ಉಡುಪಿ ಜಿಲ್ಲಾದ್ಯಂತ ದೀಪಾವಳಿ ಸಿದ್ಧತೆ

KannadaprabhaNewsNetwork |  
Published : Oct 20, 2025, 01:04 AM IST
19ಯಮದೀಪಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳು ಯಮದೀಪ ಪ್ರಜ್ವಲನೆ ಮಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ, ಚಿಕ್ಕಮಗಳೂರು ಕಡೆಯಿಂದ ನೂರಕ್ಕೂ ಹೆಚ್ಚು ಮಂದಿ ಹೂವಿನ ವ್ಯಾಪಾರಿಗಳು ಉಡುಪಿಯ ರಥಬೀದಿ ಮತ್ತು ಸುತ್ತಲಿನ ಬೀದಿ ಬದಿಗಳಲ್ಲಿ ಟೆಂಟ್ ಹಾಕಿಕೊಂಡು ಹಳದಿ ಸೇವೆಂತಿಗೆ ಮತ್ತು ಇತರ ಹೂವುಗಳನ್ನು ರಾಶಿ ಹಾಕಿ ಮಾರುತ್ತಿದ್ದಾರೆ, ಆದರೆ ಭಾನುವಾರ ಸಂಜೆ ಸುರಿದ ಭಾರಿ ಮಳ‍ೆ ಈ ವ್ಯಾಪಾರಿಗಳಿಗೆ ಗ್ರಾಹಕರಿಲ್ಲದೇ ನಿರಾಸೆಗೆ ಮತ್ತು ಹೂವು ಕೂಡ ಹಾಳಾಗುವ ಆತಂಕಕ್ಕೊಳಗಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಗರಿಗೆದರಿದ್ದು, ಎಲ್ಲೆಲ್ಲೂ ಹಬ್ಬದ ಸಂತಸ ಎದ್ದು ಕಾಣುತ್ತಿದೆ. ನಗರದ ಬಟ್ಟೆಯಂಗಡಿ, ಗೂಡುದೀಪ ಅಂಗಡಿಗಳು, ಸಿಹಿತಿಂಡಿ ಅಂಗಡಿಗಳಲ್ಲಿ ಜನರ ಹಬ್ಬದ ಶಾಪಿಂಗ್ ಜೋರಾಗಿ ನಡೆಯುತ್ತಿದೆ.ಶಿವಮೊಗ್ಗ, ಚಿಕ್ಕಮಗಳೂರು ಕಡೆಯಿಂದ ನೂರಕ್ಕೂ ಹೆಚ್ಚು ಮಂದಿ ಹೂವಿನ ವ್ಯಾಪಾರಿಗಳು ಉಡುಪಿಯ ರಥಬೀದಿ ಮತ್ತು ಸುತ್ತಲಿನ ಬೀದಿ ಬದಿಗಳಲ್ಲಿ ಟೆಂಟ್ ಹಾಕಿಕೊಂಡು ಹಳದಿ ಸೇವೆಂತಿಗೆ ಮತ್ತು ಇತರ ಹೂವುಗಳನ್ನು ರಾಶಿ ಹಾಕಿ ಮಾರುತ್ತಿದ್ದಾರೆ, ಆದರೆ ಭಾನುವಾರ ಸಂಜೆ ಸುರಿದ ಭಾರಿ ಮಳ‍ೆ ಈ ವ್ಯಾಪಾರಿಗಳಿಗೆ ಗ್ರಾಹಕರಿಲ್ಲದೇ ನಿರಾಸೆಗೆ ಮತ್ತು ಹೂವು ಕೂಡ ಹಾಳಾಗುವ ಆತಂಕಕ್ಕೊಳಗಾಗಿದ್ದಾರೆ.ಕೃಷ್ಣಮಠದಲ್ಲಿ ಯಮದೀಪ

ಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದಿಂದ ಸಂಪ್ರದಾಯದಂತೆ ಹಬ್ಬದ ಆಚರಣೆ ನಡೆಯುತ್ತಿವೆ. ಭಾನುವಾರ ದೀಪಾವಳಿ ಪೂರ್ವಭಾವಿಯಾಗಿ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಧ್ವಸರೋವರದ ಕರೆಯಲ್ಲಿ ಯಮದೀಪ ಪ್ರಜ್ವಾಲನೆ ಮಾಡಿದರು.ನಂತರ ಇಂದಿನ ತೈಲಭ್ಯಂಜನಕ್ಕೆ ಪೂರಕವಾಗಿ ಭಾನುವಾರ ಸಂಜೆ ಕೃಷ್ಣಮಠದಲ್ಲಿ ವಿದ್ಯುಕ್ತವಾಗಿ ಜಲಪೂರಣ ಕಾರ್ಯಕ್ರಮ ನಡೆಯಿತು. ಇಂದು ತೈಲಾಭ್ಯಂಗ - ನರಕ ಚತುರ್ದಶಿ, ಸಂಜೆ ಲಕ್ಷ್ಮೀ ಪೂಜೆ, ಬುಧವಾರ ಗೋಪೂಜೆ - ಬಲೀಂದ್ರ ಪೂಜೆ ನಡೆಯಲಿದೆ, ಇದೇ ಕ್ರಮದಲ್ಲಿ ಉಡುಪಿಯಲ್ಲಿಯೂ ದೀಪಾವಳಿ ಆಚರಣೆ ನಡೆಯಲಿದೆ.ಗೋಸೇವೆ ಪೂಜೆಗೆ ಅವಕಾಶ

ಪೇಜಾವರ ಮಠದ ನೀಲಾವರ ಮತ್ತು ಹೆಬ್ರಿಯ ಗೋಶಾಲೆಯಲ್ಲಿ ದೀಪಾವಳಿಯ ಪ್ರಯುಕ್ತ ಸಾರ್ವಜನಿಕರಿಗೆ ಗೋಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ನೀಲಾವರ ಗೋಶಾಲೆಯಲ್ಲಿ ಅ.22ರಂದು ಬೆಳಿಗ್ಗೆ 8 ಗಂಟೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರ ಉಪಸ್ಥಿತಿಯಲ್ಲಿ ಸಾಮೂಹಿಕ ಗೋಪೂಜೆ ಮತ್ತು ಗೋಗ್ರಾಸ ಸೇವೆ ನಡೆಯಲಿದೆ.ಮನೆಯಲ್ಲಿ ಗೋವುಗಳಿಲ್ಲದ ಭಕ್ತರು ಈ ಗೋಶಾಲೆಗಳಿಗೆ ತೆರಳಿ ಗೋವುಗಳಿಗೆ ಸ್ನಾನ ಮಾಡಿಸುವ, ಅಲಂಕಾರ ಮಾಡಿಸುವ, ಗೋಶಾಲೆ ಸ್ವಚ್ಛಗೊಳಿಸುವ ಸೇವೆಗಳ ಮೂಲಕ ಅರ್ಥಪೂರ್ಣ ಗೋಪೂಜೆಗೂ ಅವಕಾಶ ಇದೆ.ಅಂಗಡಿಗಳು ರಶ್‌

ದೀಪಾವಳಿ ಹಬ್ಬದ ಕಾರಣಕ್ಕೆ ಶಾಪಿಂಗ್ ನಡೆಸುವವರಿಂದಾಗಿ ಕಳೆದೆರಡು ದಿನಗಳಿಂದ ಉಡುಪಿಯ ಬಹುತೇಕ ಬಟ್ಟೆಯಂಗಡಿಗಳು ತುಂಬಿ ತುಳುಕುತ್ತಿವೆ, ಪರಿಣಾಮ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಉಡುಪಿ ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ಅವ್ಯವಸ್ಥೆ ಎದ್ದು ಕಾಣುತ್ತಿವೆ. ಟ್ರಾಫಿಕ್ ಜಾಮ್ ತಡೆಯಲು ಪೊಲೀಸರು ಹರಸಾಹಸಪಡುತಿದ್ದಾರೆ

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ