ತುರುವೇಕೆರೆ: ರಾಜ್ಯದ 25 ನೇ ಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭವನ್ನು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಬಹಳ ಸಡಗರ ಸಂಭ್ರಮದಿಂದ ನಡೆಸಿದರು.
ತುರುವೇಕೆರೆ: ರಾಜ್ಯದ 25 ನೇ ಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭವನ್ನು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಬಹಳ ಸಡಗರ ಸಂಭ್ರಮದಿಂದ ನಡೆಸಿದರು.
ಪಟ್ಟಣದ ರಾಘವೇಂದ್ರ ಭವನದ ಮುಂಭಾಗ ಶಾಮಿಯಾನ ಹಾಕಿ ಬೃಹತ್ ಎಲ್ ಇ ಡಿ ಪರದೆಯ ಮೇಲೆ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಸನ್ನಿವೇಶವನ್ನು ಮನಸಾರೆ ನೋಡಿ ಸಂತೋಷ ಪಟ್ಟರು. ಮಧ್ಯಾಹ್ನ 2 ಗಂಟೆಯಿಂದಲೇ ಟಿವಿಯಲ್ಲಿ ಪ್ರಸಾರವಾಗುವ ಎಲ್ಲಾ ದೃಶ್ಯಗಳನ್ನು ದೊಡ್ಡ ಪರದೆಯ ಮೇಲೆ ಬಿತ್ತರಿಸಿದರು. ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಅವರಿಗೆ ಜಯಘೋಷ ಕೂಗಿದರು. ಡಿ.ಕೆ. ಡಿ.ಕೆ. ಎಂಬ ಶಬ್ದ ಮಾರ್ದನಿಸಿತು. ಆ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಎಲ್ಲಾ ಅಭಿಮಾನಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಳಾಲ ನಾಗರಾಜು, ದೇವರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್. ಆರ್.ಜಯರಾಮ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಗೋಣಿತುಮಕೂರು ಕಾಂತರಾಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಟಿ.ಎನ್.ಶಶಿಕುಮಾರ್, ಟಿ.ಎನ್. ಶಿವರಾಜು, ಶ್ರೀನಿವಾಸ್, ಮಾಜಿ ಸದಸ್ಯ ಯಜಮಾನ್ ಮಹೇಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಂಪರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಕಾಂಗ್ರೆಸ್ ಮುಖಂಡರಾದ ವೇಣುಗೋಪಾಲ್, ಗುರುದತ್, ನಂಜುಂಡಪ್ಪ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.