ಹಾವೇರಿ: ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ 14 ಮತ್ತು 17 ವರ್ಷದೊಳಗಿನ ಬಾಲಕರ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯು ಇಲ್ಲಿಯ ಕೆಎಲ್ಇ ಸಂಸ್ಥೆಯ ಹರ್ಷ ಅಕ್ವಾಟಿಕ್ ಸೆಂಟರ್‌ನಲ್ಲಿ ಯಶಸ್ವಿಯಾಗಿ ಜರುಗಿತು.
14 ವರ್ಷದೊಳಗಿನ ಬಾಲಕರ ವಿಭಾಗ: 50 ಮೀ. ಫ್ರೀ ಸ್ಟೈಲ್- ರಿತೇಶ್ (ಸರ್ ಎಂ. ವಿಶ್ವೇಶ್ವರಯ್ಯ ಶಾಲೆ, ಹಾವೇರಿ - ಪ್ರಥಮ), ಪ್ರಥಮ್ (ಸರ್ ಎಂ. ವಿಶ್ವೇಶ್ವರಯ್ಯ ಶಾಲೆ, ಹಾವೇರಿ - ದ್ವಿತೀಯ).
100 ಮೀ. ಫ್ರೀ ಸ್ಟೈಲ್- ಖ್ವಾಜಾ ಮೊಯಿನು ಕಳಸಬಾನವರ (ಎಮ್.ಎ.ಎಮ್.ಎಸ್. ಕುನ್ನೂರು, ಶಿಗ್ಗಾಂವಿ - ಪ್ರಥಮ).50 ಮೀ. ಬ್ಯಾಕ್ ಸ್ಟ್ರೋಕ್- ರಿತೇಶ್ ಮಂಜುನಾಥ (ಸರ್ ಎಂ. ವಿಶ್ವೇಶ್ವರಯ್ಯ ಶಾಲೆ - ಪ್ರಥಮ), ಪ್ರಥಮ್ ಗಡ್ಡಿ (ಸರ್ ಎಂ. ವಿಶ್ವೇಶ್ವರಯ್ಯ ಶಾಲೆ - ದ್ವಿತೀಯ).
200 ಮೀ. ಬ್ರೆಸ್ಟ್ ಸ್ಟ್ರೋಕ್- ಪುನೀತ್ ಕೆ (ಜೆ.ಪಿ. ರೋಟರಿ ಶಾಲೆ - ಪ್ರಥಮ), ರಾಮಚರಣ್ (ಜೆ.ಪಿ. ರೋಟರಿ ಶಾಲೆ - ದ್ವಿತೀಯ).
400 ಮೀ. ಫ್ರೀ ಸ್ಟೈಲ್- ರಾಮಚರಣ್ (ಜೆ.ಪಿ. ರೋಟರಿ ಶಾಲೆ - ಪ್ರಥಮ), ಪುನೀತ್ (ಜೆ.ಪಿ. ರೋಟರಿ ಶಾಲೆ - ದ್ವಿತೀಯ).
17 ವರ್ಷದೊಳಗಿನ ಬಾಲಕರ ವಿಭಾಗ: 50 ಮೀ. ಫ್ರೀ ಸ್ಟೈಲ್- ಪ್ರವೀಣ್ (ಕೊಟ್ಟೂರೇಶ್ವರ ಪ್ರೌಢಶಾಲೆ, ಕುಂದೂರು - ಪ್ರಥಮ), ಸಮೇಧ (ಎಮ್.ಎ.ಎಮ್.ಎಸ್. ಕುನ್ನೂರು - ದ್ವಿತೀಯ), ಶ್ರೀಧರ (ಎಮ್.ಎ.ಎಮ್.ಎಸ್. ಕುನ್ನೂರು - ತೃತೀಯ).
100 ಮೀ. ಬ್ಯಾಕ್ ಸ್ಟ್ರೋಕ್- ದಿಲೀಪ್ ಕೆಳ್ಳಕ್ಯಾತರ (ಜಿ.ಎಚ್.ಎಸ್. ಹಳೇರಿತ್ತಿ - ಪ್ರಥಮ).
50 ಮೀ. ಬಟರ್ ಫ್ಲೈ- ಖ್ವಾಜಾ ಮೊಯಿನುದ್ದೀನ್ (ಜಿ.ಯು.ಹೆಚ್.ಎಸ್. ನಾಗೇಂದ್ರನಮಟ್ಟಿ - ಪ್ರಥಮ), ಭೀಮನಗೌಡ ಪಾಟೀಲ (ಕೊಟ್ಟೂರೇಶ್ವರ ಪ್ರೌಢಶಾಲೆ, ಕುಂದೂರು - ದ್ವಿತೀಯ).
100 ಮೀ. ಬ್ರೆಸ್ಟ್ ಸ್ಟ್ರೋಕ್: ಸುಹಾಸ್ (ಸಾಯಿಚಂದ್ರ ಗುರುಕುಲ, ಹಾವೇರಿ - ಪ್ರಥಮ).
400 ಮೀ. ಫ್ರೀ ಸ್ಟೈಲ್: ಸುಹಾಸ್ (ಸಾಯಿಚಂದ್ರ ಗುರುಕುಲ, ಹಾವೇರಿ - ಪ್ರಥಮ), ಸಂದೀಪ (ಜಿ.ಹೆಚ್.ಎಸ್. ಹಳೇರಿತ್ತಿ - ದ್ವಿತೀಯ).800 ಮೀ. ಫ್ರೀ ಸ್ಟೈಲ್ & 200 ಮೀ. ಮೆಡ್ಲೆ: ವರ್ಷಿತ್ ಟಿ (ಜೆ.ಪಿ. ರೋಟರಿ ಶಾಲೆ - ಪ್ರಥಮ).
ವಿಜೇತ ವಿದ್ಯಾರ್ಥಿಗಳು ಹರ್ಷ ಆಕ್ವಾಟಿಕ್ ಸೆಂಟರ್‌ನಲ್ಲಿ ತರಬೇತುದಾರ ಲಕ್ಷ್ಮಣ್ ಅವರಿಂದ ತರಬೇತಿ ಪಡೆದಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ವಿಜೇತ ಈಜುಪಟುಗಳಿಗೆ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಎಂ. ಸಿ. ಕೊಳ್ಳಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ದಂಡಿನ ಮಾರ್ಗದರ್ಶನದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಆಲ್ವಿನ್ ಬಾಬು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿನಾಯಕ ಗಡ್ಡದ, ಮಂಜುನಾಥ , ಮಣೇಗಾರ್, ವಸಂತ ಬಂಕಾಪುರ, ಶಂಭು ಶೆಟ್ಟರ್ ಅವರ ಸಮ್ಮುಖದಲ್ಲಿ ಸ್ಪರ್ಧೆಯು ಸುಸೂತ್ರವಾಗಿ ನಡೆಯಿತು.