,87714 ಮಂದಿಗೆ ನೋಟಿಸ್ । 12 ದಾಖಲೆಗಳ ಪೈಕಿ ಒಂದನ್ನು ಸಲ್ಲಿಸದಿದ್ದರೆ, ಮತದಾರ ಪಟ್ಟಿಯಿಂದ ಹೊರಗೆ
ಕಾಫಿನಾಡು ಚಿಕ್ಕಮಗಳೂರಿನ ಐದು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 96,715 ಮತದಾರರನ್ನು ಮತದಾರ ಪಟ್ಟಿಯಿಂದ ಕೈಬಿಟ್ಟು ಕರಡು ಮತದಾರ ಪಟ್ಟಿ ಪ್ರಕಟಿಸಿರುವ ಚುನಾವಣಾ ಆಯೋಗ ಇನ್ನೂ 87,714 ಮಂದಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಕಳೆದ ಒಂದೂವರೆ ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ. ಕರಡು ಮತದಾರ ಪಟ್ಟಿ ಪ್ರಕಟಿಸುವ ವೇಳೆ ಮೃತಪಟ್ಟವರು, ಮತ್ತೊಂದು ವಿಧಾನ ಸಭಾ ಕ್ಷೇತ್ರದಲ್ಲಿ ಹೆಸರು ಹೊಂದಿರುವವರು, ಶಾಶ್ವತವಾಗಿ ಬೇರೆಕಡೆ ಸ್ಥಳಾಂತರಗೊಂಡಿರುವವರು, ನಾಪತ್ತೆಯಾದವರು ಸೇರಿದಂತೆ 96,715 ಮಂದಿಯನ್ನು ಮತದಾರ ಪಟ್ಟಿಯಿಂದ ಕೈಬಿಟ್ಟು ಕರಡು ಮತದಾರ ಪಟ್ಟಿ ಪ್ರಕಟಿಸಿದೆ. ಈ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ಸೆ.23ರ ವರೆಗೆ ಅವಕಾಶ ನೀಡಲಾಗಿದೆ.ಇದರೊಂದಿಗೆ ಇನ್ನೂ 87,714 ಮಂದಿಗೆ ನೋಟಿಸ್ ನೀಡುವುದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೋಟಿಸ್ ಪಡೆದ ಮತ ದಾರರ ಈಗಾಗಲೇ ಚುನಾವಣಾ ಆಯೋಗ ಸೂಚಿಸಿದ 12 ದಾಖಲೆಗಳ ಪೈಕಿ ಒಂದು ದಾಖಲೆ ಸಲ್ಲಿಸದಿದ್ದರೆ, ಮತದಾರ ಪಟ್ಟಿಯಿಂದ ಕೈಬಿಡಲಾಗುತ್ತದೆ.
ಐದು ವಿಧಾನಸಭಾ ಕ್ಷೇತ್ರದ ಪೈಕಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ಅತಿ ಹೆಚ್ಚು 31,720 ಮಂದಿಗೆ ನೋಟಿಸ್ ನೀಡಲಾಗುತ್ತಿದೆ. ಉಳಿದಂತೆ ಕಡೂರು 22,927, ತರೀಕೆರೆ 18,570, ಶೃಂಗೇರಿ 8,918 ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರದ 5,579 ಮಂದಿಗೆ ನೋಟಿಸ್ ನೀಡಲಾಗುತ್ತಿದೆ. ಇನ್ನೂ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್-೨೦೨೬) ಸಂಬಂಧ ಸೋಮವಾರ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು.
ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಇಸಿಐ ನೆಟ್ ಅಥವಾ ಎನ್‌ವಿಎಸ್‌ಪಿ ಫೋರ್ಟಲ್ ಮೂಲಕವೂ ಸಲ್ಲಿಸಬಹುದಾಗಿದೆ. ಫಾರ್ಮ್-೬ ಮತ್ತು ಫಾರ್ಮ್-೮ ಜೊತೆಗೆ ಸ್ವಯಂ ಘೋಷಣಾ ಪತ್ರ ನೀಡುವುದು ಕಡ್ಡಾಯವಾಗಿದೆ ಎಂದು ಹೇಳಿದರು.ಸ್ವೀಕೃತವಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲು ಅಕ್ಟೋಬರ್ 22ರವರೆಗೆ ಕಾಲಾ ವಕಾಶವಿದ್ದು, ಅಗತ್ಯ ವಿಚಾರಣೆಗಳನ್ನು ಪೂರ್ಣಗೊಳಿಸಿದ ನಂತರ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.ನೋಟಿಸ್ ಪಡೆದ ಮತದಾರರ ವಿಚಾರಣೆ ನಡೆಸುವುದಕ್ಕೆ ಹತ್ತಿರದ ಗ್ರಾಪಂ, ಶಾಲಾ ಕಟ್ಟಡ ಅಥವಾ ಸರ್ಕಾರಿ ಕಟ್ಟಡ ಗಳಲ್ಲೇ ವಿಚಾರಣೆ ನಡೆಸಲು ಅನುಕೂಲವಾಗುವಂತೆ 139 ಹೆಚ್ಚುವರಿ ‘ಎಇಆರ್‌ಒ’ಗಳ ನೇಮಕಕ್ಕೆ ಸಿಇಒ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ತಕ್ಷಣ ಈ ಸ್ಥಳೀಯ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದರು.ಅರ್ಜಿಗಳಿಗೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿಗಳು ಹಾಗೂ ಹೆಚ್ಚುವರಿ ಮತದಾರರ ಅರ್ಜಿದಾರರು ಸಲ್ಲಿಸುವ ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ನೀಡಲಾದ ಪ್ರಮಾಣಪತ್ರ ಸೇರಿದಂತೆ ಯಾವುದೇ ಪ್ರಮುಖ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಆನ್‌ಲೈನ್ ಮೂಲಕವೇ ಪರಿಶೀಲಿಸಿ, ನೈಜತೆ ಖಚಿತಪಡಿಸಿಕೊಂಡ ನಂತರವೇ ಡಿಒ ಹಂತದಿಂದ ಅನುಮೋದನೆ ನೀಡಲಾಗುವುದು. ಈ ಅನುಮೋದನೆಯ ಆಧಾರದ ಮೇಲೆ ಇಆರ್‌ಒ ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಹಕ್ಕುಗಳನ್ನು ರಕ್ಷಿಸಲು ಹಾಗೂ ಪಾರದರ್ಶಕತೆ ತರಲು ಎರಡು ಹಂತದ ಮೇಲ್ಮನವಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಆರೊ ಅಥವಾ ಅಡಿಷನಲ್ ಇಆರ್‌ಒ ಕೈಗೊಳ್ಳುವ ತೀರ್ಮಾನದ ವಿರುದ್ಧ ಅಸಮಾ ಧಾನವಿದ್ದರೆ ಮತದಾರರು ಜಿಲ್ಲಾ ಚುನಾವಣಾಧಿಕಾರಿಗೆ ಮೊದಲ ಹಂತದ ಮೇಲ್ಮನವಿ ಸಲ್ಲಿಸಬಹುದು. ಹಾಗೆಯೇ ಜಿಲ್ಲಾ ಚುನಾವಣಾಧಿಕಾರಿಗಳ ತೀರ್ಮಾನದ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಎರಡನೇ ಹಂತದ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.ಈ ವೇಳೆ ಜಿ.ಪಂ.ಸಿಇಒ ಎಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಇದ್ದರು.-- ಬಾಕ್ಸ್---
ವಿಧಾನಸಭಾ ಕ್ಷೇತ್ರಕರಡು ಪಟ್ಟಿಯಿಂದ ಡಿಲೀಟ್ ಸಂಖ್ಯೆ ಎಷ್ಟು ಮಂದಿಗೆ ನೋಟಿಸ್
ಒಟ್ಟು96,71587,714