ಜಿಲ್ಲೆಯ ಎಸ್‌ಐಆರ್‌ ಪೂರ್ಣ, ಅಧಿಕೃತ ಪ್ರಕಟ

KannadaprabhaNewsNetwork |  
Published : Aug 25, 2026, 03:15 AM IST
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕರಡು ಮತದಾರರ ಪಟ್ಟಿಯನ್ನು ಆ.24ರಂದು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕರಡು ಮತದಾರರ ಪಟ್ಟಿಯನ್ನು ಆ.24ರಂದು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಣದಲ್ಲಿ ಸೋಮವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕರಡು ಮತದಾರರ ಪಟ್ಟಿ ಕುರಿತು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳು, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಈ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ನಂತರ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 41,07,000 ಮತದಾರರ ಪೈಕಿ 35,93,561 ಮತದಾರರಿದ್ದು ಈ ಪೈಕಿ 18,05,685 ಪುರುಷ, 17,87,715 ಮಹಿಳಾ ಹಾಗೂ 161 ಇತರೆ ಮತದಾರರಿದ್ದು 5,13,439 ಗೈರು, ಸ್ಥಳಾಂತರ, ಮೃತ ಹಾಗೂ ಇತರೆ ಮತದಾರರಿರುತ್ತಾರೆ ಎಂದು ಮಾಹಿತಿ ನೀಡಿದರು.ಯಾವ ಮತಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ?:ನಿಪ್ಪಾಣಿ-1,05,304 ಪುರುಷ 1,05,213 ಮಹಿಳಾ ಹಾಗೂ 8 ಇತರೆ ಒಟ್ಟು 2,10,525 ಮತದಾರರು. ಚಿಕ್ಕೋಡಿ-ಸದಲಗಾ: 1,05,967 ಪುರುಷ, 1,05,995 ಮಹಿಳಾ, 11 ಇತರೆ ಒಟ್ಟು 2,11,973. ಅಥಣಿ: 1,12,914 ಪುರುಷ, 1,10,082 ಮಹಿಳಾ, 6 ಇತರೆ ಒಟ್ಟು 2,23,002, ಕಾಗವಾಡ:95,492 ಪುರುಷ, 92,734 ಮಹಿಳಾ ಇತರೆ 6 ಒಟ್ಟು 1,91,048, ಕುಡಚಿ :89,426 ಪುರುಷ, 85,794 ಮಹಿಳಾ, 11 ಇತರೆ ಒಟ್ಟು 1,75,231, ರಾಯಬಾಗ: 99,623 ಪುರುಷ, 95,550 ಮಹಿಳಾ, 10 ಇತರೆ ಒಟ್ಟು 1,95,183, ಹುಕ್ಕೇರಿ: 95,893 ಪುರುಷ, 96,753 ಮಹಿಳಾ, 8 ಇತರೆ ಒಟ್ಟು 1,92,654, ಅರಭಾವಿ:1,14,059 ಪುರುಷ, 1,13,103 ಮಹಿಳಾ, 8 ಇತರೆ ಒಟ್ಟು 2,27,170, ಗೋಕಾಕ: 1,08,959 ಪುರುಷ, 1,12,237 ಮಹಿಳಾ, 17 ಇತರೆ ಒಟ್ಟು 2,21,213, ಯಮಕನಮರಡಿ: 95,049 ಪುರುಷ, 96,866 ಮಹಿಳಾ, 8 ಇತರೆ ಒಟ್ಟು 1,91,923. ಬೆಳಗಾವಿ ಉತ್ತರ: 93,601 ಪುರುಷ, 98,755 ಮಹಿಳಾ, 16 ಇತರೆ ಒಟ್ಟು 1,92,372, ಬೆಳಗಾವಿ ದಕ್ಷಿಣ: 96,113 ಪುರುಷ, 97,628 ಮಹಿಳಾ, 14 ಇತರೆ ಒಟ್ಟು 2,35,426. ಬೆಳಗಾವಿ ಗ್ರಾಮೀಣ: 1,18,303 ಪುರುಷ, 1,17,114 ಮಹಿಳಾ, ಇತರೆ 9 ಒಟ್ಟು 2,35,426, ಖಾನಾಪುರ: 1,01,866 ಪುರುಷ, 94,879 ಮಹಿಳಾ, 4 ಇತರೆ ಒಟ್ಟು 1,96,749. ಚ.ಕಿತ್ತೂರ: 92,216 ಪುರುಷ, 90,071 ಮಹಿಳಾ, 8 ಇತರೆ, ಒಟ್ಟು 1,82,2295, ಬೈಲಹೊಂಗಲ: 89,933 ಪುರುಷ, 88,965 ಮಹಿಳಾ, 2 ಇತರೆ ಒಟ್ಟು 1,78,900, ಸವದತ್ತಿ ಯಲ್ಲಮ್ಮ: 94,869 ಪುರುಷ, 93,767 ಮಹಿಳಾ, 5 ಇತರೆ ಒಟ್ಟು 1,88,641, ರಾಮದುರ್ಗ: 96,098 ಪುರುಷ, 92,209 ಮಹಿಳಾ, ಇತರೆ 10 ಒಟ್ಟು 1,88,317 ಮತದಾರರಿರುತ್ತಾರೆ.ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ನಮೂನೆ-6 ರ ಮೂಲಕ ಮತದಾರರ ನೋಂದಣಾಧಿಕಾರಿಗಳು, ಬಿಎಲ್‌ಒ ಅಥವಾ ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. 2026ರ ಅಕ್ಟೋಬರ್ 1 ಕ್ಕೆ 18 ವರ್ಷ ತುಂಬುವ ಯುವ ಮತದಾರರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.ಮತದಾರರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ 24 ರಿಂದ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಮ್ಯಾಪಿಂಗ್ ಆಗದೆ ಇರುವ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಮತದಾರರು ನೋಟಿಸಗೆ ಸಂಬಂಧಪಟ್ಟಂತೆ ವಿಚಾರಣೆಗಳನ್ನು ಗ್ರಾಮ ಪಂಚಾಯತ ಮಟ್ಟದಲ್ಲಿ ಜರುಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.ಮತಗಟ್ಟೆಗಳ ದೃಢೀಕರಣ ಕಾರ್ಯದ ನಂತರ ಜಿಲ್ಲೆಯಲ್ಲಿ 119 ಹೊಸ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 4,644 ಕ್ಕೆ ಏರಿಕೆಯಾಗಿದೆ. ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ಪರಿಷ್ಕರಣೆಯ ಅಂಗವಾಗಿ ಮತಗಟ್ಟೆಗಳ ಪುನರ್‌ ರಚನೆ ಪ್ರಕ್ರಿಯೆ ಪೂರ್ಣಗೊಂಡಿದೆ. 1,200ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳನ್ನು ವಿಭಜಿಸಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಿದೆ. ಕಟ್ಟಡಗಳ ಸ್ಥಳ ಬದಲಾವಣೆ ಹಾಗೂ ಹೆಸರು ಬದಲಾವಣೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಪ್ರಶಿಕ್ಷಣಾರ್ಥಿ ಆಯ್.ಎ.ಎಸ್.ಅಧಿಕಾರಿ ರೋಹಿತ್ ಸಿಂಗ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟಿ ವೃಕ್ಷ ಅಭಿಯಾನದಿಂದ ಅರಣ್ಯ ಪ್ರದೇಶ ಶೇ.2.4ಕ್ಕೆ ಏರಿಕೆ: ಪ್ರಶಾಂತ.ಪಿ.ಕೆ.ಎಂ
ಸಾಧನೆಗೆ ಆತ್ಮವಿಶ್ವಾಸವೇ ಶಿಖರ: ಮಂಗಳಾನಾಥನಂದಜೀ ಮಹಾರಾಜ್