ಕೊಳ್ಳೇಗಾಲ: ಸಮಾಜ ಸೇವೆಯೇ ರೋಟರಿಯ ಮುಖ್ಯ ಗುರಿಯಾಗಿದ್ದು ಕೊಳ್ಳೇಗಾಲ ರೋಟರಿ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ರೋಟರಿಯ ಸಂಸ್ಥೆಯ 3181ರ ಜಿಲ್ಲಾ ಗವರ್ನರ್ ಹೆಚ್.ಆರ್. ಕೇಶವ್ ಪ್ರಶಂಸೆ ವ್ಯಕ್ತಪಡಿಸಿದರು. ಹಲವಾರು ವರ್ಷಗಳಿಂದಲೂ ರೋಟರಿ ದೇಶಾದ್ಯಂತ ಸಮಾಜ ಮುಖಿ ಚಿಂತನೆಗಳಡಿ ಕಾರ್ಯನಿರ್ವಹಿಸುತ್ತಿದೆ. ಅದರ ಗುರಿಯಂತೆ ಕೊಳ್ಳೇಗಾಲ ಸಂಸ್ಥೆಯೂ ಇಂದು ನಾನಾ ಸೇವಾ ಕಾರ್ಯಕ್ರಮ ಅಯೋಜಿಸಿದೆ. ಚಿಲಕವಾಡಿ ಅಂಗನವಾಡಿ ಕೇಂದ್ರದ ನವೀಕರಣಕ್ಕೆ ಚಾಲನೆ ನೀಡಿದ್ದು ಬಾಲಸ್ನೇಹಿ ಪೇಂಟಿಂಗ್ ವ್ಯವಸ್ಥೆ ಪರಿಶೀಲಿಸಿದ್ದೇನೆ. ಜೊತೆಗೆ ಅಂಗನವಾಡಿಗೆ ಚೇರ್ ಮತ್ತು ಆಟಿಕೆಗಳನ್ನು ವಿತರಿಸಲಾಗಿದೆ ಎಂದರು.
ಎಸ್‌ಡಿಎ ವಾಕ್ ಮತ್ತು ಶ್ರವಣ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ದಿನನಿತ್ಯದ ಬಳಕೆ ವಸ್ತುಗಳನ್ನು ನೀಡಲಾಗಿದೆ. ಚೆನ್ನಾಲಿಂಗನಹಳ್ಳಿ ಶಾಲೆಗೆ ದ್ವನಿವರ್ಧಕ, ದೊಡ್ಡಿಂದುವಾಡಿ ಪ್ರೌಢಶಾಲೆಗೆ ಸೀಲಿಂಗ್ ಫ್ಯಾನ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಾರ ಮೂಳೆಗೆ ಸೀಲಿಂಗ್ ಫ್ಯಾನ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಾಪು ನಗರಕ್ಕೆ ಸಮವಸ್ತ್ರ, ಸರ್ಕಾರಿ ಶಾಲೆ ಚೆಲುವನಹಳ್ಳಿಗೆ ಶೂ, ತಟ್ಟೆಲೋಟ, ಸರ್ಕಾರಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಗೆ 100 ತಟ್ಟೆ 100 ಲೋಟ, ಈದ್ಗಾ ಮೊಹಲ್ಲಾ ಅಂಗನವಾಡಿಗೆ ಕುರ್ಚಿಗಳು ಮತ್ತೆ ಆಟಿಕೆಗಳು, ಅಂಗನವಾಡಿ ಕೇಂದ್ರ ಕೊಂಗರಹಳ್ಳಿಗೆ ಕುರ್ಚಿ ,ಆಟಿಕೆಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲೂ ಸಹಾ ಪದಾಧಿಕಾರಿಗಳು ಸೇವಾ ಮುಖಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ರೋಟರಿ ಗುರಿ ಸಾಧಿಸಲು ಸಹಕರಿಸಬೇಕು ಎಂದರು.ಈ ವೇಳೆ ರೋಟರಿ ಸಂಸ್ಥೆಯ ಅದ್ಯಕ್ಷ ನಂದೀಶ್, ಅಸಿಸ್ಟೆಂಟ್ ಗವರ್ನರ್ ಪ್ರಕಾಶ, ಬಸವರಾಜು ಕಾರ್ಯದರ್ಶಿ ಜೆ ಕುಮಾರಸ್ವಾಮಿ, ಸರಸ್ವತಿ ಹೊನ್ನಪ್ಪ, ಹರಿ ಲಕ್ಷ್ಮಿ, ನರೇಂದ್ರನಾಥ್ ಇದ್ದರು.