ಜನತೆಯ ಕಣ್ಣಲ್ಲಿ ನೀರು ತರಿಸುತ್ತಿರುವ ಈರುಳ್ಳಿ ಬೆಲೆ

KannadaprabhaNewsNetwork |  
Published : Nov 17, 2023, 06:45 PM IST
ಸಿಕೆಬಿ-1 ಮಾರುಕಟ್ಟೆಯಲ್ಲಿ ಬಂದಿರುವ ಈರುಳ್ಳಿ ಸಿಕೆಬಿ-2 ಕರ್ನಾಟಕ ಜನ ಸೇನಾ ರೈತಸಂಘದ ಜಿಲ್ಲಾಧ್ಯಕ್ಷೆ ಸಿ.ಎನ್.ಸುಷ್ಮಾ ಶ್ರೀನಿವಾಸ್‌. | Kannada Prabha

ಸಾರಾಂಶ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಏರುಗತಿಯಲ್ಲಿದ್ದ ಈರುಳ್ಳಿ ಬೆಲೆ, ಇದೀಗ ಹಬ್ಬ ಕಳೆದರೂ ಇಳಿಮುಖವಾಗದೇ ಜನತೆಯ ಕಣ್ಣಲ್ಲಿ ನೀರು ತರಿಸುತ್ತಿದೆ. ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಕಳೆದ ಹಲವು ದಿನಗಳಿಂದ ಈರುಳ್ಳಿ ಬೆಲೆ ಏರುಗತಿಯಲ್ಲೇ ಸಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಈರುಳ್ಳಿ 50 ರಿಂದ 65 ರು. ಆಗಿದೆ. ಜತೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ 70 ರಿಂದ 80 ರು.ವರೆಗೂ ಮಾರಾಟವಾಗುತ್ತಿದೆ.

ಚಿಕ್ಕಬಳ್ಳಾಪುರ: ದೀಪಾವಳಿ ಹಬ್ಬದಲ್ಲೂ ಸಂದರ್ಭದಲ್ಲಿಯೂ ಏರುಗತಿಯಲ್ಲಿದ್ದ ಈರುಳ್ಳಿ ಬೆಲೆ, ಇದೀಗ ಹಬ್ಬ ಕಳೆದರೂ ಇಳಿಮುಖವಾಗದೇ ಜನತೆಯ ಕಣ್ಣಲ್ಲಿ ನೀರು ತರಿಸುತ್ತಿದೆ.

ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಕಳೆದ ಹಲವು ದಿನಗಳಿಂದ ಈರುಳ್ಳಿ ಬೆಲೆ ಏರುಗತಿಯಲ್ಲೇ ಸಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಈರುಳ್ಳಿ 50 ರಿಂದ 65 ರು. ಆಗಿದೆ. ಜತೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ 70 ರಿಂದ 80 ರು.ವರೆಗೂ ಮಾರಾಟವಾಗುತ್ತಿದೆ.

ಎಪಿಎಂಸಿಯಲ್ಲಿ ಮಹಾರಾಷ್ಟ್ರದ ನಾಗಪುರ, ನಾಸಿಕ್‌, ಪೂನಾ ಭಾಗದ ಹಳೆ ದಾಸ್ತಾನು ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 5000 ರು.ನಿಂದ 7 ಸಾವಿರ ರು. ವರೆಗೂ ಖರೀದಿಯಾಯಿತು. ಜತೆಗೆ ಮಧ್ಯಮ ಗಾತ್ರದ ಈರುಳ್ಳಿ ಪ್ರತಿ ಕೆ.ಜಿಗೆ 4,400 ರಿಂದ 4,600 ರು.ವರೆಗೂ ಮಾರಾಟವಾಯಿತು. ಸಾಧಾರಣ ಗಾತ್ರದ ಈರುಳ್ಳಿ 3,800 ರಿಂದ 4 ಸಾವಿರ ರು. ವರೆಗೂ ಖರೀದಿಯಾಯಿತು.

ಈ ಹಿಂದೆ ಚಿತ್ರದುರ್ಗ, ಹೊಸದುರ್ಗ,ಚಳ್ಳಕೆರೆ, ವಿಜಯಪುರ,ನಾಗಪುರ, ನಾಸಿಕ್‌, ಪೂನಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮತ್ತು ಸ್ಥಳೀಯವಾಗಿ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಆಗುತ್ತಿತ್ತು. ಆದರೆ, ರಾಜ್ಯದಲ್ಲಿ ಕಂಡು ಬಂದಿರುವ ಬರಗಾಲದಿಂದಾಗಿ ಈರುಳ್ಳಿ ಬೆಳೆ ರೈತರ ಕೈಸೇರಿಲ್ಲ. ಬೇಡಿಕೆಗಿಂತ ಪೂರೈಕೆ ಕಡಿಮೆಯಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಭಾಗದ ಈರುಳ್ಳಿಗೆ ಅವಲಂಬಿಸಬೇಕಾಗಿದೆ ಎಂದು ಹೋಲ್‌ಸೇಲ್‌ ಈರುಳ್ಳಿ ವ್ಯಾಪಾರಿಗಳು ಹೇಳುತ್ತಾರೆ.

ಹಬ್ಬದಲ್ಲಿ ಈರುಳ್ಳಿ ಬೆಲೆ ಇಳಿಯುವ ನಿರೀಕ್ಷೆಯಿತ್ತು ಮತ್ತು ಹಬ್ಬದ ನಂತರ ವಾದರೂ ಕಡಿಮೆಯಾಗಬಹುದು ಎಂದು ಕೊಂಡಿದ್ದೆವು. ಇಳಿಕೆಯೇ ಕಾಣಲಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಮಹಾರಾಷ್ಟ್ರದಿಂದ 30 ಟ್ರಕ್‌ ಈರುಳ್ಳಿ ಪೂರೈಕೆ:

ಜಿಲ್ಲೆಗೆ 30 ಟ್ರಕ್‌ ಈರುಳ್ಳಿ ಶನಿವಾರ ಪೂರೈಕೆ ಆಗಿದೆ. ನಾಗಪುರ, ನಾಸಿಕ್‌, ಪೂನಾ ಸೇರಿದಂತೆ ನಾನಾ ಭಾಗದಿಂದ 500ಕ್ಕೂ ಹೆಚ್ಚು ಟ್ರಕ್‌ಗಳಿಂದ ರಾಜ್ಯಕ್ಕೆ ಪೂರೈಕೆ ಆಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ 50 ರೂ. ಹೋಲ್‌ಸೇಲ್‌ ದರದಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಒಂದೊಂದು ರೀತಿಯ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಮಧ್ಯಮ ಗಾತ್ರದ ಈರುಳ್ಳಿ 70 ರು. ಜತೆಗೆ ಹಲವು ದಿನಗಳವರೆಗೆ ಬಾಳಿಕೆ ಬರುವಂತಹ ಉತ್ತಮ ಗುಣಮಟ್ಟದ ಈರುಳ್ಳಿ 80-90 ರು.ವರೆಗೂ ಮಾರಾಟ ಮಾಡಲಾಗುತ್ತಿದೆ ಎಂದು ಈರುಳ್ಳಿ ಸಗಟು ವ್ಯಾಪಾರಿ ವಿ,ಮೋಹನ್‌ ಹೇಳುತ್ತಾರೆ.ಹೊಸ ಈರುಳ್ಳಿ ಕ್ವಿಂಟಲ್‌ಗೆ 5 ಸಾವಿರ ರು:ಎಪಿಎಂಸಿ ಮಾರುಕಟ್ಟೆಯಲ್ಲಿ ಹೊಸ ಈರುಳ್ಳಿಗೂ ಬೇಡಿಕೆ ಕಂಡು ಬಂದಿದೆ. ಹೊರ ರಾಜ್ಯಗಳಿಂದ 50ಕ್ಕೂ ಅಧಿಕ ಟ್ರಕ್‌ಗಳಲ್ಲಿ ಹೊಸ ಈರುಳ್ಳಿ ಬೆಳೆ ಮಾರುಕಟ್ಟೆಗೆ ಪೂರೈಕೆ ಆಗಿದೆ. ಉತ್ತಮ ಗುಣಮಟ್ಟದ ಹೊಸ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 4,700 ರು.ನಿಂದ 5 ಸಾವಿರ ರು.ವರೆಗೆ ಖರೀದಿಯಾಯಿತು ಎಂದು ಎಪಿಎಂಸಿಯ ಹೋಲ್‌ಸೇಲ್‌ ಈರುಳ್ಳಿ ವ್ಯಾಪಾರಿ ವೆಂಕಟೇಶ್‌ ಮಾಹಿತಿ ನೀಡಿದರು. ಮಹಾರಾಷ್ಟ್ರದ ನಾಗಪುರದಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ. ಬೆಳೆ ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಹೊಸಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಹಲವು ದಿನಇದೇ ಪರಿಸ್ಥಿತಿ ಇರುವ ಸಾಧ್ಯತೆಯಿದೆ. ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಹೇಳಿಕೊಳ್ಳುವಷ್ಟು ಈರುಳ್ಳಿ ಪೂರೈಕೆ ಆಗುತ್ತಿಲ್ಲ ಎಂದು ಹೇಳಿದರು.ಈರುಳ್ಳಿ ಹಚ್ಚುವಾಗ ಕಣ್ಣಲ್ಲಿ ನೀರು ಬರುತ್ತದೆಯೋ ಇಲ್ಲವೂ ಗೊತ್ತಿಲ್ಲಾ ಆದರೆ ಈರುಳ್ಳಿ ದರ ಕೇಳಿದರೆ ಮಾತ್ರ ಕಣ್ನಲ್ಲಿ ನೀರು ಬರುತ್ತದೆ. ಬರ ಬಂದು ನಮ್ಮ ಭಾಗದಲ್ಲಿ ಈರುಳ್ಳಿ ಬೆಳೆದಿಲ್ಲಾ, ಬರ ಸೇರಿ ಮತ್ತಿತರ ಕಾರಣಗಳಿಂದ ಈಗ ಬೇಡಿಕೆಯಿದ್ದಷ್ಟು ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಪಿಎಂಸಿ ಸೇರಿ ಹಲವು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಿದೆ ಎಂದು ಕ.ಜ.ಸೇ.ರೈ.ಸಂ ಜಿಲ್ಲಾಧ್ಯಕ್ಷೆ, ಸಿ.ಎನ್.ಸುಷ್ಮಾ ಶ್ರೀನಿವಾಸ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕಾಲದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಾಗಲಿ
ಕಾರ್ಮಿಕ ದ್ರೋಹವನ್ನು ಸಹಿಸಲಾಗದು: ಬಿ.ಎಂ. ಭಟ್‌