ಪುತ್ತೂರು : ಇತ್ತೀಚೆಗಿನ ಶಾಸಕರನ್ನು ಗಮನಿಸಿದರೆ ಒಬ್ಬೊಬ್ಬ ಶಾಸಕರ ಆಸ್ತಿ ಮೌಲ್ಯ ಸಾವಿರಾರು ಕೋಟಿ ಮಿಕ್ಕಿರುತ್ತದೆ. ಅದು ಸರಿಯಲ್ಲ. ನಮ್ಮನ್ನು ಆಳುವ ಪ್ರಭುಗಳು ನಮ್ಮಿಂದಲೇ ಆಯ್ಕೆ ಆಗುತ್ತಿದ್ದು ಅಭ್ಯರ್ಥಿಗಳನ್ನು ಅವರ ಆಸ್ತಿ, ಸಂತಸ್ಥಿನ ಮೇಲೆ ಆಯ್ಕೆ ಮಾಡುವುದು ಸರಿಯಲ್ಲ. ಅವರ ವ್ಯಕ್ತಿತ್ವ ನೀಡಿ ಮತ ನೀಡಬೇಕು. ಪಕ್ಷ, ಆಸ್ತಿ ನೋಡಬಾರದು.
ಪುತ್ತೂರು ನಗರ ಯೋಜನಾ ಪ್ರಾಧೀಕಾರ(ಪುಡಾ)ದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ ಪ್ರಶ್ನಿಸುವ ಗುಣವೇ ಪ್ರಜಾಪ್ರಭುತ್ವದ ಮೊದಲ ಲಕ್ಷಣ. ಪ್ರಶ್ನಿಸುವ ಹೊರತಾದ ಪ್ರಜಾಪ್ರಭುತ್ವ ಕಲ್ಪಿಸಲು ಸಾಧ್ಯವಿಲ್ಲ. ಕಲಾಪದಲ್ಲಿ ಪ್ರಶ್ನಿಸುವ ವಿರೋಧ ಪಕ್ಷದ ನಾಯಕನೇ ನಿಜವಾದ ಹೋರೋ. ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರ ಹೊಂದಾಣಿಕೆಯಲ್ಲಿ ಕಲಾಪ ನಡೆಸಿದರೆ ಅದು ದೇಶಕ್ಕೆ ಜನರಿಗೆ ಮಾಡುವ ದ್ರೋಹವಾಗಿದೆ. ಜನರ ಸಮಸ್ಯೆಗಳನ್ನು ಕಲಾಪದಲ್ಲಿ ಪ್ರಶ್ನಿಸುವನೇ ನಾಯಕ. ಆದರೆ ಪ್ರಶ್ನಿಸುವವರನ್ನು ಬಾಯಿ ಮುಚ್ಚಿಸುವ ಕೆಲಸ ಎಲ್ಲಾ ಸರಕಾರದ ಅವಧಿಯಲ್ಲಿ, ಎಲ್ಲಾ ದೇಶ ರಾಜ್ಯಗಳಲ್ಲಿಯೂ ನಡೆಯುತ್ತಿದೆ ಎಂದರು.ಪುತ್ತೂರು ತಹಶೀಲ್ದಾರ್ ಎಸ್.ಬಿ ಕೂಡಲಗಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಂ., ಪುತ್ತೂರು ಉಪವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್, ಪುತ್ತೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸ್ತಾವಣೆಯೊಂದಿಗೆ ಸ್ವಾಗತಿಸಿದರು. ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಸಂವಿಧಾನ ಪೀಠಿಕೆ ವಚನ ಬೋಧಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿಧಾನ ಸಭೆಯು ಅಣುಕು ಕಾರ್ಯಕಲಾಪಗಳ ಮೂಲಕ ಯುವ ಸಂಸತ್ ಸ್ಪರ್ಧೆಗಳು ನಡೆಯಿತು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.