-ಬಿರ್ಸಾ ಮುಂಡಾ ಅವರ 150ನೇ ಜಯಂತಿ ಕಾರ್ಯಕ್ರಮ । 7 ಸಾವಿರ ಆದಿವಾಸಿಗಳೊಂದಿಗೆ ಹೋರಾಡಿದ್ದ ವೀರಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬಿರ್ಸಾ ಮುಂಡಾ ಅವರ 150ನೇ ಜಯಂತಿ (ಜನ ಜಾತಿಯ ಗೌರವ ದಿವಸ್)ಯ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬ್ರಿಟಿಷರು ತಮ್ಮ ಬುಡಕಟ್ಟು ಜನಾಂಗದವರ ಮೇಲೆ ಶೋಷಣೆಗೆ ಮುಂದಾದಾಗ ಅವರ ಭೂಮಿ, ಆಚಾರ, ವಿಚಾರಗಳ ಮೇಲೆ ದೌರ್ಜನ್ಯ ಎಸೆಗುತ್ತಿದ್ದಾಗ, ಅದರ ವಿರುದ್ಧ ಸಿಡಿದ್ದೆದ್ದು ಅತಿ ಚಿಕ್ಕ ವಯಸ್ಸಿನಲ್ಲೇ ಏಳು ಸಾವಿರ ಆದಿವಾಸಿಗಳನ್ನು ಸಂಘಟಿಸಿ ಹೋರಾಟ ಮಾಡಿದ ಅಪ್ರತಿಮ ದೇಶ ಭಕ್ತರಾಗಿದ್ದರು ಎಂದು ಹೇಳಿದರು.ಎಷ್ಟು ವರ್ಷ ಬದುಕುತ್ತೇವೆ ಅನ್ನೋದು ಮಾತ್ರವಲ್ಲ ಜೀವನದಲ್ಲಿ ದೇಶಕ್ಕೆ, ಸಮಾಜಕ್ಕೆ ಏನು ಕೊಡುಗೆ, ಸೇವೆ ನೀಡಿದೆವು ಎನ್ನುವುದು ಮುಖ್ಯ. ಅತಿ ಕಡಿಮೆ ಜೀವತಾವಧಿಯಲ್ಲಿಯು ಮಹೋನ್ನತ ಸಾಧನೆ ಮಾಡಿ ಜನಮಾನಸದಲ್ಲಿ, ಇತಿಹಾಸದ ಪುಟಗಳಲ್ಲಿ ಸವಾರ್ಣಾಕ್ಷರಗಳಲ್ಲಿ ಕಂಗೊಳಿಸುತ್ತಿರುವ ಸ್ವಾಮಿ ವಿವೇಕಾನಂದರು, ಬಸವಣ್ಣ, ಸರ್ವಜ್ಞರು ನೀಡಿದ ಕೊಡುಗೆಗಳು ಈ ಭೂಮಿ ಮೇಲೆ ಚಿರಸ್ಥಾಯಿಯಾಗಿ ಇರಲಿವೆ.
ಅತಿ ಕಡಿಮೆ ಅವಧಿಯಲ್ಲಿ ಆದಿವಾಸಿಗಳ ಕಲ್ಯಾಣ ಕಾರ್ಯಗಳನ್ನು ಮಾಡಿದ ಬಿರ್ಸಾ ಅವರನ್ನು “ಭೂಮಿಯ ಪಿತಾಮಹ, ಭೂಮಿಯ ತಂದೆ, ಭೂಮಿಯ ರಕ್ಷಕ” ಎಂದು ಆ ಭಾಗದ ಜನರು ಕರೆದರು. ಇಂತಹ ಅಪ್ರತಿಮ ಹೋರಾಟಗಾರನ ನೆನಪಿಗಾಗಿ ಭಾರತ ಸರ್ಕಾರವು ಇವರ ಜಯಂತಿಯನ್ನು ಜನ ಜಾತಿಯ ಗೌರವ ದಿವಸ್ ಆಗಿ ಆಚರಣೆ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಆರ್.ಪ್ರವೀಣ್ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತೇಜಾನಂದ ರೆಡ್ಡಿ, ವಾಲ್ಮೀಕಿ ಸಂಘದ ಮುಖಂಡರಾದ ಗೌರವಾಯಪ್ಪ, ಮುನಿವೆಂಕಟಸ್ವಾಮಿ, ಮೇಲೂರು ಮಂಜುನಾಥ, ಅಧಿಕಾರಿಗಳು ಇದ್ದರು.ಸಿಕೆಬಿ-1 ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಬಿರ್ಸಾ ಮುಂಡಾ ಅವರ 150ನೇ ಜಯಂತಿ (ಜನ ಜಾತಿಯ ಗೌರವ ದಿವಸ್)ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಚಾಲನೆ ನೀಡಿದರು.