ಆಸ್ಪತ್ರೆ ಆವರಣದಲ್ಲಿ ವಿಶ್ರಾಂತಿ ಬೇಂಚ್‌, ವ್ಯಾಪಾರಿಗಳಿಗೆ ಛತ್ರಿ ವಿತರಣೆ

KannadaprabhaNewsNetwork |  
Published : Jun 18, 2024, 12:50 AM IST
17ಕೆಎಂಎನ್ ಡಿ15 | Kannada Prabha

ಸಾರಾಂಶ

ಫ್ರೆಂಚ್‌ರಾಕ್ಸ್ ಲಯನ್ಸ್ ಕ್ಲಬ್ ಆಫ್ ಪಾಂಡವಪುರ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 25 ಸಾವಿರ ರು. ವೆಚ್ಚದಲ್ಲಿ ಸಿಮೆಂಟ್ ನಿಂದ ನಿರ್ಮಿಸಿರುವ ವಿಶ್ರಾಂತಿ ಬೇಂಚ್‌ಗಳನ್ನು ಕ್ಲಬ್ ಅಧ್ಯಕ್ಷ ಟಿ.ಪಿ.ರೇವಣ್ಣ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಫ್ರೆಂಚ್‌ರಾಕ್ಸ್ ಲಯನ್ಸ್ ಕ್ಲಬ್ ಆಫ್ ಪಾಂಡವಪುರ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 25 ಸಾವಿರ ರು. ವೆಚ್ಚದಲ್ಲಿ ಸಿಮೆಂಟ್ ನಿಂದ ನಿರ್ಮಿಸಿರುವ ವಿಶ್ರಾಂತಿ ಬೇಂಚ್‌ಗಳನ್ನು ಕ್ಲಬ್ ಅಧ್ಯಕ್ಷ ಟಿ.ಪಿ.ರೇವಣ್ಣ ಉದ್ಘಾಟಿಸಿದರು.

ಬಳಿಕ ಕ್ಲಬ್ ಅಧ್ಯಕ್ಷ ಟಿ.ಪಿ.ರೇವಣ್ಣ ನೇತೃತ್ವದಲ್ಲಿ ಸೋಮವಾರ ಪಟ್ಟಣದ ಮಂಡ್ಯ ಸರ್ಕಲ್, ಹಳೇಬಸ್ ನಿಲ್ದಾಣದಲ್ಲಿ ರಸ್ತೆ ಬದಿಗಳಲ್ಲಿ ಹಣ್ಣು, ತರಕಾರಿ, ಹೂ, ನಿಂಬೆಹಣ್ಣು, ಎಲೆ-ಅಡಿಕೆ ವ್ಯಾಪಾರ ಮಾಡುವ ರಸ್ತೆ ಬದಿ ವ್ಯಾಪಾರಿಗಳಿಗೆ 40 ಸಾವಿರ ರು. ವೆಚ್ಚದಲ್ಲಿ 20ಕ್ಕೂ ಅಧಿಕ ಛತ್ರಿಗಳನ್ನು ವಿತರಿಸಿದರು.

ಕ್ಲಬ್ ಅಧ್ಯಕ್ಷ ಟಿ.ಪಿ.ರೇವಣ್ಣ ಮಾತನಾಡಿ, ಪಟ್ಟಣದ ಆಸ್ಪತ್ರೆ ಆವರಣದಲ್ಲಿ ರೋಗಿಗಳು ವಿಶ್ರಾಂತಿ ಪಡೆಯಲು ವಿಶ್ರಾಂತಿ ಬೇಚ್‌ಗಳನ್ನು ನಿರ್ಮಿಸಿ ಕೊಂಡುವಂತೆ ಇಲ್ಲಿನ ಆಡಳಿತ ವೈದ್ಯಾಧಿಕಾರಿಗಳು ಮನವಿ ಮಾಡಿದ್ದರು. ಅದರಂತೆ ಫ್ರೆಂಚ್‌ರಾಕ್ಸ್ ಲಯನ್ಸ್ ಕ್ಲಬ್ ಆಫ್ ಪಾಂಡವಪುರ ಸಂಸ್ಥೆ ವತಿಯಿಂದ 3 ವಿಶ್ರಾಂತಿ ಬೇಂಚ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಪಟ್ಟಣದ ಹಳೇಬಸ್ ನಿಲ್ದಾಣ, ಮಂಡ್ಯ ಸರ್ಕಲ್ ಸೇರಿದಂತೆ ವಿವಿಧೆಡೆ ರಸ್ತೆ ಬದಿಗಳಲ್ಲಿ ಬಿಸಿಲಿನಲ್ಲಿ ಕುಳಿತು ಹಣ್ಣು, ಹೂ, ತರಕಾರಿ, ನಿಂಬೆಹಣ್ಣು ಸೇರಿ ಇತರೆ ವಸ್ತುಗಳನ್ನು ವ್ಯಾಪಾರ ಮಾಡುವ ರಸ್ತೆ ಬದಿಯ ವ್ಯಾಪಾರಿಗಳಿಗೆ ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಕ್ಲಬ್ ವತಿಯಿಂದ ಅಂದಾಜು 40 ಸಾವಿರ ವೆಚ್ಚದಲ್ಲಿ 20 ಕ್ಕೂ ಅಧಿಕ ಛತ್ರಗಳನ್ನು ವಿತರಣೆ ಮಾಡುವ ಮೂಲಕ ವ್ಯಾಪಾರಿಗಳಿಗೆ ನೆರವಾಗಿದ್ದೇವೆ ಎಂದರು.

ಫ್ರೆಂಚ್‌ರಾಕ್ಸ್ ಲಯನ್ಸ್ ಕ್ಲಬ್ ನಿರಂತರವಾಗಿ ಹಲವಾರು ಸಮಾಜ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದು ಮುಂದೆಯೂ ಸಹ ಸಮಾಜಸೇವಾ ಕಾರ್‍ಯದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ತಿಳಿಸಿದರು.ಈ ವೇಳೆ ಫ್ರೆಂಚ್‌ರಾಕ್ಸ್ ಲಯನ್ಸ್ ಕ್ಲಬ್ ಕಾರ್‍ಯದರ್ಶಿ ಮಾಣಿಕ್ಯನಹಳ್ಳಿ ಅಶೋಕ್, ಖಜಾಂಚಿ ಆರ್.ದಿಲೀಪ್‌ಕುಮಾರ್, ಲಯನ್ಸ್ ಕ್ಲಬ್ ಸದಸ್ಯರಾದ ಆದರ್ಶ, ಕೆ.ಆರ್.ಚಂದನ್, ಭಾಸ್ಕರ್, ಬಿ.ಎನ್.ಯೋಗೇಶ್, ಡಾ.ಸಿ.ಎ.ಅರವಿಂದ್, ಪುಟ್ಟಬಸವೇಗೌಡ, ಮುಖಂಡರಾದ ಎಚ್.ಎನ್.ಮಂಜುನಾಥ್, ಗಜ, ನಟರಾಜು, ಪುಟ್ಟರಾಮು ಸೇರಿದಂತೆ ಹಲವರು ಹಾಜರಿದ್ದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ