ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಈ ಕುರಿತು ಮಾತನಾಡಿದ ಅವರು, ನಗರದ ತರಾಸು ರಂಗಮಂದಿರದಲ್ಲಿ ನಡೆವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದ ಉತ್ತಮ ಶಿಕ್ಷಕರ ಪ್ರಸ್ತಾವನೆಗಳನ್ನು ಪರಿಶೀಲನೆ ಮಾಡಿದ ಜಿಲ್ಲಾ ಆಯ್ಕೆ ಸಮಿತಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರನ್ನು 2024-25ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ವಿಶೇಷ ಶಿಕ್ಷಕ ಪ್ರಶಸ್ತಿ ನೀಡಲು ಆಯ್ಕೆ ಮಾಡಿದೆ. ಪ್ರೌಢಶಾಲಾ ವಿಭಾಗ-6, ಹಿರಿಯ ಪ್ರಾಥಮಿಕ ಶಾಲೆ ವಿಭಾಗ-6, ಕಿರಿಯ ಪ್ರಾಥಮಿಕ ಶಾಲೆ ವಿಭಾಗ-6 ಹಾಗೂ ವಿಶೇಷ ಪ್ರಶಸ್ತಿ ವಿಭಾಗ-ಸೇರಿದಂತೆ ಒಟ್ಟು 24 ಮಂದಿ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.*ಜಿಲ್ಲಾಮಟ್ಟದ ಉತ್ತಮ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ವಿವರ. ಪ್ರೌಢಶಾಲಾ ವಿಭಾಗ:
ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಚಿತ್ರದುರ್ಗ ತಾಲೂಕು ಹುಲ್ಲೇಹಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಜಿ.ಟಿ.ಹನುಮಂತಪ್ಪ, ಹಿರಿಯೂರು ತಾಲೂಕು ಕಾಟನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಿ.ಆರ್.ಶ್ರೀನಿವಾಸ, ಚಳ್ಳಕೆರೆ ತಾಲೂಕು ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಡಿ.ಪುಷ್ಪಲತ, ಮೊಳಕಾಲ್ಮುರು ತಾಲೂಕು ಮೊಗಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ಈಶ್ವರಪ್ಪ, ಚಳ್ಳಕೆರೆ ತಾಲೂಕು ಹರವಿಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಚ್. ಸುರೇಶ್, ಹೊಸದುರ್ಗ ತಾಲೂಕು ಹೇರೂರು ಸರ್ಕಾರಿ ಸಹ ಶಿಕ್ಷಕಿ ಎ.ರೂಪ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲೆ ವಿಭಾಗ: ಹೊಳಲ್ಕೆರೆ ತಾಲೂಕು ಗುಂಡೇರಿ ಸರ್ಕಾರಿ ಉರ್ದು ಕಿರಿಯ ಸಹ ಶಿಕ್ಷಕಿ ಶಕೀಲಾ ಜಾನ್, ಹಿರಿಯೂರು ತಾಲೂಕು ಕೆ.ಎನ್.ಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಚ್.ಪಿ.ಸುನೀಲ್ ಕುಮಾರ್, ಚಿತ್ರದುರ್ಗ ತಾಲೂಕು ಹಲಗಪ್ಪನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಸ್.ಸುರೇಶ್, ಹೊಳಲ್ಕೆರೆ ತಾಲೂಕು ಬೋವಿಹಟ್ಟಿ ಅರೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಯು.ಮಹೇಶ್, ಮೊಳಕಾಲ್ಮುರು ತಾಲೂಕು ಬಿಲಾಲ್ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಮ್.ಇಬ್ರಾಹಿಂ, ಚಳ್ಳಕೆರೆ ತಾಲೂಕು ಗೋಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಂ.ಮಲ್ಲಿಕಾರ್ಜುನಪ್ಪ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.