ಡಿಕೆಶಿ ಪದಗ್ರಹಣ: ಮಡಿಕೇರಿಯಲ್ಲಿ ಸಂಭ್ರಮಾಚರಣೆ

KannadaprabhaNewsNetwork |  
Published : Jun 04, 2026, 02:30 AM IST
ಸಂಭ್ರಮ | Kannada Prabha

ಸಾರಾಂಶ

ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಐತಿಹಾಸಿಕ ಕ್ಷಣದ ಸಂಭ್ರಮವನ್ನು ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಐತಿಹಾಸಿಕ ಕ್ಷಣದ ಸಂಭ್ರಮವನ್ನು ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸಿದರು.

ಪ್ರಮಾಣವಚನ ಸ್ವೀಕಾರದ ಸಂತೋಷಕ್ಕಾಗಿ ಕೊಡಗು ಜಿಲ್ಲೆಯಾದ್ಯಂತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಮಡಿಕೇರಿಯ ಇಂದಿರಾ ಗಾಂಧಿ ವೃತ್ತದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಪ್ರಮುಖರು, ಕಾರ್ಯಕರ್ತರು ಡಿಕೆ ಶಿವಕುಮಾರ್, ರಾಹುಲ್ ಗಾಂಧಿ, ಸಿದ್ದರಾಮಯ್ಯ ಪರ ಘೋಷಣೆ ಕೂಗಿ, ಪಕ್ಷದ ಬಾವುಟಗಳನ್ನು ಪ್ರದರ್ಶಿಸಿದರು.

ಮಡಿಕೇರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ, ಕಾಂಗ್ರೆಸ್‌ ಮುಖಂಡರಾದ ಕಲೀಲ್ ಬಾಷಾ, ಯಶ್ ದೋಲ್ಪಾಡಿ, ಫ್ಯಾನ್ಸಿ ಪಾರ್ವತಿ, ದಿನೇಶ್ ಶೆಟ್ಟಿ, ಚಂದ್ರಶೇಖರ್ ಆರ್.ಪಿ., ಮುದ್ದುರಾಜು, ರವುಫ್ ಅಹಮದ್‌, ಕೋಚನ ಚೇತನ್, ಪುಷ್ಪ ಪೂರ್ಣಚ್ಚ, ನಂದ, ಸುಬ್ರಮಣಿ ಎಚ್‌.ಕೆ., ಜಿ.ಆ‌ರ್. ರಾಜು, ವಿ.ಕೆ. ನಜೀರ್ ಹುಸೇನ್‌, ಸದಾ ಮುದ್ದಪ್ಪ, ಜಗದೀಶ್‌ ಜಿ.ಸಿ, ಪವಿತ್ರ, ವಿಮಲಾ, ಪ್ರೇಮಾ, ಲೀಲಾ ಶೇಷಮ್ಮ, ನಿಂಗಪ್ಪ, ಧನಲಕ್ಷ್ಮಿ, ಫರೀದಾ ಬಾನು, ತಾಜುನ್ನಿಸ, ರವಿ ಪಾಪು, ರಿಯಾಸುದ್ದೀನ್, ಸೈಮನ್, ದಯಾನಂದ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲಂಪಿಯಡ್ ಪರೀಕ್ಷೆ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್
ಜಿಲ್ಲಾ ವೀರಶೈವ ಜಂಗಮ ಅರ್ಚಕ, ಪುರೋಹಿತರ ಸಂಘದ ವಾರ್ಷಿಕ ಮಹಾಸಭೆ