(ಮಿಡಲ್‌)ರೋಟರಿ ಕ್ಲಬ್‌ನಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

KannadaprabhaNewsNetwork |  
Published : Aug 20, 2024, 12:56 AM IST

ಸಾರಾಂಶ

ಬೀದರ್‌ನ ಎಸ್ಆರ್‌ಎಸ್ ಫಂಕ್ಷನ್ ಹಾಲನಲ್ಲಿ ಭಾನುವಾರ ರೋಟರಿ ಕ್ಲಬ್‌ ಆಫ್‌ ಬೀದರ್‌ ಸಿಲ್ವರ್‌ ಸ್ಟಾರ್‌ ವತಿಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ನಗರದ ಎಸ್ಆರ್‌ಎಸ್ ಫಂಕ್ಷನ್ ಹಾಲ್‌ನಲ್ಲಿ ರೋಟರಿ ಕ್ಲಬ್‌ ಆಫ್‌ ಬೀದರ್‌ ಸಿಲ್ವರ್‌ ಸ್ಟಾರ್‌ ವತಿಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದ್ದು, ನಗರದ ವಿವಿಧ ಶಾಲೆಗಳ ಸುಮಾರು 450 ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದು ಕ್ಲಬ್‌ ನ ಕಾರ್ಯದರ್ಶಿ ಪೂಜಾ ಜಾರ್ಜ ತಿಳಿಸಿದ್ದಾರೆ.

ಜಂಟಿ ಕಾರ್ಯದರ್ಶಿ ಸ್ಪೂರ್ತಿ ಧನ್ನೂರ್‌ ಮಾತನಾಡಿ, ನಮ್ಮ ದೇಶದಲ್ಲಿ ನಸಿಸುತ್ತಿರುವ ಅರಣ್ಯ ಪ್ರದೇಶವನ್ನು ಮತ್ತು ಇಂದಿನ ಜನತೆಗೆ ಪರಿಸರ ಜಾಗೃತಿ ಮತ್ತು ಮರಗಳನ್ನು ನೆಡುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಆ. 24ರಂದು ಬೆಳಗ್ಗೆ ನಗರದ ಬರೀದ್‌ ಶಾಹಿಯಿಂದ ಕನ್ನಾಂಡಾಬೆ ರೋಟರಿ ವೃತ್ತದ ವರೆಗೆ ವೃಕ್ಷೋತ್ಥಾನ ವಾಕ್‌ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಭಾಗವಹಿಸಿವಂತೆ ಮನವಿ ಮಾಡಿದರು.

ಭಾನುವಾರ ಎಲ್ಲಾ ರೋಟರಿಗಳ ಸಹಯೋಗದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಿದ್ದು, ಸ್ಪರ್ಧೆಯಲ್ಲಿ ಭಾಗಿಯಾಗಿದ ಮಕ್ಕಳಿಗೆ ನವೀನ್‌ ಗೋಯಲ್‌ ಮತ್ತು ಭಾವೇಶ ಪಟೇಲ್‌ ಪೇಟಿಂಗ್‌ ಕಿಟ್‌ಗಳನ್ನು ನೀಡಿದ್ದು, ವಿಜೇತರಿಗೆ ಅ.25ರಂದು ನಡೆಯುವ ಸೆಮಿನಾರ್‌ನಲ್ಲಿ ನಗದು ಬಹುಮಾನ ಮತ್ತು ಪದಕಗಳನ್ನು ನೀಡಲು ನಿರ್ಧಿಸಲಾಗಿದೆ.

ಸ್ಪರ್ಧೆಯ ಪ್ರಾಯೋಜಕತ್ವವನ್ನು ಅನಂದ್‌ ಕೋಟರ್ಕಿ ವಹಿಸಿಕೊಂಡಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಖಜಾಂಚಿ ಅಮಯ್‌ ಸಿಂಧೋಲ್‌ ಮತ್ತು ಉಪಾಧ್ಯಕ್ಷ ಅದೀಶ್‌ ಅರ್‌ ವಾಲಿ ಅವರು ಫೆಲೋಶಿಪ್ ಮಾಡಿದರು.

*24ರಂದು ವೃಕ್ಷಾರೋಹಣ: ರೋಟರಿ ಕಲ್ಯಾಣ ವಲಯದಿಂದ ಅ.24ಕ್ಕೆ ಪರಿಸರ ಸಂರಕ್ಷಣೆ ಜಾಗೃತಿ ಹಾಗೂ ಮರಗಳನ್ನು ನೆಡುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ವೃಕ್ಷಾರೋಹಣ ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಮೂರು ರೋಟರಿಗಳು ಚಿತ್ರಕಲೆಗಳ ಮೌಲ್ಯಮಾಪನ ಮಾಡಲಿದ್ದು, ಅಂದು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದು ಕ್ಲಬ್‌ ನ ಸಲಹೆಗಾರರಾದ ಬಸವರಾಜ್‌ ಧನ್ನೂರ್‌ ತಿಳಿಸಿದ್ದಾರೆ.

ಈ ವೇಳೆ ಜಿಲ್ಲಾ ಮಟ್ಟದ ಸದಸ್ಯತ್ವ ಸೆಮಿನಾರ್‌ ಸಭೆಯ ಅಧ್ಯಕ್ಷರಾದ ಹಾವಶೆಟ್ಟಿ ಪಾಟೀಲ್‌, ರೋಟರಿ ಕ್ಲಬ್‌ ನ ಉಪಾಧ್ಯಕ್ಷರಾದ ಅದೀಶ್‌ ಅರ್‌ ವಾಲಿ, ಕಾರ್ಯದರ್ಶಿ ಪೂಜಾ ಜಾರ್ಜ, ಜಂಟಿ ಕಾರ್ಯದರ್ಶಿ ಸ್ಪೂರ್ತಿ ಧನ್ನೂರ್‌, ಖಜಾಂಚಿ ಅಮೆ ಸಿಂಧೋಲ್‌, ನಿರ್ದೇಶಕ ಗುರು ಸಿಂಧೋಲ್‌, ಭಾವೇಶ ಪಟೇಲ್‌, ಮಂಜುನಾಥ್‌ ಹೂಗಾರ್‌, ಸಹನಾ ಪಾಟೀಲ್‌, ಪೂಜಾ ಕೊಂಡಿ, ಕೀರ್ತಿ ವಾಲೆ, ಲವನೀತ್‌ ಸಿಂಗ್‌, ಸದಸ್ಯರಾದ ನವೀನ್‌ ಗೋಯಲ್‌, ಸಹಾಯಕ್‌ ಕ್ಲಬ್‌ ಗೌರ್ನತರ್‌ ಸರ್ಯತಕಾಂತ್‌ ರಾಮಶೆಟ್ಟಿ, ರವಿ ಮೂಲಗೆ, ಸಚ್ಚಿದಾನಂದ ಚಿದ್ರೆ, ಅನಂದ ಕೋಟರ್ಕಿ ಮತ್ತಿತರರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ