ಮಂಗಳೂರು: ಜಿಲ್ಲಾ ಮಟ್ಟದ ಕರೆನ್ಸಿ ನಿರ್ವಹಣಾ ಸಮಿತಿ (ಡಿಎಲ್‌ಸಿಎಂಸಿ) ಸಭೆ ಹಾಗೂ ಕರೆನ್ಸಿ ನಿರ್ವಹಣೆಯ ಕುರಿತು ಜಾಗೃತಿ ಕಾರ್ಯಕ್ರಮ ಶುಕ್ರವಾರ ಮಂಗಳೂರಿನ ಕೊಟ್ಟಾರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು ಕಚೇರಿ, ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಂಗಳೂರು ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.
ಬ್ಯಾಂಕ್ ನೋಟುಗಳನ್ನು ಸರಿಯಾಗಿ ನಿರ್ವಹಿಸುವುದು ಮತ್ತು ನಿಯಂತ್ರಣಾತ್ಮಕ ಅವಶ್ಯಕತೆಗಳನ್ನು ಪಾಲಿಸುವುದರ ಕುರಿತು ಜಾಗೃತಿ ಹೆಚ್ಚಿಸಲು, ಆರ್‌ಬಿಐ, ಬ್ಯಾಂಕ್‌ಗಳು, ಗ್ರಾಹಕರು ಮತ್ತು ಇತರ ಪಾಲುದಾರರ ನಡುವೆ ಸಂವಾದ ಹಾಗೂ ಅಭಿಪ್ರಾಯ ವಿನಿಮಯಕ್ಕೆ ಈ ಕಾರ್ಯಕ್ರಮ ಅವಕಾಶ ಕಲ್ಪಿಸಿತು.ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರಿನ ಜನರಲ್ ಮ್ಯಾನೇಜರ್ ಸಂಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂಡು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ಆಯುಕ್ತ ಸ್ಯಾಮ್ ವರ್ಗೀಸ್, ಆರ್‌ಬಿಐಯ ಸಹಾಯಕ ಜನರಲ್ ಮ್ಯಾನೇಜರ್ ತೃಪ್ತಾ ರಾಯ್, ಆರ್‌ಬಿಐಯ ಮ್ಯಾನೇಜರ್ ಅವಿನಾಶ್, ಕೆನರಾ ಬ್ಯಾಂಕ್ ಮಂಗಳೂರು ವೃತ್ತದ ಜನರಲ್ ಮ್ಯಾನೇಜರ್ ಮತ್ತು ವೃತ್ತ ಮುಖ್ಯಸ್ಥ ಮಂಜುನಾಥ್ ಬಿ.ಸಿಂಗ್ಯೆ, ಕೆನರಾ ಬ್ಯಾಂಕ್‌ನ ಸಿಎಂಎಸ್, ಹೆಡ್ ಆಫೀಸ್ ಅನೆಕ್ಸ್, ಮಣಿಪಾಲದ ಜನರಲ್ ಮ್ಯಾನೇಜರ್ ಎಚ್.ಟಿ.ಬವಿಸ್ಕರ್, ಬ್ಯಾಂಕ್ ಆಫ್ ಬರೋಡಾದ ಜನರಲ್ ಮ್ಯಾನೇಜರ್ ರಾಜೇಶ್ ಖಿನ್ನಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಸತ್ಯಂ ಪಲುಗುನಾ ಇದ್ದರು.
ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿ ಹೆಡ್ ಆಫೀಸ್ ಅನೆಕ್ಸ್, ಮಣಿಪಾಲದ ನಗದು ನಿರ್ವಹಣಾ ವರ್ಟಿಕಲ್‌ನ ಸಹಕಾರ ಮತ್ತು ಬೆಂಬಲದೊಂದಿಗೆ ಕಾರ್ಯಕ್ರಮದ ಸಮನ್ವಯ ನಿರ್ವಹಿಸಿತು.