ಜಿಲ್ಲಾ ವರದಿಗಾರರ ಕೂಟಕ್ಕೆ ಶೀಘ್ರ ಸ್ವಂತ ಜಾಗ

KannadaprabhaNewsNetwork |  
Published : Aug 30, 2025, 01:00 AM IST
29ಕೆಡಿವಿಜಿ3, 4-ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಶ್ರೀ ಗಣೇಶೋತ್ಸವ ಹಾಗೂ ವಿವಿಧ ಸ್ಪರ್ಧೆ ಬಹುಮಾನ ವಿತರಣೆಗೆ ಆಗಮಿಸಿದ್ದ ಪಾಲಿಕೆ ಆಯುಕ್ತರಾದ ರೇಣುಕಾ ಅವರ ಜೊತೆಗೆ ಕೂಟದ ಪದಾಧಿಕಾರಿಗಳು, ಸದಸ್ಯರು. | Kannada Prabha

ಸಾರಾಂಶ

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಸ್ವಂತ ಜಾಗ, ಕಟ್ಟಡ ಹೊಂದಬೇಕೆಂಬ 18 ವರ್ಷಗಳ ನಿರೀಕ್ಷೆ, ಕನಸನ್ನು ಆದಷ್ಟು ಬೇಗನೆ ಸಾಕಾರಗೊಳಿಸಲು ಪ್ರಯತ್ನಿಸುವುದಾಗಿ ಪಾಲಿಕೆ ಆಯುಕ್ತೆ ರೇಣುಕಾ ಭರವಸೆ ನೀಡಿದ್ದಾರೆ.

- ಪಾಲಿಕೆ ಆಯುಕ್ತೆ ರೇಣುಕಾ ಭರವಸೆ । 8ನೇ ಶ್ರೀ ಗಣೇಶೋತ್ಸವದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಸ್ವಂತ ಜಾಗ, ಕಟ್ಟಡ ಹೊಂದಬೇಕೆಂಬ 18 ವರ್ಷಗಳ ನಿರೀಕ್ಷೆ, ಕನಸನ್ನು ಆದಷ್ಟು ಬೇಗನೆ ಸಾಕಾರಗೊಳಿಸಲು ಪ್ರಯತ್ನಿಸುವುದಾಗಿ ಪಾಲಿಕೆ ಆಯುಕ್ತೆ ರೇಣುಕಾ ಭರವಸೆ ನೀಡಿದರು.

ನಗರದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಶುಕ್ರವಾರ 8ನೇ ವರ್ಷದ ಶ್ರೀ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಇಡೀ ರಾಜ್ಯದ ಬಹುತೇಕ ಕಡೆ ಪತ್ರಿಕಾ ಭ‍ವನ ಇದ್ದರೂ, ದಾವಣಗೆರೆಯಂತಹ ವೇಗದಲ್ಲಿ ಬೆಳೆಯುತ್ತಿರುವ ಊರಿನಲ್ಲೇ ಪತ್ರಿಕಾ ಭ‍ವನ ಇಲ್ಲವೆಂದ ಕೊರಗು ಶೀಘ್ರವೇ ನೀಗಲಿದೆ ಎಂದರು.

ಈಗಾಗಲೇ ಶಾಸಕರಾದ ಡಾ.ಶಾಮೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಹಾಗೂ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಕೂಟದಿಂದ ಮನವಿ ಮಾಡಿದ್ದು, ಸಚಿವರು, ಸಂಸದರು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಾಕಷ್ಟು ಜಾಗಗಳ ಪರಿಶೀಲನೆ ಸಹ ಮಾಡಿದ್ದೇವೆ ಎಂದು ತಿಳಿಸಿದರು.

ಜನಸಾಮಾನ್ಯರು, ರೈತರು, ಎಲ್ಲ ಸಂಘ-ಸಂಸ್ಥೆ, ಸಂಘಟನೆಯವರಿಗೂ ಬಂದು, ಸುದ್ದಿಗೋಷ್ಠಿ ಮಾಡಲು, ತಮ್ಮ ಸಮಸ್ಯೆ ಅಹವಾಲು ಹೇಳಿಕೊಳ್ಳಲು ಅನುವಾಗುವಂತೆ ಜಿಲ್ಲಾ ಕೇಂದ್ರದ ಮಧ್ಯ ಭಾಗದಲ್ಲೇ ಕೂಟಕ್ಕೆ ಜಾಗಬೇಕೆಂಬ ಬೇಡಿಕೆ ಇದೆ. ಹಾಗಾಗಿ ಸಚಿವರು, ಸಂಸದರು, ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ, ಜಾಗ ನೋಡಿದ್ದು, ಕೂಟ ಸಹ ಸಮ್ಮತಿಸಿದೆ. ಆದಷ್ಟು ಬೇಗನೆ ಅದೇ ಜಾಗ ಅಂತಿಮಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.

ಕೂಟದ ಉಪಾಧ್ಯಕ್ಷರಾದ ಸಿದ್ದಯ್ಯ ಹಿರೇಮಠ, ನಿಕಟ ಪೂರ್ವ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಬ್ಬೂರು, ಬಸವರಾಜ ದೊಡ್ಮನಿ, ಬೆಳಗಾವಿ ಹಿರಿಯ ಪತ್ರಕರ್ತ ಹೃಷಿಕೇಶ ಬಹಾದೂರ್ ದೇಸಾಯಿ, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಕಾರ್ಯದರ್ಶಿಗಳಾದ ಬಿ.ಸಿಕಂದರ್, ಸಂಜಯ್ ಕುಂದುವಾಡ, ಪಿಆರ್‌ಒ ಪಿ.ಎಸ್.ಲೋಕೇಶ, ಮಹದೇವ, ಡಾ.ಜೈಮುನಿ, ಮಹೇಶ ಕಾಶೀಪುರ, ಪರಶುರಾಮ ಇತರರು ಇದ್ದರು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

- - -

(ಬಾಕ್ಸ್‌)* 18 ವರ್ಷದಿಂದ ಬಾಡಿಗೆ ಕಟ್ಟಡವೇ ಗತಿ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿ, ವರದಿಗಾರ ಕೂಟ 18 ವರ್ಷದಿಂದ ಬಾಡಿಗೆ ಕಟ್ಟಡದಲ್ಲೇ ಇದೆ. ಇದುವರೆಗೆ ಸರ್ಕಾರದ ಯಾವುದೇ ಆರ್ಥಿಕ ನೆರವು, ಜಾಗವನ್ನೂ ಪಡೆದಿಲ್ಲ. ನಮ್ಮ ಕೂಟಕ್ಕೆ ಸ್ವಂತ ನಿವೇಶನದ ಅಗತ್ಯವಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಮನಸ್ಸು ಮಾಡಿದರೆ ದಸರಾ ಹಬ್ಬದೊಳಗೆ ದಾವಣಗೆರೆ ವರದಿಗಾರರ ಕೂಟಕ್ಕೆ ನಿವೇಶನ ನೀಡಿ, ಭೂಮಿ ಪೂಜೆಯನ್ನೂ ಮಾಡಿ, ಕಾಮಗಾರಿ ಸಹ ಆರಂಭಿಸಬಹುದು ಎಂದು ಮನವಿ ಮಾಡಿದರು.

- - -

-29ಕೆಡಿವಿಜಿ3, 4:

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಶ್ರೀ ಗಣೇಶೋತ್ಸವ ನಡೆಯಿತು. ವಿವಿಧ ಸ್ಪರ್ಧೆ ವಿಜೇತರಿಗೆ ಪಾಲಿಕೆ ಆಯುಕ್ತರಾದ ರೇಣುಕಾ ಮತ್ತಿತರರು ಬಹುಮಾನ ವಿತರಿಸಿದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ