ಗಂಗಾವತಿ:
ಹುಬ್ಬಳ್ಳಿಯ ಮೀಡಿಯಾ ಜೆನಿಸಿಸ್ ಕಂಪನಿ ನಗರಸಭೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ನಗರದ 9 ಸ್ಥಳಗಳಲ್ಲಿ ಬೃಹತ್ ಪ್ರಮಾಣದಲ್ಲಿ ನಾಮಫಲಕ (ಹೋಲ್ಡಿಂಗ್ಸ್) ಅಳವಡಿಸಿದ್ದರು. ಆಗ ಅವರೇ ನೀಲಕಂಠೇಶ್ವರ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೂ ಡಿವೈಡರ್ ನಿರ್ಮಿಸಿದ್ದರು. ಅದು ಕಳಪೆ ಎಂಬ ಕಾರಣಕ್ಕೆ ಈಗ ತೆರವುಗೊಳಿಸಲಾಗಿದೆ.
ಲೋಕಾಯುಕ್ತಕ್ಕೆ ದೂರು:ನಗರದ ನೀಲಕಂಠೇಶ್ವರ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರೆಗೂ ನಿರ್ಮಿಸಿದ್ದ ಡಿವೈಡರ್ ಕಳಪೆ ಮಟ್ಟದ್ದಾಗಿದೆ ಎಂದು ನಗರದ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿ ಕೂಡಲೆ ಕಳಪೆ ಮಟ್ಟದ ಡಿವೈಡರ್ ತೆರವುಗೊಳಿಸಬೇಕು ಎಂದು ಸೂಚಿಸಿದ್ದ ಹಿನ್ನೆಲೆಯಲ್ಲಿ ತೆರವು ಮಾಡಲಾಗಿದೆ.
ಈ ಹಿಂದೆ ನಿರ್ಮಿಸಿದ್ದ ಡಿವೈಡರ್ ಮೇಲೆ ಮೇಕಪ್ ಮಾಡಿ ಹೊಸದು ಎಂದು ಬಿಂಬಿಸಿದ್ದಾರೆ ಎಂದು ದೂರದಾರ ಹೇಳಿದ್ದರು. ಈಗಾಗಲೇ ನಗರದಲ್ಲಿ ಕಂಪನಿ ಅವೈಜ್ಞಾನಿಕವಾಗಿ ನಾಮಫಲಕ (ಹೋಲ್ಡಿಂಗ್ಸ್) ಹಾಕಿದ್ದಾರೆಂಬ ಕಾರಣಕ್ಕೆ ಮೂರಕ್ಕೂ ಹೆಚ್ಚು ನಾಮಫಲಕ ಕಿತ್ತೆಸೆಯಲಾಗಿದೆ. ಈಗ ಡಿವೈಡರ್ ಕೂಡ ಕಳಪೆ ಮಟ್ಟದ್ದು ಎಂದು ಆರೋಪಿಸಲಾಗಿದೆ. ಈಗ ನಗರದಲ್ಲಿ ಲೈಟಿಂಗ್ ಕಂಬ ಮತ್ತು ಡಿವೈಡರ್ ಅಳವಡಿಕೆ ಆಮೆಗತಿಯಲ್ಲಿ ಸಾಗಿದ್ದು, ಕಂಪನಿ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೂಪಾಕ್ಷಮೂರ್ತಿ ಪೌರಾಯುಕ್ತರು, ನಗರಸಭೆ