ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ಅವರು, ಇನ್ನು ಎರಡು ವರ್ಷದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಸಮಾಜಮುಖಿಯಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರು ಮಹಿಳೆಯರಿಗೆ ಅನುಕೂಲವಾಗುವಂತಹ ಉತ್ತಮ ಕಾರ್ಯಗಳು ನಡೆಯಲಿ ಎಂದರು.
ಪ್ರತಿಯೊಂದು ಸಮಾಜಕ್ಕೂ, ಧರ್ಮಕ್ಕೂ ಸಮಾನವಾಗಿ ಕೆಲಸ ಮಾಡುವ ಮೂಲಕ ರಾಜ್ಯದ ಆದರ್ಶ ಮುಖ್ಯಮಂತ್ರಿಯಾಗಿ ಇನ್ನು 12 ವರ್ಷಗಳ ಕಾಲ ರಾಜ್ಯದ ಪ್ರಜೆಗಳ ಸೇವೆ ಮಾಡಲಿ. ಈಗಿರುವ ಪಂಚ ಗ್ಯಾರಂಟಿಗಳ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು. ಇವರು ಅವಧಿಯಲ್ಲಿ ಮಳೆ ಬೆಳೆ ಪ್ರಕೃತಿಯಲ್ಲಿ ಉತ್ತಮ ವಾತಾವರಣ ನಿರ್ಮಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್, ರಾಜ್ಯ ಹಿಂದುಳಿದ ವರ್ಗಗಳ ಮುಖಂಡ ಬಿ.ಎಮ್. ಹರ್ಷ, ಶಿವಮೊಗ್ಗ ಜಿಲ್ಲಾ ಐಎನ್‌ಟಿಯುಸಿ ಮಹಿಳಾ ವಿಭಾಗದ ಅಧ್ಯಕ್ಷೆ ಕವಿತಾ ರಾಘವೇಂದ್ರ, ಕೆಪಿಸಿಸಿ ಸಂಯೋಜಕ ಕವಿತಾ, ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಎಸ್.ಎ. ಬಾಬು, ಹುಸೇನ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಸ್ಟೆಲಾ ಮಾರ್ಟಿನ್, ಗ್ಲಾಡಿನ್ ಗೋಂದಿ ಚಟ್ನಳ್ಳಿ ರಾಜೀವ, ನಿಸಾರ್ ಅಹಮದ್, ಜೋಳ ದಾಲ್ ನಾಗರಾಜ್ ಮುಂತಾದವರು ಇದ್ದರು.