ಎಸ್.ಸಿ.ಪಿ, ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭೆ ಡಾ.ಎಂ.ವಿ.ವೆಂಕಟೇಶ್ ತಾಕೀತುಕನ್ನಡಪ್ರಭ ವಾರ್ತೆ ದಾವಣಗೆರೆ
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಲವು ಇಲಾಖೆಯವರು ವರ್ಷವಿಡಿ ಅನುದಾನ ಖರ್ಚು ಮಾಡದಿದ್ದರೂ ಮಾರ್ಚ್ ನಲ್ಲಿ ಶೇ 100 ರಷ್ಟು ಸಾಧನೆ ಮಾಡುತ್ತಾರೆ. ಆದರೆ ಇದಕ್ಕೆ ಅವಕಾಶ ನೀಡದೆ, ಕೊನೆಯಲ್ಲಿ ಖರ್ಚು ಮಾಡುವ ಇಲಾಖೆ ಅಧಿಕಾರಿಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ. ನೈಜ ಕಾರಣಗಳಿಲ್ಲದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈಗಾಗಲೇ ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆ ಅನುಮೋದನೆಯಾಗಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ವರ್ಷಾಂತ್ಯದಲ್ಲಿ ಚುನಾವಣೆ ಬರುವುದರಿಂದ ಟೆಂಡರ್ ಕರೆದು ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.ಬೆಸ್ಕಾಂ ಶೂನ್ಯ ಪ್ರಗತಿ: ಆರೋಗ್ಯ ಇಲಾಖೆ ಶೇ 87, ಆಯುಷ್ ಶೇ 35, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶೇ 64, ಜಲಸಂಪನ್ಮೂಲ ಇಲಾಖೆ ಶೇ 46 ಸಾಧಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಗೆ ರೂ.6 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದು ಅನುದಾನ ಬರಬೇಕಿದೆ ಎಂದಾಗ ನೀರಾವರಿ ಸೌಲಭ್ಯದ ಜೊತೆಗೆ ಅವರ ಜಮೀನುಗಳಿಗೆ ಅನುಕೂಲ ವಾಗುವಂತೆ ಸಣ್ಣ ಸಣ್ಣ ಕೆರೆ, ಚೆಕ್ ಡ್ಯಾಂ ನಿರ್ಮಾಣವನ್ನು ಜಲಸಂಪನ್ಮೂಲ ಇಲಾಖೆಯವರು ಮುಂದಾಗಬೇಕೆಂದರು. ನೀರಾವರಿ ಕೊನೆ ಭಾಗದ ಅನೇಕ ರೈತರು ನೀರು ತಲುಪುತ್ತಿಲ್ಲ ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಎಲ್ಲಾ ಇಲಾಖೆ ಎಸ್.ಸಿ.ಪಿ.ಯಿಂದ ಶೇ 72 ಮತ್ತು ಟಿ.ಎಸ್.ಪಿ.ಯಲ್ಲಿ ಶೇಕಡ 77 ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ ಶೇಕಡ 74.50 ರಷ್ಟು ಪ್ರಗತಿ ದಾಖಲಾಗಿದೆ. ಇದನ್ನು ಬರುವ ಡಿಸೆಂಬರ್ ವೇಳೆಗೆ ಶೇಕಡ 80 ಕ್ಕಿಂತಲೂ ಹೆಚ್ಚು ಸಾಧನೆ ಆಗಿರಬೇಕು ಎಂದರು.