ವಿಕಲಚೇತನರಿಗೆ ತ್ರಿಚಕ್ರ ಸ್ಕೂಟರ್‌ಗಳ ವಿತರಣೆ

KannadaprabhaNewsNetwork |  
Published : Dec 10, 2025, 12:45 AM IST
9ಎಚ್ಎಸ್ಎನ್19 : ಆಲೂರು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸಿಮೆಂಟ್ ಮಂಜು ರವರು ವಿಕಲಚೇತನರಿಗೆ ತ್ರಿಚಕ್ರ ಸ್ಕೂಟರ್‌ಗಳನ್ನು ವಿತರಣೆ ಮಾಡಿದರು.  | Kannada Prabha

ಸಾರಾಂಶ

ವಿಕಲಚೇತನರು ಇತರರಂತೆ ಸ್ವಾವಲಂಭಿಗಳಾಗಿ ಬದುಕಬೇಕು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು. ಮತ್ತೊಬ್ಬರನ್ನು ಆಶ್ರಯಿಸುವ ಬದಲು ತ್ರಿಚಕ್ರ ವಾಹನಗಳಲ್ಲಿ ಓಡಾಡಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲಿ ಎಂಬ ಉದ್ದೇಶದಿಂದ ವಾಹನಗಳನ್ನು ವಿತರಣೆ ಮಾಡಲಾಗಿದೆ. ವಾಹನಗಳು ಇವರ ಹೆಸರಿನಲ್ಲಿ ನೊಂದಾವಣಿಯಾಗಿರುವುದರಿಂದ, ಇನ್ನೊಬ್ಬರಿಗೆ ಬಳಸಲು ಕೊಡುವುದು ಅಪರಾಧವಾಗುತ್ತದೆ. ಸಮಾಜದಲ್ಲಿ ವಿಕಲಚೇತನರನ್ನು ಎಂದಿಗೂ ಅಪಹಾಸ್ಯ ಮಾಡಬಾರದು ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ವಿಕಲಚೇತನರು ಇತರರಂತೆ ಸ್ವಾವಲಂಭಿಗಳಾಗಿ ಬದುಕಬೇಕು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕಿನ 16 ವಿಕಲಚೇತನರಿಗೆ ತ್ರಿಚಕ್ರ ಸ್ಕೂಟರ್‌ಗಳನ್ನು ವಿತರಣೆ ಮಾಡಿ ಮಾತನಾಡಿ, ಸರ್ಕಾರದಿಂದ ವಿಕಲಚೇತನರಿಗೆಂದೆ ಬರುವ ಮೀಸಲು ಹಣವನ್ನು, ಅವರ ಇನ್ನಿತರೆ ಉಪಯೋಗಕ್ಕೆ ಬಳಸಬಹುದು. ಆದರೆ ಇಂದು ಡಿಜಿಟಲ್ ಯುಗ ಮುಂದುವರಿಯುತ್ತಿರುವುದರಿಂದ, ತಮ್ಮ ಚಟುವಟಿಕೆಗಳಿಗಾಗಿ ತಿರುಗಾಡುವ ಸಂದರ್ಭಗಳು ಎದುರಾಗುತ್ತದೆ. ಈ ಕಾರಣದಿಂದ ಮತ್ತೊಬ್ಬರನ್ನು ಆಶ್ರಯಿಸುವ ಬದಲು ತ್ರಿಚಕ್ರ ವಾಹನಗಳಲ್ಲಿ ಓಡಾಡಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲಿ ಎಂಬ ಉದ್ದೇಶದಿಂದ ವಾಹನಗಳನ್ನು ವಿತರಣೆ ಮಾಡಲಾಗಿದೆ. ವಾಹನಗಳು ಇವರ ಹೆಸರಿನಲ್ಲಿ ನೊಂದಾವಣಿಯಾಗಿರುವುದರಿಂದ, ಇನ್ನೊಬ್ಬರಿಗೆ ಬಳಸಲು ಕೊಡುವುದು ಅಪರಾಧವಾಗುತ್ತದೆ. ಸಮಾಜದಲ್ಲಿ ವಿಕಲಚೇತನರನ್ನು ಎಂದಿಗೂ ಅಪಹಾಸ್ಯ ಮಾಡಬಾರದು ಎಂದರು.

ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸುಬ್ರಹ್ಮಣ್ಯ, ಅಶೋಕ್ ಉಪಸ್ಥಿತರಿದ್ದರು. ವಾಹನಗಳನ್ನು ಪಡೆದುಕೊಂಡ ಫಲಾನುಭವಿಗಳು ಸ್ಥಳದಲ್ಲಿ ಸಿಹಿ ಹಂಚಿ ಸಂಭ್ರಮಿಸಿ ಶಾಸಕರಿಗೆ ಅಬಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ರಾಜ್ಯ ಎಲುಬು ಕೀಲು ವೈದ್ಯರ ಸಮ್ಮೇಳನ
ಫೆ.2 ರಂದು ವಿಟಿಯು ಘಟಿಕೋತ್ಸವ-2