ವಿಶೇಷಚೇತನ ಮಕ್ಕಳಿಗೆ ಜಿಲ್ಲಾಡಳಿತದಿಂದ ಸೌಲಭ್ಯ ಕಲ್ಪಿಸಲು ಕ್ರಮ: ಡಿಸಿ ಕವಿತಾ ಎಸ್‌. ಮನ್ನಿಕೇರಿ

KannadaprabhaNewsNetwork |  
Published : Apr 08, 2026, 03:30 AM IST
ಫೋಟೋವಿವರ- (7ಎಚ್‌ಪಿಟಿ2)ಹೊಸಪೇಟೆಯ ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆಯ ಕಚೇರಿಯಲ್ಲಿ ವಿಶೇಷ ಚೇತನ ಮಕ್ಳಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸಾಧನ ಸಲಕರಣೆ ವಿತರಿಸಿದರು | Kannada Prabha

ಸಾರಾಂಶ

ಮಕ್ಕಳಲ್ಲಿ ಅಂಗವೈಕಲ್ಯ ಸಮಸ್ಯೆಗಳನ್ನು ತಡೆಗಟ್ಟಬೇಕಾದರೆ ಅತೀ ಹತ್ತಿರದ ಸಂಬಂಧದಲ್ಲಿ ಮದುವೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು.

ಹೊಸಪೇಟೆ: ಮಕ್ಕಳಲ್ಲಿ ಅಂಗವೈಕಲ್ಯ ಸಮಸ್ಯೆಗಳನ್ನು ತಡೆಗಟ್ಟಬೇಕಾದರೆ ಅತೀ ಹತ್ತಿರದ ಸಂಬಂಧದಲ್ಲಿ ಮದುವೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು.

ನಗರದ ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆ, ಅಜೀ೦ ಪ್ರೇಮ್‌ ಜಿ ಫೌ೦ಡೇಶನ್‌, ಎಪಿಡಿ ಸಂಸ್ಥೆ ಬೆಂಗಳೂರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ನಡೆದ ವಿಶೇಷ ಚೇತನ ಮಕ್ಳಳಿಗೆ ಉಚಿತ ಸಾಧನ ಸಲಕರಣೆ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ನಗರದ ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆಯಿಂದ ವಿಶೇಷ ಮಕ್ಕಳನ್ನು ನೋಡಿಕೊಳ್ಳುತ್ತಿರುವುದು ಒಳ್ಳೆಯ ಕೆಲಸ. ಧೈರ್ಯದಿಂದ ಮಕ್ಕಳನ್ನು ನೋಡಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಅಲ್ಲದೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ವಿಶೇಷ ಚೇತನರಿಗೆ ಇರುವಂತಹ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿಶೇಷ ಚೇತನ ಮಕ್ಕಳಿಗೆ ನೀಡಲು ಕ್ರಮಕೈಗೊಳ್ಳಲಾವುದು ಎಂದು ಹೇಳಿದರು.

ಸಾಧ್ಯ ಸಂಸ್ಥೆಯ ಸಂಸ್ಥಾಪಕರು ಮತ್ತು ಮುಖ್ಯಸ್ಥೆ ಆರತಿ ಕೆ.ಟಿ. ಮಾತನಾಡಿ, ಸಾಧ್ಯ ಸಂಸ್ಥೆಯು ಕಳೆದ 9 ವರ್ಷಗಳಿಂದ ವಿಶೇಷವಾಗಿ ಬುದ್ಧಿಮಾಂದ್ಯ ಮಕ್ಕಳಿಗಾಗಿ ವಸತಿ ಶಾಲೆ ಹಾಗೂ ವೃತ್ತಿ ತರಬೇತಿಗಳನ್ನು ನೀಡುತ್ತ, ಅವರ ಜೀವನ ಕೌಶಲ್ಯ ತರಬೇತಿಯ ನೀಡಿ ಅವರನ್ನು ಅಭಿವೃದ್ಧಿ ಪಡಿಸುವತ್ತ ಹಜ್ಜೆ ಹಾಕುತ್ತಿದೆ. 2025ರಿಂದ 2028ರ ವರೆಗೆ 0ದಿಂದ 8 ವರ್ಷದ ಒಳಗಿನ ಒಟ್ಟು 8000 ಮಕ್ಕಳ ಸ್ರೀನಿಂಗ್‌ ಮಾಡಿ ಅದರಲ್ಲಿ 400 ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ಅವರಿಗೆ ಬೇಕಾದ ಚಕಿತ್ಸೆ, ಥೆರಪಿ ಹಾಗೂ ವೃತ್ತಿ ತರಬೇತಿ ಕೊಡಿಸುವ ಮುಖಾಂತರ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಹೊಸಪೇಟೆ ತಾಲೂಕಿನ 14 ಗ್ರಾಮ ಪಂಚಾಯಿತಿಗಳು ಸೇರಿದಂತೆ, ಹೊಸಪೇಟೆಯ 35 ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಂಡು, ಈಗಾಗಲೆ ಕಳೆದ ಒಂದು ವರ್ಷದಲ್ಲಿ ಒಟ್ಟು 4257 ಮಕ್ಕಳ ಸ್ಕ್ರೀನಂಗ್‌ ಮಾಡಿ 285 ಮಕ್ಕಳನ್ನು ಪತ್ತೆ ಹಚ್ಚಿ ಅದರಲ್ಲಿ,61 ಮಕ್ಕಳಿಗೆ ಎ.ಪಿ.ಡಿ ಸಂಸ್ಥೆಯ ಸಹಯೋಗದೊಂದಿಗೆ ನ್ಯೂನತೆಗೆ ತಕ್ಕ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಮಾಂಜನೇಯ, ಎ.ಪಿ.ಎಫ್‌. ಸಂಸ್ಥೆಯ ತಾಲೂಕು ಸಂಯೋಜಕ ಎಸ್.‌ಬಿ. ಸಂಜಯ್‌, ಸಾಧ್ಯ ಸಂಸ್ಥೆಯ ಸದಸ್ಯರಾದ ಲಿಯಾಕತ್‌ ಖಾದ್ರಿ, ಉಮೇಶ್‌ ಭೂಸಿ, ವೀಣಾ ಕುಂಟೆ, ವೀಣಾ, ಆನಂದ್‌, ಶಂಕರ್‌, ಬೆಳ್ಳಪ್ಪ, ಸಾವಿತ್ರಿ, ಸರಸ್ವತಿ, ಹುಲಿಗೆಮ್ಮ, ಸಂಧ್ಯಾ ಅವರು ಪ್ರಾರ್ಥಿಸಿದರು.ಸಂಧ್ಯಾ ಕುಲಕರ್ಣಿ, ರತ್ನಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಪಾಲರ ವಜಾಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ
ದೇವಸ್ಥಾನದ ತೆಂಗಿನಕಾಯಿ ಟೆಂಡರಲ್ಲಿ ಅವ್ಯವಹಾರ?