ಎಚ್‌ಪಿಸಿಎಲ್ ಸಂಸ್ಥೆಯಿಂದ 8 ಸರ್ಕಾರಿ ಆಸ್ಪತ್ರೆಗೆ ಹಂಚಿಕೆನುಗ್ಗೇಹಳ್ಳಿ: ಮಂಗಳೂರು-ಹಾಸನ-ಮೈಸೂರು-ಬೆಂಗಳೂರು ಎಲ್‌ಪಿಜಿ ಪೈಪ್‌ಲೈನ್‌ನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್), ಯಡಿಯೂರು ವತಿಯಿಂದ ಹಾಸನ ಜಿಲ್ಲೆಯ 8 ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳ ಅನುಕೂಲಕ್ಕಾಗಿ 17 ಆಮ್ಲಜನ ಕೇಂದ್ರೀಕರಣ ನೀಡಲಾಗುತ್ತಿದೆ ಎಂದು ಎಂಎಚ್‌ಎಂಬಿ ಎಲ್‌ಪಿಜಿ ಪೈಪ್‌ಲೈನ್ ಜಿ. ಎಮ್.ವಿನೋದ್ ಕುಮಾರ್ ತಿಳಿಸಿದರು.
ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಲ್‌ಪಿಜಿ ಪೈಪ್‌ಲೈನ್‌ನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ನೀಡಲಾಗಿದ್ದ 3 ಆಮ್ಲಜನ ಕೇಂದ್ರೀಕರಣಗಳನ್ನು ವಿತರಣೆ ಮಾಡಿ ಮಾತನಾಡಿದರು.ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಅನುಕೂಲಕ್ಕಾಗಿ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಕಾರ್ಯಕ್ರಮದ ಅಡಿಯಲ್ಲಿ ಹಾಸನ, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿರುವ 11 ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುಮಾರು12 ಲಕ್ಷ ಮೌಲ್ಯದ 25 ಆಮ್ಲಜನ ಕೇಂದ್ರೀಕರಣಗಳನ್ನು ವಿತರಿಸಲಾಗುತ್ತಿದೆ ಎಂದರು.
ಚನ್ನರಾಯಪಟ್ಟಣ ವೃತ್ತ ಡಿವೈಎಸ್ಪಿ ರವಿ ಪ್ರಸಾದ್ ಪಿ. ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಅನೇಕ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದರೂ ಇತ್ತೀಚಿನ ವರ್ಷಗಳಲ್ಲಿ ಅತಿಯಾದ ವಾಯುಮಾಲಿನ್ಯದಿಂದ ಜನರಲ್ಲಿ ಶ್ವಾಸಕೋಶದ ಸಮಸ್ಯೆ ಹೆಚ್ಚಾಗುತ್ತಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಯಂತ್ರಗಳನ್ನು ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ. ರೋಗಿಗಳು ಇದರ ಅನುಕೂಲ ಪಡೆಯಬೇಕು ಎಂದು ತಿಳಿಸಿದರು.ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್ ಮಾತನಾಡಿದರು. ಎಂಎಚ್‌ಎಂಬಿ ಎಲ್‌ಪಿಜಿ ಪೈಪ್‌ಲೈನ್ (ಡಿಜಿಎಂ, ಯಡಿಯೂರು) ಬಿ. ವಿಜಯ ಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹರೀಶ್, ತಾಲೂಕು ಅಧ್ಯಕ್ಷ ರಾಮಚಂದ್ರು, ಸಿದ್ದಾರ್ಥ್, ಆದಿತ್ಯ ಪಗಾರಿಯ, ಮನೀಶ್, ಪ್ರವೀಣ್, ಹರೀಶ್ ಕುಮಾರ್, ನೇತ್ರತಜ್ಞ ಡಾ. ಶೇಖರ್, ಡಾ. ಮಂಜುಳಾ, ಡಾ.ಶ್ರೀಲತಾ ಹಾಜರಿದ್ದರು.ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಚ್‌ಪಿಸಿಎಲ್ ವತಿಯಿಂದ ನೀಡಲಾಗಿದ್ದ 3 ಆಮ್ಲಜನ ಕೇಂದ್ರೀಕರಣಗಳನ್ನು ಎಂಎಚ್‌ಎಂಬಿ ಎಲ್‌ಪಿಜಿ ಪೈಪ್‌ಲೈನ್ ಜಿ. ಎಮ್.ವಿನೋದ್ ಕುಮಾರ್ ವಿತರಣೆ ಮಾಡಿದರು.