ಕೆಸಿಸಿಐ ನೂತನ ಅಧ್ಯಕ್ಷರಾಗಿ ದಿವಾಕರ್‌ ಪೈ ಕೊಚಿಕಾರ್‌

KannadaprabhaNewsNetwork |  
Published : Oct 02, 2026, 02:45 AM IST
ದಿವಾಕರ ಪೈ ಕೊಚಿಕಾರ್‌ | Kannada Prabha

ಸಾರಾಂಶ

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಕೆಸಿಸಿಐ) 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ದಿವಾಕರ್‌ ಪೈ ಕೊಚಿಕಾರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಕೆಸಿಸಿಐ) 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ದಿವಾಕರ್‌ ಪೈ ಕೊಚಿಕಾರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಕೆಸಿಸಿಐ) ಕಚೇರಿಯಲ್ಲಿ ಸೋಮವಾರ ನಡೆದ ಸಂಸ್ಥೆಯ 86ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ದಿವಾಕರ್‌ ಪೈ ಕೊಚಿಕಾರ್‌, ಉಪಾಧ್ಯಕ್ಷರಾಗಿ ಅಶ್ವಿನ್‌ ಪೈ ಮರೂರು, ಕೋಶಾಧಿಕಾರಿಯಾಗಿ ಸಿಎ ಅಬ್ದುರ್ರಹಮಾನ್‌ ಮುಸ್ಬಾ, ಕಾರ್ಯದರ್ಶಿಗಳಾಗಿ ಜೀತನ್‌ ಅಲೆನ್‌ ಸಿಕ್ವೇರಾ ಮತ್ತು ವಿನ್ಸೆಂಟ್‌ ಕುಟಿನ್ಹಾ, ನಿರ್ದೇಶಕರಾಗಿ ನಿಸಾರ್‌ ಫಕೀರ್‌ ಮೊಹಮ್ಮದ್‌, ಅಮಿತ್‌ ರಾಮಚಂದ್ರ ಆಚಾರ್ಯ, ಬಿ.ಎ.ನಝೀರ್‌, ಆದಿತ್ಯ ಪದ್ಮನಾಭ ಪೈ, ಎಂ.ಆತ್ಮಿಕಾ ಅಮಿನ್‌, ಸಿಎ ನಂದಗೋಪಾಲ್‌ ಶೆಣೈ, ಸುಜಿರ್‌ಪ್ರಸಾದ್‌ ನಾಯಕ್‌, ಅಜಯ್‌ಪ್ರಭು ಕಾರ್ಕಳ, ನಿಟ್ಟೆ ದಶರಥ್‌ ಶೆಟ್ಟಿ, ವಿನ್ಸೆಂಟ್‌ ಜೋಸೆಫ್‌ ನೀಲಿಯರ, ಬಾಳಕೃಷ್ಣ ಜನಾರ್ದನ ಜೆಪ್ಪು, ರಂಜಲ್‌ ರಜನೀಶ್‌ ನಾಯಕ್‌ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಿವಾಕರ್‌ ಪೈ ಕೊಚಿಕಾರ್‌ ಅವರು ಯಶಸ್ವಿ ಉದ್ಯಮಿಯಾಘಿದ್ದು, ಮೂರು ತಲೆಮಾರಿನ ಕೌಟಿಂಬಿಕ ಉದ್ಯಮ ಹಿನ್ನೆಲೆ ಹೊಂದಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಹಾಗೂ ವ್ಯಾಪಕ ಸಾಮಾಜಿಕ ನಾಯಕತ್ವದ ಅನುಭವ ಹೊಂದಿದ್ದಾರೆ. ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್‌ ಮತ್ತು ಇಲೆಕ್ಟ್ರಾನಿಕ್ಸ್‌ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ದಿವಾಕರ್‌ ಪೈ ಕೊಚಿಕಾರ್‌ ನೋಯ್ಡಾದ ನ್ಯೂಕ್ಲಿಯಸ್‌ ಸಾಫ್ಟ್‌ವೇರ್‌ನಲ್ಲಿ ಬ್ಯಾಂಕಿಂಗ್‌ ಸಾಫ್ಟ್‌ವೇರ್‌ ವಿಭಾಗದಲ್ಲಿ ವೃತ್ತಿ ಜೀವನ ಆರಂಭಿಸಿದರು. ನಂತರ ಇನ್ಫೋಸಿಸ್‌ ಸಂಸ್ಥೆಯಲ್ಲಿ ಆಪಲ್‌ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿ, ತವರಿಗೆ ಮರಳಿ ಕೌಟಿಂಬಿಕ ಉದ್ಯಮ ಸ್ವಸ್ತಿ ಗೋಡಂಬಿ ಉದ್ಯಮ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಜೊತೆಗೆ ರಬ್ಬರ್, ಅಡಿಕೆ, ಕಾಳುಮೆಣಸು ಕೃಷಿಯಲ್ಲೂ ಸಕ್ರಿಯರಾಗಿದ್ದಾರೆ.

2018ರಲ್ಲಿ ಕೆಸಿಸಿಐ ನಿರ್ದೇಶಕರಾಗಿ ಸಂಸ್ಥೆಗೆ ಸೇರ್ಪಡೆಯಾದ ಇವರು, ಎರಡು ಅವಧಿಗೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ರೋಟರಿ ಕ್ಲಬ್ ಕಾರ್ಯದರ್ಶಿಯಾಗಿ ಹಾಗೂ ಶತಮಾನೋತ್ಸವದ ಅಮ್ಮೆಂಬಳ ಸುಬ್ಬರಾವ್ ಪೈ ಸ್ಮಾರಕ ನಿಧಿಯ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

-----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಘು ಭೂಕಂಪನದಿಂದ ಆತಂಕ ಬೇಡ: ಭೂ ವಿಜ್ಞಾನಿ ಕೆ.ಚಂದ್ರಶೇಖರ
ಸೋಮವಾರಪೇಟೆ: ಸಾರ್ವಜನಿಕರ ಕುಂದುಕೊರತೆ ಜನಸಂಪರ್ಕ ಸಭೆ