ಕನ್ನಡಪ್ರಭ ವಾರ್ತೆ ಹನೂರು
ವಿಕಲಚೇತನ ಬಸವರಾಜ್ ಹಾಗೂ ಸ್ಪಂದನ ಮೇರಿ ಅವರಿಗೆ ಆರೋಗ್ಯ ಸೇವೆ ಮತ್ತು ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಇಲ್ಲದಿರುವ ಬಗ್ಗೆ ಗ್ರಾಮಲೆಕ್ಕಿಗ ಸುರೇಶ್ ತಹಸೀಲ್ದಾರ್ ಚೈತ್ರಾಗೆ ಗ್ರಾಮದಲ್ಲಿಯೇ ಆಧಾರ್ ನೋಂದಣಿ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ ಬಸವರಾಜ್, ಸಂಗನಮೇರಿಗೆ ಗ್ರಾಮದಲ್ಲಿಯೇ ಆಧಾರ್ ನೋಂದಣಿ ಮಾಡಲು ಆಧಾರ್ ಕಿಟ್ ಸಮೇತ ಗ್ರಾಮಕ್ಕೆ ಭೇಟಿ ನೀಡಿ ಆಧಾರ್ ನೋಂದಣಿ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆಧಾರ್ ನೋಂದಣೆಗೆ ತೊಂದರೆ ಅನುಭವಿಸುತ್ತಿರುವ ಅನಾರೋಗ್ಯದಿಂದ ಬಳಲುತ್ತಿರುವವರು, ವಿಕಲಚೇತನರು ಮಾಹಿತಿ ತಾಲೂಕು ಆಡಳಿತಕ್ಕೆ ತಿಳಿಸಿದರೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೆ ಕೂಡಲೇ ಗ್ರಾಮಗಳಲ್ಲಿಯೇ ಭೇಟಿ ನೀಡಿ ಆಧಾರ್ ನೋಂದಣಿ ಹಮ್ಮಿಕೊಳ್ಳಲಾಗುವುದು. ನಾಗರಿಕರು ಸದ್ಬಳಕೆ ಮಾಡಿಕೊಳ್ಳಿ ಎಂದು ಜಿಲ್ಲಾ ಆಧಾರ್ ನೋಂದಣಿ ಆಪರೇಟರ್ ನೇತ್ರಾವತಿ ಮನವಿ ಮಾಡಿದ್ದಾರೆ.