ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕ ಕರುಣಾಕರ ಹಾಗೂ ಕಿರಿಯ ಶಾಖಾ ನಿರೀಕ್ಷಕ ರಾಜಾರಾಮ ರಾವ್ ಡಿ. ಅವರು ಸೇವಾ ನಿವೃತ್ತಿ ಹೊಂದಿದ್ದು, ಅವರ ಬೀಳ್ಕೊಡುಗೆ ಸಮಾರಂಭ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.ಕರುಣಾಕರ ಅವರು 32 ವರ್ಷ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಸಹಾಯಕ ಮಹಾಪ್ರಬಂಧಕರಾಗಿ ನಿವೃತ್ತಿ ಹೊಂದುತ್ತಿದ್ದು ಮತ್ತು ರಾಜರಾಮ ರಾವ್ ಅವರು ಕೂಡಾ 32 ವರ್ಷ ಸೇವೆ ಸಲ್ಲಿಸಿ ಕಿರಿಯ ಶಾಖಾ ನಿರೀಕ್ಷಕರಾಗಿ ನಿವೃತ್ತಿ ಹೊಂದಿದ್ದಾರೆ.ನಿವೃತ್ತಿ ಹೊಂದಿದ ಇಬ್ಬರು ಅಧಿಕಾರಿಗಳನ್ನು ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಹಾರ, ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಶುಭಹಾರೈಸಿದರು.
---------------------------