ರಾಮನಗರ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರು ತಮ್ಮ ಸನ್ನಡತೆ, ಶುದ್ಧ ಚಾರಿತ್ರ್ಯ, ವಿದ್ವತ್ ಪೂರ್ಣ ಮಾತುಗಾರಿಕೆ ಹಾಗೂ ಸ್ನೇಹಮಯ ವ್ಯಕ್ತಿತ್ವಗಳಿಂದ ರಾಜಕೀಯ ರಂಗದ ಎದುರಾಳಿಗಳಿಂದಲೂ ಪ್ರಶಂಸೆಗೆ ಪಾತ್ರರಾದ ಅಪರೂಪದ ವ್ಯಕ್ತಿಯಾಗಿದ್ದರು.ಅವರಿಂದ ಆಕರ್ಷಿತರಾದ ರಾಜಕಾರಣಿಗಳೇ ಇರಲಿಲ್ಲ. ಅಂಥವರ ಸಾಲಿಗೆ ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರ ಶಾಸಕರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಸೇರಿದವರು. ಎಸ್.ಎಂ. ಕೃಷ್ಣ ಅವರನ್ನೇ ಡಿ.ಕೆ.ಶಿವಕುಮಾರ್ ರವರು ರಾಜಕಾರಣದ ಗಾಡ್ ಫಾದರ್ ಆಗಿ ಸ್ವೀಕರಿದ್ದರು.ಡಿ.ಕೆ.ಶಿವಕುಮಾರ್ ಅವರು ಬಂಗಾರಪ್ಪರವರ ನಂತರ ಎಸ್.ಎಂ.ಕೃಷ್ಣ ಅವರನ್ನು ಮೆಚ್ಚಿಕೊಂಡಿದ್ದರು. ಅವರ ರಾಜಕೀಯ ಬೆಳವಣಿಗೆಯ ಪ್ರತಿ ಹೆಜ್ಜೆಯಲ್ಲಿ ಕೃಷ್ಣ ಅವರೇ ಮಾರ್ಗದರ್ಶಕರಾಗಿದ್ದರು. ಕಾಲಾನಂತರ ಕೃಷ್ಣ ಮತ್ತು ಡಿ.ಕೆ.ಶಿವಕುಮಾರ್ ರವರ ಕುಟುಂಬಗಳು ಒಂದಾಗುತ್ತಿದ್ದಂತೆ ಇಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು.
ಆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಸಾತನೂರು ಕ್ಷೇತ್ರದಲ್ಲಿ ಎಚ್ .ಡಿ.ಕುಮಾರಸ್ವಾಮಿ ಅವರನ್ನು ಮಣಿಸಿದ್ದರು. ಆನಂತರ ಕೃಷ್ಣರವರ ನೇತೃತ್ವದ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ನಗರಾಭಿವೃದ್ಧಿ ಹಾಗೂ ಸಹಕಾರ ಖಾತೆ ಸಚಿವರಾದರು. ಅಲ್ಲದೆ, ರಾಜ್ಯ ನಗರ ಯೋಜನಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಕೃಷ್ಣರವರ ಸೂಚನೆ ಮೇರೆಗೆಯೇ ಡಿ.ಕೆ.ಶಿವಕುಮಾರ್ ರವರು 2002ರ ಕನಕಪುರ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಜೆಡಿಎಸ್‌ನ ಪ್ರಬಲ ನಾಯಕ ಎಚ್.ಡಿ.ದೇವೇಗೌಡ ವಿರುದ್ಧ ತೊಡೆ ತಟ್ಟಿದ್ದರು.
--------10ಕೆಆರ್ ಎಂಎನ್ 11,12.ಜೆಪಿಜಿ
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಂದ ಡಿ.ಕೆ.ಶಿವಕುಮಾರ್ ಆಶೀರ್ವಾದ ಪಡೆಯುತ್ತಿರುವುದು.