗಿಲ್ಲ. ನಾನು ಶಾಲೆ ಬಿಡಬೇಕೆಂದು ನಿರ್ಧರಿಸಿದ್ದೆ. ಆದರೆ ಜಮಖಂಡಿ ಶಿಕ್ಷಕರ ಪ್ರೋತ್ಸಾಹ ಮತ್ತು ಸಹಾಯದಿಂದ ಅನುಕೂಲಕರವಾಗಿದೆ ಎಂದರು. ಎಂ.ಪಿ. ಸವದತ್ತಿ, ಎಸ್.ಪಿ. ದೊಡವಾಡ ಇತರರು ಇದ್ದರು.