ಬೆಲೆ ಏರಿಕೆ ನಡುವೆ ದೀಪಾವಳಿ ಖರೀದಿ ಭರಾಟೆ

KannadaprabhaNewsNetwork |  
Published : Nov 08, 2026, 01:15 AM IST
ಸಿಕೆಬಿ-1 ಮತ್ತು 2 ಬರದಲ್ಲೂ ದೀಪಾವಳಿ ಹಬ್ಬದ ಖರೀದಿಯಲ್ಲಿ ತೊಡಗಿರುವ ಜನತೆಸಿಕೆಬಿ-3 ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಯಲ್ಲಿ ತೊಡಗಿರುವ ಜನತೆ             | Kannada Prabha

ಸಾರಾಂಶ

ದಿನದಿಂದ ದಿನಕ್ಕೆ ದಿನಬಳಕೆ ವಸ್ತುಗಳು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ದೀಪಾವಳಿ ಹಬ್ಬಕ್ಕಾಗಿ ಹೂವು, ಹಣ್ಣು, ಪಟಾಕಿ ಖರೀದಿಯಲ್ಲಿ ತೊಡಗಿರುವ ನಾಗರಿಕರು ಭರ್ಜರಿ ಆಚರಣೆಗೆ ಖರೀದಿ ಮಾಡುತ್ತಿರುವುದು ಕಂಡು ಬಂತು.

ಜಿಲ್ಲೆಯಲ್ಲಿ ಶೇ. 60ಕ್ಕೂ ಹೆಚ್ಚು ಮಳೆಯ ಕೊರತೆ । ಎಲ್ಲ ವಸ್ತುಗಳ ಬೆಲೆ ಗಗನಮುಖಿ । ಹೂವು, ಹಣ್ಣು, ಪಟಾಕಿ ಖರೀದಿ ಜೋರು

ದಯಾಸಾಗರ್ ಎನ್.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬರ ಹಾಗೂ ಬೆಲೆ ಏರಿಕೆ ನಡುವೆಯೂ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಜಿಲ್ಲೆಯ ಜನತೆ ಸಜ್ಜಾಗಿದ್ದು, ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯುತ್ತಿದೆ.

ಜಿಲ್ಲೆಯಲ್ಲಿ ಶೇ. 60ಕ್ಕೂ ಹೆಚ್ಚು ಮಳೆಯ ಕೊರತೆಯಿಂದ ಬರ ಆವರಿಸಿದ್ದರೂ ಬರದ ನಡುವೆಯೂ ಜನತೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ನಗರದ ಬಜಾರ್‌ ರಸ್ತೆ, ಸಂತೇಪೇಟೆ, ನಗರಸಭೆಯ ಖಾಸಗಿ ಬಸ್​ ನಿಲ್ದಾಣ, ಬಿಬಿ ರಸ್ತೆ, ಎಂಜಿ ರಸ್ತೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ.

ದಿನದಿಂದ ದಿನಕ್ಕೆ ದಿನಬಳಕೆ ವಸ್ತುಗಳು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ದೀಪಾವಳಿ ಹಬ್ಬಕ್ಕಾಗಿ ಹೂವು, ಹಣ್ಣು, ಪಟಾಕಿ ಖರೀದಿಯಲ್ಲಿ ತೊಡಗಿರುವ ನಾಗರಿಕರು ಭರ್ಜರಿ ಆಚರಣೆಗೆ ಖರೀದಿ ಮಾಡುತ್ತಿರುವುದು ಕಂಡು ಬಂತು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೂವಿನ ಬೆಲೆ ಕೊಂಚ ಕಡಿಮೆಯಾಗಿದೆ. ನೂರು ಗ್ರಾಂ ಹೂವಿಗೆ ಕನಕಾಂಬರ, ಮಲ್ಲಿಗೆ, ಮಲ್ಲೆ ಸೇರಿದಂತೆ ವಿವಿಧ ಹೂವಿನ ಬೆಲೆಗಳು ದುಬಾರಿಯಾಗಿದೆ. ಸೇವಂತಿ ಒಂದು ಕೆಜಿಗೆ 100ರಿಂದ 150 ರೂಪಾಯಿಗೆ ಮಾರಾಟವಾಗುತ್ತಿದೆ. ಗುಲಾಬಿ ಕೆ.ಜಿಗೆ 170-250, ಚೆಂಡು ಹೂವು 80-100 ರು.ಗೆ ಮಾರಾಟವಾಗುತ್ತಿದೆ.

ನಿನ್ನೆಶುಕ್ರವಾರ ಸೇವಂತಿಗೆಯ ವಿವಿಧ ಬಗೆ ಹೂಗಳು ಒಂದು ಒಂದು ಕೆಜಿಗೆ 150ರಿಂದ 200 ರು., ಚೆಂಡು 30ರಿಂದ 60 ರು.ಗೆ ಮಾರಾಟವಾಗಿತ್ತು ಆದರೆ ಇಂದು ಬೆಲೆ ಏರಿಕೆ ಕಂಡಿದೆ. ಹೊಸ ಬಿದಿರಿನ ಮರ ಒಂದು ಜೊತೆಗೆ 150 ರಿಂದ 300 ರು.ವರೆಗೆ ಮಾರಾಟವಾಗುತ್ತಿದ್ದವು. ಒಂದು ಜತೆ ಬಾಳೆಕಂದಿಗೆ 50 ರಿಂದ 100 ರು. ಮಾವಿನ ಸೊಪ್ಪು ಕಟ್ಟಿಗೆ 20 ರು. ಇದ್ದರೂ ಜನಕೊಳ್ಳಲು ಮುಂದಾಗುತ್ತಿದ್ದಾರೆ.

ಹೂವಿನ ಬೆಲೆ ಕಡಿಮೆಯಾಗಿರುವಂತೆಯೇ ಹಣ್ಣುಗಳ ಬೆಲೆ ತೀವ್ರವಾಗಿತ್ತು. ಒಂದು ಕೆಜಿ ಸೇಬಿಗೆ 200 ರು., ಏಲಕ್ಕಿ ಬಾಳೆಹಣ್ಣು ಕೆಜಿಗೆ 100ರಿಂದ 120 ರು., ಪಚ್ಚಬಾಳೆ 40ರಿಂದ 60 ಮೋಸಂಬಿ 100 ರಿಂದ 120 ರು., ದಾಳಿಂಬೆ ಒಂದು ಕೆಜಿಗೆ 200 ರು. ಸಪೋಟ 100 ರು, ಸೀಬೆಹಣ್ಣು 80-100 ರು. ಕಿತ್ತಲೆ -80-120, ಡ್ರಾಗನ್ ಪ್ರೂಟ್-150 ರು, ಹೀಗೆ ಈ ರೀತಿ ಎಲ್ಲ ಹಣ್ಣುಗಳ ಬೆಲೆಗಳು ದುಬಾರಿಯಾಗಿವೆ. ಸಾಮಾನ್ಯ ನಾಗರಿಕರು ಖರೀದಿ ಮಾಡಲಾರದಂತಹ ಸ್ಥಿತಿ ಬಂದೊದಗಿದೆ.

ನೂಮು ದಾರ ಒಂದಕ್ಕೆ ರು. 5ರಿಂದ 15ಕ್ಕೆ ಮಾರಾಟವಾದರೆ, ಕೆಲವರಿಗೆ ಮನೆಯಲ್ಲಿ ನೂತನ ದಂಪತಿಗೆ ಮತ್ತು ನೂತನ ಶಿಶುಗಳಿಗೆ ಬಂಗಾರದ ಗೆಜ್ಜೆ-ಮುಡಿ ಖರೀದಿಸಲು ಕನಿಷ್ಠ 8 ರಿಂದ ಹತ್ತು ಸಾವಿರ , ಬೆಳ್ಳಿ ಗೆಜ್ಜೆ-ಮುಡಿಗೆ 2 ರಿಂದ 3 ಸಾವಿರ ಬೇಕಾಗುತ್ತಿತ್ತು. ಆದರೂ ಸಹ ಜನ ಗಜ್ಜೆ- ಮುಡಿ ಖರೀದಿಗೆ ಜನ ಮುಗಿಬಿದ್ದರು.

ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿವಿಧ ರೀತಯ ಅಲಂಕಾರಿಕ ಮಣ್ಣಿನ ದೀಪಗಳನ್ನು ನಗರದ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಮಾರಾಟಕ್ಕಿಡಲಾಗಿದೆ. ಮೀಡಿಯಂ ದೀಪಗಳು 10 ರುಗೆ ಎರಡರಂತೆ ಮತ್ತು ವಿವಿಧ ಆಕಾರದ ದೀಪಗಳು 100 ರು.ವರೆಗೂ ಮಾರಾಟವಾಗುತ್ತಿವೆ. ಸಾರ್ವಜನಿಕರು ತಮಗೆ ಬೇಕಿರುವ ಆಕಾರದ ದೀಪಗಳನ್ನು ಖರೀದಿ ಮಾಡುತ್ತಿರುವುದು ಕಂಡುಬಂದಿತು.

ನಗರದ ಬಜಾರ್‌ ರಸ್ತೆ, ಸಂತೇಪೇಟೆ, ನಗರಸಭೆಯ ಖಾಸಗಿ ಬಸ್​ ನಿಲ್ದಾಣ, ಬಿಬಿ ರಸ್ತೆ, ಎಂಜಿ ರಸ್ತೆಯಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಕೆಲ ಸಮಯ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾವುದೇ ಅಹಿತಕರ ಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ.

ಬೆಲೆ ಏರಿಕೆ ಬಿಸಿ:

ದಿನಸಿ ಬೆಲೆಗಳು ದುಪ್ಪಟ್ಟಾಗಿದ್ದು, ಬೇರೆ ತರಕಾರಿಗಳಿಗೆ ಹೊರತುಪಡಿಸಿದರೆ ಈರುಳ್ಳಿ ಬೆಲೆ ಬಲು ದುಬಾರಿಯಾಗಿದೆ. ಬೆಲೆ ಎಷ್ಟೇ ಏರಿಕೆಯಾದರೂ ಹಬ್ಬದ ತಯಾರಿ ಏನು ಕಡಿಮೆಯಾಗಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲು ಗ್ರಾಹಕರು ಮಾರುಕಟ್ಟೆ ಸೇರಿದಂತೆ ಅಂಗಡಿ ಮುಂಗ್ಗಟ್ಟುಗಳಲ್ಲಿ ಹಬ್ಬಕ್ಕೆ ಬೇಕಿರುವ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಆದೇಶ

ಪಟಾಕಿ ದುರಂತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಟಾಕಿ ಬಳಕೆ ಮಾಡುವುದನ್ನು ಸರ್ಕಾರವು ನಿಷೇಧಿಸಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಬಳಕೆ ಮಾಡಲು ಸುತ್ತೋಲೆ ಹೊರಡಿಸಿದೆ. ಇದರಿಂದಾಗಿ ದೀಪಾವಳಿ ಹಬ್ಬದಲ್ಲಿ ಕಳೆದ ಬಾರಿಗಿಂತ ಈ ಬಾರಿ ಸಿಕ್ಕಾ ಪಟ್ಟೆ ಬೆಲೆ ಹೆಚ್ಚಾಗಿ ಇದ್ದರೂ ಸಹ ನಾಗರಿಕರು ಪಟಾಕಿಕೊಳ್ಳುವುದರಲ್ಲಿ ಎನೂ ಕಡಿಮೆಯಾಗಿಲ್ಲಾ, ಕೆಲ ಪರಿಸರ ಪ್ರೇಮಿಗಳು ಮಾತ್ರ ಪರಿಸರ ಸಂರಕ್ಷಣೆಗಾಗಿ ಪಟಾಕಿ ಸಿಡಿಸಲು ಹಿಂಜರಿಕೆ ಕಂಡುಬಂದಿದೆ.

ಸಿಕೆಬಿ-1 ಮತ್ತು 2 ಬರದಲ್ಲೂ ದೀಪಾವಳಿ ಹಬ್ಬದ ಖರೀದಿಯಲ್ಲಿ ತೊಡಗಿರುವ ಜನತೆ

ಸಿಕೆಬಿ-3 ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಯಲ್ಲಿ ತೊಡಗಿರುವ ಜನತೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ