ಜೂ.1ರಂದು ಜಿಲ್ಲಾ-ಸತ್ರ ನ್ಯಾಯಾಲಯ ಉದ್ಘಾಟನೆ

KannadaprabhaNewsNetwork |  
Published : May 28, 2025, 02:01 AM IST
ಪೊಟೋ ಮೇ.25ಎಂಡಿಎಲ್ 3ಎ, 3ಬಿ. ಮುಧೋಳ ವಕೀಲರ ಸಂಘದಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿದರು ನಂತರ ವಕೀಲರ ಸಂಘದಿಂದ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳ ಮುಧೋಳದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರಂಭಿಸಬೇಕೆಂದು ನಾವು ಹಲವು ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದ್ದೇವೆ. ಮುಧೋಳ ವಕೀಲರ ಸಂಘದ ಸದಸ್ಯರಾಗಿರುವ ಸಚಿವ ಆರ್.ಬಿ. ತಿಮ್ಮಾಪೂರ ಅವರ ಪ್ರಾಮಾಣಿಕ ಪ್ರಯತ್ನದಿಂದ ಮುಧೋಳಕ್ಕೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಜೂರಾಗಿದ್ದು, ಜೂ.1ರಂದು ಈ ನ್ಯಾಯಾಲಯದ ಉದ್ಘಾಟನಾ ಸಮಾರಂಭ ನೇರವೇರಲಿದೆ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರಂಭಿಸಬೇಕೆಂದು ನಾವು ಹಲವು ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದ್ದೇವೆ. ಮುಧೋಳ ವಕೀಲರ ಸಂಘದ ಸದಸ್ಯರಾಗಿರುವ ಸಚಿವ ಆರ್.ಬಿ. ತಿಮ್ಮಾಪೂರ ಅವರ ಪ್ರಾಮಾಣಿಕ ಪ್ರಯತ್ನದಿಂದ ಮುಧೋಳಕ್ಕೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಜೂರಾಗಿದ್ದು, ಜೂ.1ರಂದು ಈ ನ್ಯಾಯಾಲಯದ ಉದ್ಘಾಟನಾ ಸಮಾರಂಭ ನೇರವೇರಲಿದೆ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕತ್ತಿ ಹೇಳಿದರು.

ವಕೀಲರ ಸಂಘದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ನಡೆಯುವ ಪ್ರಕರಣಗಳು ಇನ್ಮುಂದೆ ಮುಧೋಳದಲ್ಲಿಯೇ ನಡೆಯಲಿವೆ. ಇದರಿಂದ ವಕೀಲರಿಗೆ, ಕಕ್ಷಿದಾರರಿಗೆ ಹೆಚ್ಚು ಅನುಕೂಲಕರವಾಗಲಿದೆ ಎಂದರು.

ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಮುಧೋಳ ವಕೀಲರ ಸಂಘದ ಸದಸ್ಯರು ತಮ್ಮನ್ನು ಭೇಟಿ ಮಾಡಿ ಮುಧೋಳದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಾರಂಭಿಸುವಂತೆ ಮನವಿ ಮಾಡಿದಾಗ ನಾನೂ ಸಹ ಮುಧೋಳ ವಕೀಲರ ಸಂಘದ ಸದಸ್ಯನಾಗಿರುವುದರಿಂದ ಹೆಚ್ಚಿನ ಮುತುವರ್ಜಿ ವಹಿಸಿ ಕಾನೂನು ಸಚಿವ ಎಚ್.ಕೆ. ಪಾಟೀಲರನ್ನು ವಕೀಲರ ಸಂಘದ ಸದಸ್ಯರನ್ನು ಖುದ್ದಾಗಿ ಭೇಟಿ ಮಾಡಿಸಿ ಮನವಿ ಮಾಡಿಕೊಂಡಾಗ ಅವರ ಸಹಕಾರ ದಿಂದ ಇಂದು ಮುಧೋಳಕ್ಕೆ ಜಿಲ್ಲಾ ಸತ್ರ ನ್ಯಾಯಾಲಯ ಮಂಜೂರು ಆಗಿದೆ ಎಂದ ಅವರು, ಈಗಿರುವ ನ್ಯಾಯಾಲಯದ ಕಟ್ಟಡದಲ್ಲಿಯೇ ಜಿಲ್ಲಾ ಸತ್ರ ನ್ಯಾಯಾಲಯದ ವಕಾಲತ್ತುಗಳು ನಡೆಯಲಿವೆ. ಇನ್ನು ಕೆಲವೇ ವರ್ಷಗಳಲ್ಲಿ ಪ್ರತ್ಯೇಕ ಜಿಲ್ಲಾ ನ್ಯಾಯಾಲಯದ ಕಟ್ಟಡವನ್ನು ನಿರ್ಮಿಸಲಾಗುವುದೆಂದು ತಿಳಿಸಿದರು.ಮುಧೋಳ ತಾಲೂಕಿನಲ್ಲಿದ್ದ 10 ಗ್ರಾಮಗಳು ರಬಕವಿ-ಬನಹಟ್ಟಿ ತಾಲೂಕಿನ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದು, ಅವುಗಳನ್ನು ಮತ್ತೆ ಮುಧೋಳ ನ್ಯಾಯಲಯಕ್ಕೆ ಸೇರ್ಪಡೆ ಮಾಡಿ ಕೊಡಬೇಕೆಂದು ಮುಧೋಳ ವಕೀಲರ ಸಂಘದಿಂದ ಸಚವರಿಗೆ ಮನವಿ ಮಾಡಿಕೊಳ್ಳಲಾಯಿತು.

ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕತ್ತಿ, ಉಪಾಧ್ಯಕ್ಷ ಬಿ.ಆರ್. ದೊಡ್ಡಟ್ಟಿ, ಕಾರ್ಯದರ್ಶಿ ಕೆ.ಎಸ್. ಬೀಳಗಿ, ಮಹಿಳಾ ಪ್ರತಿನಿಧಿ ಸವಿತಾ ಲಮಾಣಿ, ವಕೀಲರಾದ ಕೆ.ಆರ್. ಪಾಟೀಲ, ಐ. ಎಚ್. ಅಂಬಿ, ಅಶೋಕ ಕಿವಡಿ, ಬಿ.ಸಿ. ಹಿರೇಮಠ, ಬಿ.ಆರ್. ದೊಡ್ಡಟ್ಟಿ, ಎನ್.ಬಿ. ಹುಬ್ಬಳಿಕರ, ಜಿ.ಎಸ್. ಪಾಟೀಲ, ಆರ್.ಎಚ್. ಚಿಕ್ಕೂರ, ಎಸ್.ಜಿ. ಕೋರಡ್ಡಿ, ಕೆ.ಎಚ್. ಶಿರಗಾಂವಿ, ರಾಜಶೇಖರ ಹುನಗುಂದ, ಎಸ್.ಎಸ್. ಮಲಘಾಣ, ಸುನಂದಾ ತೇಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

-- ಉದ್ಘಾಟನೆ

ಜೂ.1ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಉದ್ಘಾಟಿಸುವರು, ಕಾನೂನು ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು, ನ್ಯಾಯಮೂರ್ತಿಗಳಾದ ಹಂಚಾಟೆ ಸಂಜೀವಕುಮಾರ, ರಾಮಚಂದ್ರ ಹುದ್ದಾರ, ಟಿ.ಜಿ. ಶಿವಶಂಕರೇಗೌಡ, ಸಚಿವ ಸತೀಶ ಜಾರಕಿಹೋಳಿ, ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಎಸ್.ವೈ. ವಟವಟಿ, ಎಸ್.ಎಸ್. ಮಿಟ್ಟಲಕೋಡ ಸೇರಿದಂತೆ ಇತರರು ಆಗಮಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!