29ರಂದು ರಾಣಿಬೆನ್ನೂರಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ-ಪ್ರೊ. ಮಾರುತಿ

KannadaprabhaNewsNetwork |  
Published : Dec 10, 2025, 01:15 AM IST
ಫೋಟೊ ಶೀರ್ಷಿಕೆ: 9ಆರ್‌ಎನ್‌ಆರ್5ರಾಣಿಬೆನ್ನೂರಿನ ನಾಗಶಾಂತಿ ಉನ್ನತಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಜರುಗಿತು. | Kannada Prabha

ಸಾರಾಂಶ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಈ ಬಾರಿಯ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಗರದಲ್ಲಿ ಡಿ. 29ರಂದು ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.

ರಾಣಿಬೆನ್ನೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಈ ಬಾರಿಯ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಗರದಲ್ಲಿ ಡಿ. 29ರಂದು ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.ನಗರದ ನಾಗಶಾಂತಿ ಉನ್ನತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಸುತ್ತೂರು ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ ಭಾಗವಹಿಸುವರು.ಸಮ್ಮೇಳನದಲ್ಲಿ ನಡೆಯುವ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಲಾಯಿತು. ಸ್ವಾಗತ ಸಮಿತಿ ಗೌರವಾಧ್ಯಕ್ಷರನ್ನಾಗಿ ವಾಸಣ್ಣ ಕುಸಗೂರ, ಅಧ್ಯಕ್ಷರಾಗಿ ಬಸವರಾಜ ಪಾಟೀಲ, ಕಾರ್ಯಾಧ್ಯಕ್ಷರಾಗಿ ಜಿ.ಜಿ. ಹೊಟ್ಟೀಗೌಡರ, ಕಾರ್ಯದರ್ಶಿಯಾಗಿ ರಾಜೇಶ್ವರಿ ಪಾಟೀಲ, ಸಹಕಾರ್ಯದರ್ಶಿಯಾಗಿ ಗಾಯತ್ರಮ್ಮ ಕುರವತ್ತೇರ, ಕೋಶಾಧ್ಯಕ್ಷರಾಗಿ ಎಸ್.ಬಿ. ಗುರಿಕಾರ, ಸ್ವಾಗತ ಸಮಿತಿ ಸದಸ್ಯರಾಗಿ ಎಸ್.ಎಚ್. ಪಾಟೀಲ, ಎಸ್.ಕೆ.ನೇಶ್ವಿ ನೇಮಿಸಲಾಯಿತು.ಜಗದೀಶ ಮಳಿಮಠ, ಪಿ.ವಿ. ಮಠದ, ಶೀಲಾ ಮಾಕನೂರ, ಕೆ.ಎನ್. ಕೋರಧಾನ್ಯಮಠ, ಪಾರ್ವತಿ ಬೆನಕನಕೊಂಡ, ವೀಣಾ ಸೂರಣಗಿ, ಪ್ರಭಾಕರ ಶಿಗ್ಲಿ, ನಾಗರಾಜ ಗೋಡಿಹಾಳ, ಎಸ್.ಬಿ.ಗುರಿಕಾರ, ಎಸ್.ಜಿ.ಮಹಾನುಭಾವಿಮಠ, ವಿ.ಎಸ್.ಹಿರೇಮಠ, ನಿಂಗಪ್ಪ ಕರಿಗಾರ, ವಚನಶ್ರೀ ಪಾಟೀಲ, ನಿರ್ಮಲಾ ಸಾವಳಗಿ, ಭಾಗ್ಯಾ ಗುಂಡಗಟ್ಟಿ, ಲಲಿತಾ ಅರಳಿ, ಮಂಜುಳಾ ಪಾಟೀಲ, ಗಿರಿಜಾ ಯಡಿಯಾಪುರ, ಮಂಗಳಾ ಪಾಟೀಲ, ಜಯಶ್ರೀ ನೀರಲಗಿಮಠ, ಆರ್.ಎನ್. ಅಡಿಗೇರ, ಶೋಭಾ ಅಂಗಡಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ರಾಜ್ಯ ಎಲುಬು ಕೀಲು ವೈದ್ಯರ ಸಮ್ಮೇಳನ
ಫೆ.2 ರಂದು ವಿಟಿಯು ಘಟಿಕೋತ್ಸವ-2