ಜಿಲ್ಲಾ ಮಟ್ಟದ ಚೆಸ್‌ ಪಂದ್ಯಾಟ: ನಿಹಾಲ್‌ ಶೆಟ್ಟಿ ಚಾಂಪಿಯನ್‌

KannadaprabhaNewsNetwork |  
Published : Feb 11, 2026, 03:00 AM IST
ಉಡುಪಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ವಿಜೇತರು ಮತ್ತು ಸಂಘಟಕರು | Kannada Prabha

ಸಾರಾಂಶ

3ನೇ ಉಡುಪಿ ಜಿಲ್ಲಾ ಚೆಸ್ ಚಾಂಪಿಯನ್‌ಶಿಪ್ ಮತ್ತು 17ನೇ ಕಲ್ಯ ದೇವರಾಯ ಶೆಣೈ ಸ್ಮರಣಾರ್ಥ ಚೆಸ್ ಸ್ಪರ್ಧೆ ಉಡುಪಿಯಲ್ಲಿ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 195 ಆಟಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಟೂರ್ನಮೆಂಟ್‌ನಲ್ಲಿ ವಿವಿಧ ವಯೋ ವರ್ಗಗಳಲ್ಲಿ ಪಂದ್ಯಗಳು ನಡೆಯಿತು, ಒಟ್ಟು 98 ಟ್ರೋಫಿ ಹಾಗೂ ₹28,500 ನಗದು ಬಹುಮಾನ ವಿತರಿಸಲಾಯಿತು.

ಉಡುಪಿ: 3ನೇ ಉಡುಪಿ ಜಿಲ್ಲಾ ಚೆಸ್ ಚಾಂಪಿಯನ್‌ಶಿಪ್ ಮತ್ತು 17ನೇ ಕಲ್ಯ ದೇವರಾಯ ಶೆಣೈ ಸ್ಮರಣಾರ್ಥ ಚೆಸ್ ಸ್ಪರ್ಧೆ ಉಡುಪಿಯಲ್ಲಿ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 195 ಆಟಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಟೂರ್ನಮೆಂಟ್‌ನಲ್ಲಿ ವಿವಿಧ ವಯೋ ವರ್ಗಗಳಲ್ಲಿ ಪಂದ್ಯಗಳು ನಡೆಯಿತು, ಒಟ್ಟು 98 ಟ್ರೋಫಿ ಹಾಗೂ ₹28,500 ನಗದು ಬಹುಮಾನ ವಿತರಿಸಲಾಯಿತು.ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಹಾಗೂ ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ ಉಪ್ಪುಂದ ಬೆಸ್ಟ್ ಅಕಾಡೆಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವು.

ಓಪನ್ ವಿಭಾಗದಲ್ಲಿ ನಿಹಾಲ್ ಎನ್. ಶೆಟ್ಟಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಅನೀಶ್ ಎಸ್.ಸಿ. ದ್ವಿತೀಯ ಸ್ಥಾನ ಹಾಗೂ ಚಿನ್ಮಯ ಎಸ್. ಭಟ್ ತೃತೀಯ ಸ್ಥಾನ ಗಳಿಸಿದರು. ಉತ್ತಮ ವೇಟರನ್ ಆಟಗಾರ ಪ್ರಶಸ್ತಿಯನ್ನು ರಾಮ ಶೇರಿಗಾರ್ ಹಾಗೂ ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಶಾನ್ವಿ ಎಸ್. ಬಳ್ಳಾಲ್ ಪಡೆದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಉಮಾನಾಥ್ ಕಾಪು , ಕಲ್ಯ ದೇವರಾಯ ಶೆಣೈ ಸ್ಮಾರಕ ಚೆಸ್ ಫೌಂಡೇಶನ್ ಅಧ್ಯಕ್ಷ ಡಾ. ಕೆ. ರಾಜಗೋಪಾಲ್ ಶೆಣೈ, ಟೂರ್ನಿಯ ಮುಖ್ಯ ಆಯೋಜಕರಾದ ಎಂ. ರಮೇಶ್ ಕಿಣಿ ಹಾಗೂ ಡಾ. ಎಚ್. ಗಣೇಶ್ ಪೈ, ಉಭಯ ಸಂಸ್ಥೆಗಳ ಪದಾಧಿಕಾರಿಗಳಾದ ಡಾ. ಪ್ರಕಾಶ್ ಶೆಣೈ ಕಲ್ಯ, ಡಾ ಸುರೇಶ್ ಶೆಣೈ, ಡಾ. ಶೋಭಾ ಕಾಮತ್, ಡಾ. ರಾಘವೇಂದ್ರ ನಾಯಕ್, ಡಾ. ಉಲ್ಲಾಸ್ ಕಾಮತ್, ಡಾ. ಪ್ರಕಾಶ್ ಶೆಣೈ ಕಲ್ಯ, ಟಿ. ಕೇಶವರಾಯ ಪೈ, ಡಾ. ನಿಶಾಂತ್ ಭಟ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅವಧಿ ಮುಗಿದರೂ ಹುದ್ದೆ ಬಿಡ್ತಿಲ್ಲ ಸಹಕಾರ ಎಂಡಿ !
ತಮಿಳ್ನಾಡಿಗೆ 4.5 ಟಿಎಂಸಿ ನೀರು ಹರಿಸುವ ಆದೇಶ : ಭುಗಿಲೆದ್ದ ಕಾವೇರಿ ಕಿಚ್ಚು