ಕಾಂಗ್ರೆಸ್ ಸರಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿಲ್ಲ ವಿದ್ಯಾಗಿರಿ- ಸಂಪಿಗೆ ರಸ್ತೆ 10 ಕೋಟಿ ರು. ವೆಚ್ಚದಲ್ಲಿ ಅಗಲೀಕರಣಗೊಂಡು ಡಾಮರೀಕರಣಗೊಂಡಿದೆ. ಪುತ್ತಿಗೆ ದೇವಸ್ಥಾನದ ಬಳಿ ಹೊಸ ಸೇತುವೆ ನಿರ್ಮಾಣವಾಗುತ್ತಿದೆ. ಅಲ್ಲದೆ ಪ್ರತಿ ಶಾಸಕರಿಗೆ 10 ಕೋಟಿ ಅನುದಾನ ಸರಕಾರ ಮಂಜೂರು ಮಾಡಿದೆ ಎಂದರು.
ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಸುಮಾರು 300 ಅರ್ಹ ಫಲಾನುಭವಿಗಳಿಗೆ 94 ಸಿ ಮತ್ತು 94 ಸಿಸಿ ಹಕ್ಕುಪತ್ರಗಳನ್ನು ಜ.17ರಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿತರಿಸಲಿದ್ದಾರೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಸದಸ್ಯ ಮಿಥುನ್ ರೈ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 94 ಸಿ ಮತ್ತು 94 ಸಿಸಿ ಯಡಿ ಬಡವರಿಗೆ ಹಕ್ಕುಪತ್ರ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಹಕ್ಕುಪತ್ರ ವಿತರಿಸಲು ವಿಳಂಬವಾಗಿತ್ತು. ಪುರಸಭೆ ಸದಸ್ಯರು, ಪಂಚಾಯಿತಿ ಸದಸ್ಯರ ಪರಿಶ್ರಮದಿಂದ ಅರ್ಹ ಫಲಾನುಭವಿಗಳನ್ನು ರಾಜಕೀಯ ರಹಿತವಾಗಿ ಗುರುತಿಸಲಾಗಿದೆ ಎಂದರು. ಕಾಂಗ್ರೆಸ್ ಸರಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿಲ್ಲ ವಿದ್ಯಾಗಿರಿ- ಸಂಪಿಗೆ ರಸ್ತೆ 10 ಕೋಟಿ ರು. ವೆಚ್ಚದಲ್ಲಿ ಅಗಲೀಕರಣಗೊಂಡು ಡಾಮರೀಕರಣಗೊಂಡಿದೆ. ಪುತ್ತಿಗೆ ದೇವಸ್ಥಾನದ ಬಳಿ ಹೊಸ ಸೇತುವೆ ನಿರ್ಮಾಣವಾಗುತ್ತಿದೆ. ಅಲ್ಲದೆ ಪ್ರತಿ ಶಾಸಕರಿಗೆ 10 ಕೋಟಿ ಅನುದಾನ ಸರಕಾರ ಮಂಜೂರು ಮಾಡಿದೆ ಎಂದರು.
ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಜೈನ್, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ಸುರೇಶ್ ಪ್ರಭು, ಜೊಸ್ಸಿ ಮಿನೇಜಸ್ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.