ಹಮಾಲರ ಸಂಘದ ಅಧ್ಯಕ್ಷ ಬಸವರಾಜಪ್ಪ ಸೇರಿ 34 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಗೌರವ

KannadaprabhaNewsNetwork |  
Published : Nov 01, 2026, 02:15 AM IST
ಚಿತ್ರದುರ್ಗ ಮೂರನೇ ಪುಟದ ಮಿಡ್ಲ್ | Kannada Prabha

ಸಾರಾಂಶ

District Rajyotsava Honor Conferred Upon 34 Achievers, Including Hamalara Sangha President Basavarajappa

-ಇಂದು ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ । ಡಿಸಿ ರಮ್ಯಾ ಮಾಹಿತಿಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಬಿ. ಬಸವರಾಜಪ್ಪ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ 34 ಸಾಧಕರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಗೌರವಕ್ಕೆ ಆಯ್ಕೆ ಮಾಡಲಾಗಿದೆ.ಉಪವಿಭಾಗಾಧಿಕಾರಿ ಡಾ.ಕೆ.ಜೆ. ಕಾಂತರಾಜ್ ನೇತೃತ್ವದ ಆಯ್ಕೆ ಸಮಿತಿಯು ವಿಸ್ತೃತವಾಗಿ ಚರ್ಚಿಸಿ ಒಟ್ಟು 34 ಜನರನ್ನು ಆಯ್ಕೆ ಮಾಡಿದೆ ಪ್ರಶಸ್ತಿಗೆ ಭಾಜನರಾದವರನ್ನು ನ.1 ರಂದು ಭಾನುವಾರ ಚಿತ್ರದುರ್ಗ ನಗರದ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು.ಪ್ರಶಸ್ತಿ ಪುರಸ್ಕೃತರು:

ರಂಗಭೂಮಿ ಕ್ಷೇತ್ರದಲ್ಲಿ ಚಳ್ಳಕೆರೆ ತಾಲೂಕು ಸಿದ್ದೇಶ್ವರನ ದುರ್ಗದ ಕ್ಯಾದಿಗುಂಟೆಯ ಎಸ್.ಬಿ. ನರಸಿಂಹಮೂರ್ತಿ, ಚಿತ್ರದುರ್ಗ ತಾಲೂಕಿನ ಎಂ.ಕೆ.ಹಟ್ಟಿಯ ಗದಿಗಯ್ಯ ಕಿತ್ತೂರುಮಠ, ಉಪ್ಪನಾಯಕನಹಳ್ಳಿಯ ಸಿ. ಚಂದ್ರಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ಚಳ್ಳಕೆರೆ ತಾಲೂಕಿನ ತ್ಯಾಗರಾಜನಗರದ ಹೆಚ್. ನಾಗೇಂದ್ರಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರುಳಿ ಎಂ. ಬಸವರಾಜ್, ಹೊಳಲ್ಕೆರೆ ತಾಲೂಕಿನ ಕಡೂರು ಗ್ರಾಮದ ಶಿವಪ್ರಕಾಶ್ ಆರ್ ಕುಂಬಾರ, ಚಿತ್ರದುರ್ಗ ತಾಲೂಕಿನ ತುರುವನೂರಿನ ಕೆ. ನರಸಿಂಹಪ್ಪ, ಚಳ್ಳಕೆರೆ ತಾಲೂಕಿನ ಜಡೇಕುಂಟೆ ಗ್ರಾಮದ ಜಡೇಕುಂಟೆ ಮಂಜುನಾಥ್, ಸಂಗೀತ ಕ್ಷೇತ್ರದದಲ್ಲಿ ಹೊಸದುರ್ಗ ತಾಲೂಕಿನ ಹೊನ್ನೇಕೆರೆ ಗ್ರಾಮದ ಹೆಚ್.ಜಿ. ನಾಗರಾಜಪ್ಪ, ಶ್ರೀರಾಂಪುರ ಗ್ರಾಮದ ಜಿ.ಪಿ. ಜಯಪ್ರಕಾಶ್, ಚಿತ್ರದುರ್ಗ ತಾಲೂಕಿನ ಐಯ್ಯನಹಳ್ಳಿ ಆಯಿತೋಳು ಗ್ರಾಮದ ಜಿ.ಎನ್. ಗೋಂದಾಳಪ್ಪ, ಚಿತ್ರದುರ್ಗದ ಗೌಸ್‍ಪೀರ್, ಚಳ್ಳಕೆರೆ ತಾಲೂಕಿನ ನಲಗೇತನಹಟ್ಟಿ ಗ್ರಾಮದ ಮುತ್ತುರಾಜ್ ಅವರನ್ನು ಪರಿಗಣಿಸಲಾಗಿದೆ.ಜಾನಪದ-ನಗಾರಿ ವಾದ್ಯದಲ್ಲಿ ಚಿತ್ರದುರ್ಗ ತಾಲೂಕಿನ ಬೇವಿನಹಳ್ಳಿ ಗ್ರಾಮದ ವೆಂಕಟೇಶ್ ನಾಯ್ಕ್, ಜಾನಪದ-ಉರುಮೆ, ಕೀಲುಕುದುರೆಯಲ್ಲಿ ಚಿತ್ರದುರ್ಗ ನಗರದ ಎಂ.ನಿಂಗರಾಜ್, ಕ್ರೀಡೆ-ಯೋಗ ಕ್ಷೇತ್ರದಲ್ಲಿ ಚಿತ್ರದುರ್ಗ ವಿದ್ಯಾನಗರದ ಸುಭದ್ರ ಶಂಕರನಾಥ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ಚಿತ್ರದುರ್ಗ ನಗರದ ಯು.ಸತೀಶ ಕುಮಾರ್, ಚಳ್ಳಕೆರೆ ತಾಲೂಕಿನ ಕಾಟಪ್ಪನಹಟ್ಟಿಯ ವಿ. ನಾರಾಯಣರಾವ್, ಚಿತ್ರಕಲೆಯಲ್ಲಿ ಚಿತ್ರದುರ್ಗ ತಾಲ್ಲೂಕಿನ ತುರುವನೂರಿನ ಡಾ.ಡಿ.ಎಸ್. ಶ್ವೇತಾ ಅವರನ್ನು ಆಯ್ಕೆ ಮಾಡಲಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಚಳ್ಳಕೆರೆಯ ಡಾ.ಎಫ್.ವಿ.ನಂದಿನಿ ಲಾವಣ್ಯ, ಚಿತ್ರದುರ್ಗ ನಗರದ ಟಿ.ಮಂಜುನಾಥ್, ಶಿಕ್ಷಣ ಕ್ಷೇತ್ರದಲ್ಲಿ ಚಿತ್ರದುರ್ಗದ ಸಂಗೇನಹಳ್ಳಿ ಅಶೋಕ್ ಕುಮಾರ್, ಕೂನಬೇವು ಗ್ರಾಮದ ಅನಿತಾ ಲಕ್ಷ್ಮೀ, ಸಮಾಜ ಸೇವೆ ಕ್ಷೇತ್ರದಲ್ಲಿ ಮೊಳಕಾಲ್ಮುರು ತಾಲೂಕು ಚಿಕ್ಕೋಬನಹಳ್ಳಿಯ ನಾಗರಾಜ, ಚಿತ್ರದುರ್ಗ ನಗರದ ಡಿ.ಹೆಚ್.ನಟರಾಜ, ಕೃಷಿ ಕ್ಷೇತ್ರದಲ್ಲಿ ಚಳ್ಳಕೆರೆಯ ನರಸಿಂಹಮೂರ್ತಿ, ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಗ್ರಾಮದ ಕೆ.ಎಂ.ಕಾಂತರಾಜ್ ಅವರನ್ನು ಪರಿಗಣಿಸಲಾಗಿದೆ.ಸಂಕೀರ್ಣ ವಿಭಾಗದಲ್ಲಿ ಚಿತ್ರದುರ್ಗ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಬಿ. ಬಸವರಾಜಪ್ಪ, ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಚಿತ್ರದುರ್ಗ ಪಬ್ಲಿಕ್ ಟಿವಿಯ ಜಿಲ್ಲಾ ವರದಿಗಾರ ಎಸ್. ಸಿದ್ದರಾಜು, ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿ ಹಿರಿಯೂರು ತಾಲೂಕು ಧರ್ಮಪುರ ಹೋಬಳಿ ಅರಳೀಕೆರೆ ಗ್ರಾಮದ ಡಾ.ವಿ. ವೀರಣ್ಣ, ಚಿತ್ರದುರ್ಗ ವಿಜಯವಾಣಿ ವಿಶೇಷ ವರದಿಗಾರ ಡಿ.ಪಿ. ನಾಗರಾಜ ಶ್ರೇಷ್ಠಿ, ಹಿರಿಯೂರು ತಾಲೂಕು ಸೊಂಡೆಕೆರೆ ಗ್ರಾಮದ ಕೆ.ಶಿವಣ್ಣ, ಚಳ್ಳಕೆರೆ ಗಾಂಧಿನಗರದ ಟಿ.ಜೆ. ತಿಪ್ಪೇಸ್ವಾಮಿ, ಚಿತ್ರದುರ್ಗ ನಗರದ ಕೆಳಗೋಟೆಯ ಸಿ.ಪಿ. ಮಾರುತಿ ಸೇರಿದಂತೆ ಒಟ್ಟು 35 ಮಂದಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ತಿಳಿಸಿದ್ದಾರೆ

--------------ಪೋಟೋ ಬಿ. ಬಸವರಾಜಪ್ಪ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ