ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಈ ಬಾರಿ ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ 8 ಬ್ಲಾಕ್‌ಗಳಿಗೆ ತಲಾ ಓರ್ವರಂತೆ 24 ಶಿಕ್ಷಕರನ್ನು ಆಯ್ಕೆ ಮಾಡಿದೆ. ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆ ವಿಭಾಗಗಳಲ್ಲಿ ತಲಾ 8 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಿದ್ದು, ಅವರಿಗೆ ಸೆ.5 ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ದಿನದಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಯು ₹5000 ನಗದು ಹೊಂದಿದೆ.ಕಿರಿಯ ಪ್ರಾಥಮಿಕ ವಿಭಾಗ :
ಕೆ.ಎಸ್. ಗಣೇಶಪ್ಪ, ಗುಡ್ಡೆಕೊಪ್ಪ, ಚಿಕ್ಕಮಗಳೂರು ತಾಲೂಕು, ಸಿ.ಟಿ. ರೇಣುಕಮ್ಮ, ಪರ್ವತನಹಳ್ಳಿ, ಕಡೂರು ತಾಲೂಕು, ಜಿ. ಮಂಜುನಾಥ್, ಚನ್ನೇನಹಳ್ಳಿ, ಬೀರೂರು ವಲಯ, ಎಸ್.ಆರ್. ತಿಪ್ಪೇಶಪ್ಪ, ಶಂಭೈನೂರು, ತರೀಕೆರೆ ವಲಯ, ಎನ್. ಗೀತಾ, ಕುಶಾಲಪುರ ಎನ್.ಆರ್ ಪುರ ತಾಲೂಕು, ಹೆಚ್.ಜಿ. ಅಶ್ವಿನಿ, ಹೊಸಕೆರೆ ಕಾಲೋನಿ, ಮೂಡಿಗೆರೆ ತಾಲೂಕು, ಕೆ.ಎನ್. ರಾಘವೇಂದ್ರ, ಹೊಲಗೋಡು, ಕೊಪ್ಪ ತಾಲೂಕು, ಎಸ್.ಹೆಚ್. ಕವಿತಾ, ಹನುಮಂತನಗರ, ಶೃಂಗೇರಿ ತಾಲೂಕಿನಿಂದ ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಹಿರಿಯ ಪ್ರಾಥಮಿಕ ವಿಭಾಗಬಿ.ಆರ್. ತಿಮ್ಮಪ್ಪ ಕಳಸಾಪುರ, ಚಿಕ್ಕಮಗಳೂರು ತಾಲೂಕು, ಯಾಸ್ಮಿನ್ ಸುಲ್ತಾನ್, ಮೂಡಿಗೆರೆ, ಜಿ.ಕೆ. ರಂಗನಾಥ ತಿಮ್ಮಲಾಪುರ, ಕಡೂರು ತಾಲೂಕು, ಕೆ. ಜಯಪ್ಪ, ದೊಡ್ಡಪಟ್ಟಣಗೆರೆ, ಬೀರೂರು ವಲಯ, ಬಿ.ಎಚ್. ವಸಂತ ಕುಮಾರಿ, ಭಾವಿಕೆರೆ, ತರೀಕೆರೆ ತಾಲೂಕು, ಪಿ.ವಿ. ಶುಭಾ, ಶೆಟ್ಟಿಕೊಪ್ಪ, ನ.ರಾ.ಪುರ ತಾಲೂಕು, ಕಾಂತಕುಮಾರ್, ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪ, ಎಂ. ವೀಣಾ ಬಾಲಕಿಯರ ಸ.ಹಿ.ಪ್ರಾಥಮಿಕ ಶಾಲೆ, ಶೃಂಗೇರಿಯಿಂದ ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಪ್ರೌಢಶಾಲಾ ವಿಭಾಗ :
ಸಿ.ಪಿ. ಕೃಷ್ಣೇಗೌಡ, ಬಸವನಹಳ್ಳಿ ಶಾಲೆ, ಚಿಕ್ಕಮಗಳೂರು, ಪಿ. ಶಿವರಾಮೇಗೌಡ, ಕೊಟ್ಟಿಗೆಹಾರ, ಮೂಡಿಗೆರೆ ತಾಲೂಕು, ಶಫೀತಾ ಬೇಗಂ, ಸೋಮನಹಳ್ಳಿ, ಕಡೂರು ತಾಲೂಕು, ಎಂ.ಸಿ. ಸುರೇಶ, ಎಮ್ಮೆದೊಡ್ಡಿ, ಬೀರೂರು ವಲಯ, ಎ.ಎಚ್. ಪ್ರಭಾಕರ್, ಬಾಲಕಿಯರ ಶಾಲೆ ತರೀಕೆರೆ, ಎಚ್.ಎನ್. ವಿಶ್ವನಾಥ, ಮೇಲ್ವಾಲ್, ನ.ರಾ.ಪುರ ತಾಲೂಕು, ರಮೇಶ್ ಉಪಾಧ್ಯಾಯ, ಭಂಡಿಗಡಿ, ಕೊಪ್ಪ ತಾಲೂಕು, ಎಚ್.ವಿ. ಶರಾವತಿ, ಹೊಳೆಕೊಪ್ಪ, ಶೃಂಗೇರಿ ತಾಲೂಕಿನಿಂದ ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.