ಕನ್ನಡಪ್ರಭ ವಾರ್ತೆ ಚನ್ನಗಿರಿ
ಶನಿವಾರ ಸಂಜೆ ಪಟ್ಟಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ್, ಕಾರ್ಯದರ್ಶಿ ಬದರೀನಾಥ್, ಖಜಾಂಚಿ ವಿರೇಶ್, ತಾಲೂಕಿನಿಂದ ಆಯ್ಕೆಯಾದ ಕಿರಣ್ ಕುಮಾರ್, ರಘುಪ್ರಸಾದ್ ಅವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವಿಸಲಾಯಿತು. ಗೌರವ ಸಮರ್ಪಣೆ ಸ್ವೀಕರಿಸಿದ ಬಳಿಕ ಮಂಜುನಾಥ್ ಮಾತನಾಡಿದರು.
ವೃತ್ತಿಪರವಾಗಿ ಕೆಲಸ ಮಾಡುವಂತಹ ಪತ್ರಕರ್ತರಿಗೆ ಯಾವುದೇ ಸಾಮಾಜಿಕ ಸಮಸ್ಯೆಗಳು ಎದುರಾದರೂ ಅದಕ್ಕೆ ಜಿಲ್ಲಾ ಸಂಘ ಬೆಂಬಲವಾಗಿರಲಿದೆ. ಮುಂದೆ ಬರುವಂತಹ ತಾಲೂಕು ಸಂಘದ ಚುನಾವಣೆಗೆ ಸನ್ನದ್ಧರಾಗಿರಬೇಕಿದೆ. ಕಾರ್ಯದರ್ಶಿ ಬದರೀನಾಥ್ ಮಾತನಾಡಿ, ಸಂಘದ ಬಲವರ್ಧನೆಗಾಗಿ ತಾಲೂಕು ಸಂಘದಲ್ಲಿ ಸಂಗ್ರಹವಾಗುವಂತಹ ಹಣವನ್ನು ಬ್ಯಾಂಕ್ ಮುಖಾಂತರವಾಗಿ ವ್ಯವಹರಿಸಿಕೊಂಡು ಸಂಘದ ಬಲವರ್ಧನೆ ಮಾಡಬೇಕೆಂದು ಹೇಳಿದರು.ಸಮಾರಂಭದಲ್ಲಿ ಪತ್ರಕರ್ತರಾದ ಬಾ.ರಾ.ಮಹೇಶ್, ಸತೀಶ್ ಪವಾರ್, ಟಿ.ಎನ್.ಜಗದೀಶ್, ಅಣ್ಣೋಜಿರಾವ್, ಸಂಘದ ಬೆಳವಣಿಗೆ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಹರೋಸಾಗರದ ಲಿಂಗರಾಜ್ ವಹಿಸಿದ್ದರು.
- - -
-16ಕೆಸಿಎನ್‌ಜಿ1.ಜೆಪಿಜಿ:ಚನ್ನಗಿರಿಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.