ಮದ್ದೂರಿನಲ್ಲಿ ಪವರ್ ಮ್ಯಾನ್‌ಗಳಿಗೆ ಸುರಕ್ಷಿತ ಸಾಮಗ್ರಿ ವಿತರಣೆ

KannadaprabhaNewsNetwork |  
Published : May 02, 2025, 12:14 AM IST
1ಕೆಎಂಎನ್ ಡಿ26 | Kannada Prabha

ಸಾರಾಂಶ

ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ ಕಾರ್ಮಿಕರ ದಿನಾಚರಣೆ ಅಂಗವಾಗಿ ಇಡೀ ರಾಜ್ಯದಲ್ಲಿಯೇ ಪ್ರಪಥಮ ಬಾರಿಗೆ ಪವರ್ ಮ್ಯಾನ್ ಗಳಿಗೆ ಸುರಕ್ಷಿತ ಸಾಮಗ್ರಿ ವಿತರಣೆ ಮತ್ತು ಅಧಿಕಾರಿ ಹಾಗೂ ನೌಕರರಿಗೆ ಆರೋಗ್ಯ ವಿಮಾ ಯೋಜನೆಗೆ ವಿಧ್ಯುಕ್ತ ಚಾಲನೆ.

ಕನ್ನಡಪ್ರಭ ವಾರ್ತೆ ಮದ್ದೂರು

ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ ಕಾರ್ಮಿಕರ ದಿನಾಚರಣೆ ಅಂಗವಾಗಿ ಇಡೀ ರಾಜ್ಯದಲ್ಲಿಯೇ ಪ್ರಪಥಮ ಬಾರಿಗೆ ಪವರ್ ಮ್ಯಾನ್ ಗಳಿಗೆ ಸುರಕ್ಷಿತ ಸಾಮಗ್ರಿ ವಿತರಣೆ ಮತ್ತು ಅಧಿಕಾರಿ ಹಾಗೂ ನೌಕರರಿಗೆ ಆರೋಗ್ಯ ವಿಮಾ ಯೋಜನೆಗೆ ಗುರುವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.

ಪಟ್ಟಣದ ನಿಗಮದ ವಿಭಾಗೀಯ ಕಚೇರಿಯಲ್ಲಿ ಸೆಸ್ಕಾಂ ಅಧ್ಯಕ್ಷ, ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುನಿ ಗೋಪಾಲರಾಜು ಅವರು ಮೈಸೂರಿನ ಸೆಸ್ಕ್ ಕಚೇರಿಯಲ್ಲಿ ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮವನ್ನು ವರ್ಚೂವೆಲ್ ಮೂಲಕ ಪಟ್ಟಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

ಬಳಿಕ ವಿಭಾಗೀಯ ಕಚೇರಿಯಲ್ಲಿ ಸುಮಾರು 130 ಮಂದಿ ಪವರ್ ಮ್ಯಾನ್‌ಗಳಿಗೆ ವಿದ್ಯುತ್‌ ಅವಘಡ ರಕ್ಷಣಾ ಸಾಮಾಗ್ರಿ ಮತ್ತು 215 ಮಂದಿ ಅಧಿಕಾರಿಗಳು ಮತ್ತು ನೌಕರರಿಗೆ ಆರೋಗ್ಯ ವಿಮಾ ಕಾರ್ಡ್ ಗಳನ್ನು ವಿಭಾಗೀಯ ಕಚೇರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ರಮೇಶ್ ವಿತರಿಸಿದರು.

ಎಇಇ ರಮೇಶ್ ಮಾತನಾಡಿ, ಮಳೆ, ಗಾಳಿ ಸಂದರ್ಭದಲ್ಲಿ ವಿದ್ಯುತ್ ಸರಬರಾಜು ಸಮಸ್ಯೆ ಉಂಟಾದಾಗ ಪವರ್ ಮ್ಯಾನ್ ಗಳು ದುರಸ್ಥಿ ಕಾರ್ಯಕ್ಕೆ ತೆರಳುವಾಗ ಆದಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ನಿಗಮ ನೀಡಿರುವ ಸುರಕ್ಷಿತ ಸಾಮಗ್ರಿ ಉಪಯೋಗಿಸಿಕೊಂಡು ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದೇ ಎನ್ನುವುದನ್ನು ಖಚಿತ ಪಡಿಸಿಕೊಂಡ ದುರಸ್ಥಿ ಕಾರ್ಯ ಮಾಡಬೇಕು ಎಂದರು.

ಇತ್ತಿಚೀನ ದಿನಗಳಲ್ಲಿ ವಿದ್ಯುತ್ ಅವಘಡಗಳಲ್ಲಿ ಪವರ್ ಮ್ಯಾನ್‌ಗಳು ಮೃತ ಪಟ್ಟು ಮತ್ತು ಗಾಯಗೊಂಡಿರುವ ಅನೇಕ ಪ್ರಕರಣಗಳು ಜರುಗಿವೆ. ಇದರಿಂದ ತಮ್ಮ ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.

ವಿದ್ಯುತ್ ಪ್ರಸರಣ ನಿಗಮದ ಕಾರ್ಯಕಾರಿ ಸಮಿತಿ ಸದಸ್ಯ ಮಹದೇವು ಮಾತನಾಡಿ, ವಿದ್ಯುತ್ ಸುರಕ್ಷಿತ ಸಾಮಗ್ರಿ ಮತ್ತು ನೌಕರರ ಆರೋಗ್ಯ ವಿಮಾ ಕಾರ್ಡ್ ಜಾರಿಗೆ ತರುವಂತೆ ಹಕ್ಕೋತ್ತಾಯ ಮಂಡಿಸಲಾಗಿತ್ತು. ಆನಂತರ ನೌಕರರ ಸಂಘದ ಅಧ್ಯಕ್ಷ ಕೆ.ಬಲರಾಮ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವರಾಮ್ ನೇತೃತ್ವದಲ್ಲಿ ನಿಯೋಗ ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕ ಮುನಿ ಗೋಪಾಲರಾಜು ಅವರಿಗೆ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು.

ಮನವಿಗೆ ಸಕಾರಾತ್ಮಕ ಸ್ಪಂದಿಸಿ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತಂದಿದ್ದಾರೆ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ವಿಭಾಗೀಯ ಕಚೇರಿ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎನ್.ಶಿವಕುಮಾರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪ್ರದೀಪ್ ಕುಮಾರ್, ಎಸ್.ರಮೇಶ್, ಜೆ.ಮೋಹನ್, ಅನಿತಾ ಲೆಕ್ಕಾಧಿಕಾರಿ ಡಿ.ಸುನೀತಾ, ನೌಕರರ ಸಂಘದ ಪದಾಧಿಕಾರಿಗಳಾದ ಎಚ್.ಸಿ.ರಾಮಚಂದ್ರ, ಕೆ.ವಿ.ಸುರೇಶ್, ಚನ್ನೇಗೌಡ, ಸಿ.ಎಸ್.ಶ್ರೀಧರ್, ಸುಚಿತ್ ಕುಮಾರ್, ವೆಂಕಟೇಶ್, ಗಿರೀಶ್, ನಾಗರಾಜ್, ಪಿ.ವಾಸುದೇವು, ಎನ್.ಮಹದೇವಯ್ಯ, ಸೌಮ್ಯ, ಉಷಾ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ