ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಮಾಹಿತಿ । ಸೆಪ್ಟೆಂಬರ್ 23 ರವರೆಗೆ ಹಕ್ಕು, ಆಕ್ಷೇಪಣೆಗೆ ಅವಕಾಶ -ಬರೋಬ್ಬರಿ 1,42,745 ಮಂದಿ ಮತಪಟ್ಟಿಯಿಂದ ಔಟ್!

KannadaprabhaNewsNetwork |  
Published : Aug 25, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

District Election Officer Venkatesh information. Rights, objections allowed till September 23

-ಜಿಲ್ಲೆಯ ಕರಡು ಮತದಾರರ ಪಟ್ಟಿ ಪ್ರಕಟ । 30,854 ಮಂದಿ ಮೃತ । 70,525 ಮಂದಿ ಶಾಶ್ವತ ವಲಸೆ । 21,537 ಡಬಲ್ ಎಂಟ್ರಿ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯ ಕರಡು ಮತದಾರ ಪಟ್ಟಿ ಪ್ರಕಟವಾಗಿದ್ದು 1,42,745 ಮಂದಿ ಮತದಾರರನ್ನು ಪಟ್ಟಿಯಿಂದ ಹೊರಗೆ ಹೋಗಿದ್ದಾರೆ. ಇದರಲ್ಲಿ 30,854 ಮಂದಿ ಮೃತ ಪಟ್ಟಿದ್ದರೆ, 70,525 ಮತದಾರರು ಶಾಶ್ವತ ವಲಸೆ ಹಾಗೂ 21,537 ಮಂದಿ ಡಬಲ್ ಎಂಟ್ರಿ ಆಗಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ. ವೆಂಕಟೇಶ್, ಜಿಲ್ಲೆಯಲ್ಲಿದ್ದ ಒಟ್ಟು 14,40,534 ಮತದಾರರ ಪೈಕಿ ಶೇ. 90.09 ರಷ್ಟು ಅಂದರೆ 12,97,789 ಮತದಾರರ ಮಾಹಿತಿ ಪರಿಶೀಲಿಸಿ ಕರಡು ಪಟ್ಟಿಗೆ ತರಲಾಗಿದೆ. ಕರಡು ಮತದಾರರ ಪಟ್ಟಿಯಿಂದ 1,42,745 ಮತದಾರರು ಹೊರಗುಳಿದಿದ್ದಾರೆ ಎಂದರು.

ಸೆಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರಿಂದ ಅರ್ಜಿ ಹಾಗೂ ಆಕ್ಷೇಪಣೆ ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳು, ಗ್ರಾಮ ಪಂಚಾಯಿತಿ ಕೇಂದ್ರಗಳು ಹಾಗೂ ಬಿಎಲ್‍ಒ ಕೇಂದ್ರಗಳಲ್ಲಿ ಒಟ್ಟು 106 ಜನ ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರಿನ ಕಾಗುಣಿತ, ವಿಳಾಸ ಸೇರಿದಂತೆ ಸಣ್ಣಪುಟ್ಟ ತಿದ್ದುಪಡಿಗಳಿರುವ ಸುಮಾರು 68,000 ಮತದಾರರಿದ್ದಾರೆ. ಇವರೆಲ್ಲರಿಗೂ ನೋಟಿಸ್ ನೀಡಿ, ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ಇಆರ್‌ಒ ಹಂತದಲ್ಲಿ ಕರೆಸಿ ಸೂಕ್ತ ದಾಖಲೆಗಳನ್ನು ಪಡೆದು ತಿದ್ದುಪಡಿ ಸರಿಪಡಿಸಲಾಗುವುದು ಎಂದರು.

ಈ ಹಿಂದೆ ಮನೆ ಮನೆ ಮ್ಯಾಪಿಂಗ್ ನಡೆಸಿದಾಗ ಸಿಗದಿರುವ, ಆದರೆ ಎನ್ಯುಮರೇಷನ್ ಫಾರ್ಮ್ ಸಲ್ಲಿಸಿದಾಗ ಪತ್ತೆಯಾಗಿರುವ 18,875 ನೋ ಮ್ಯಾಪಿಂಗ್ ಪ್ರಕರಣಗಳಿವೆ. ಇವರು ಹಿಂದೆ ಮ್ಯಾಪಿಂಗ್ ವೇಳೆ ಏಕೆ ಸಿಗಲಿಲ್ಲ? ಪ್ರಸ್ತುತ ಎಲ್ಲಿ ವಾಸವಿದ್ದಾರೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ನಾನೇ ಖುದ್ದಾಗಿ ನೋಟಿಸ್ ಜಾರಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರಿದ್ದರೆ ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಮತಗಟ್ಟೆ ಸಂಖ್ಯೆ 1764ಕ್ಕೆ: ಜಿಲ್ಲೆಯಲ್ಲಿ ಈ ಹಿಂದೆ 1661 ಮತಗಟ್ಟೆ ಕೇಂದ್ರಗಳಿದ್ದವು. 1,200ಕ್ಕಿಂತ ಹೆಚ್ಚು ಮತದಾರರಿರುವ ಕೇಂದ್ರಗಳನ್ನು ಗುರುತಿಸಿ, ಸುಲಭ ಮತದಾನಕ್ಕಾಗಿ 103 ಹೆಚ್ಚುವರಿ ಶಾಶ್ವತ ಮತದಾನ ಕೇಂದ್ರಗಳನ್ನು ನೂತನವಾಗಿ ಸ್ಥಾಪಿಸಲಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆ ಕೇಂದ್ರಗಳ ಸಂಖ್ಯೆ 1764ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರವಾರು ಇಆರ್‌ಓ/ಎಇಆರ್‌ಓಗಳನ್ನು ನೇಮಕ ಮಾಡಲಾಗಿದ್ದು, ಯಾವುದೇ ದೂರುಗಳಿದ್ದರೂ ತಾಲೂಕು ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತಹಶೀಲ್ದಾರ್ ಬೀಬಿ ಫಾತಿಮಾ, ಗ್ರೇಡ್-2 ತಹಶೀಲ್ದಾರ್ ಮಲ್ಲಿಕಾರ್ಜುನ ನಾಯಕ ಇದ್ದರು.

ಬಾಕ್ಸ್.... ಚಿತ್ರದುರ್ಗ ರಾಜ್ಯಕ್ಕೇ 5ನೇ ಸ್ಥಾನ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಎಎಸ್‍ಡಿಡಿಒ (ಮರಣ, ಶಾಶ್ವತ ವಲಸೆ, ಡಬಲ್ ಎಂಟ್ರಿ, ಗೈರು ಹಾಜರು ಹಾಗೂ ಇತರೆ) ಪ್ರಮಾಣ ಅತ್ಯಂತ ಕಡಿಮೆಯಿದೆ. ರಾಜ್ಯದ ಸರಾಸರಿ ಶೇ.20ಕ್ಕಿಂತ ಹೆಚ್ಚಿದ್ದರೆ, ನಮ್ಮ ಜಿಲ್ಲೆಯಲ್ಲಿ ಕೇವಲ ಶೇ.9.91 ರಷ್ಟು ಮಾತ್ರ ಎಎಸ್‍ಡಿಡಿಒ ಪಟ್ಟಿಯಲ್ಲಿದ್ದಾರೆ. ಎಎಸ್‍ಡಿಡಿಒ ಪಟ್ಟಿಯಲ್ಲಿ ಚಿತ್ರದುರ್ಗ ರಾಜ್ಯಕ್ಕೆ 5ನೇ ಸ್ಥಾನದಲ್ಲಿದ್ದು, ಅತ್ಯುತ್ತಮ ಗುಣಮಟ್ಟದ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.

----------------

ಪೋಟೋ ಕ್ಯಾಪ್ಸನ್

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಕೆ.ವೆಂಕಟೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕರಡು ಮತದಾರರ ಪಟ್ಟಿ ಸಿದ್ಧವಾಗಿರುವುದರ ಕುರಿತು ಮಾಹಿತಿ ನೀಡಿದರು.

----ಫೋಟೋ ಪೈಲ್ ನೇಮ್-24 ಸಿಟಿಡಿ 1--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಫುರ ಜಿಲ್ಲೇಲಿ 9,44,623 ಮತದಾರರು
ಕರಾಟೆ ಇನ್ನೊಬ್ಬರ ಮೇಲಿನ ದಾಳಿಗೆ ಉಪಯೋಗಿಸುವಂಥ ಕಲೆಯಲ್ಲ: ಪಿ. ವೈ.ಶಿಹಾನ್ ನಾಸಿರುದ್ದೀನ್