.ಡಿಕೆಶಿ ಸಿಎಂ ಆಗಲೆಂದು ಹರಕೆ; ರಾಜೀವ್‌ಗೌಡರಿಂದ ತಿರುಪತಿಯಲ್ಲಿ ಮುಡಿ ಸೇವೆ

KannadaprabhaNewsNetwork |  
Published : May 29, 2026, 01:30 AM IST
ಸುದ್ದಿ ಚಿತ್ರ ೧  : ಡಿಕೆಶಿ ಅವರು ಮುಖ್ಯಮಂತ್ರಿ ಆಗಲೆಂದು ಹರಕೆ ಹೊತ್ತಿದ್ದ ಶಿಡ್ಲಘಟ್ಟದ ಮುಖಂಡ ರಾಜೀವ್‌ಗೌಡ ಅವರು ತಮ್ಮ ಕುಟುಂಬ, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಅಲ್ಲಿ ಕೇಶ ಮುಡಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು | Kannada Prabha

ಸಾರಾಂಶ

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ಮುಡಿಯನ್ನು ಅರ್ಪಿಸುವುದಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹರಕೆ ಹೊತ್ತಿದ್ದರಂತೆ. ಅದರಂತೆ ರಾಜೀವ್ ಗೌಡ ಅವರು ಕುಟುಂಬದವರು,ಬೆಂಬಲಿಗರೊಂದಿಗೆ ಗುರುವಾರ ತಿರುಪತಿಗೆ ಮೆಟ್ಟಿಲು ಮೂಲಕ ಹತ್ತಿ ಅಲ್ಲಿ ಕೇಶ ಮುಡಿ ನೀಡಿ ನಂತರ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಡ್ಲಘಟ್ಟ

ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾವುದೇ ಅಡ್ಡಿ ಆತಂಕವಿಲ್ಲದೆ ಮುಖ್ಯಮಂತ್ರಿಯಾಗಲಿ ಎಂದು ಎಬಿಡಿ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಬಿ.ವಿ. ರಾಜೀವ್‌ಗೌಡ ಅವರು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ವಿಶೇಷ ಪೂಜೆ ನೆರವೇರಿಸಿ ಮುಡಿ ಅರ್ಪಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ಮುಡಿಯನ್ನು ಅರ್ಪಿಸುವುದಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹರಕೆ ಹೊತ್ತಿದ್ದರಂತೆ. ಅದರಂತೆ ರಾಜೀವ್ ಗೌಡ ಅವರು ಕುಟುಂಬದವರು,ಬೆಂಬಲಿಗರೊಂದಿಗೆ ಗುರುವಾರ ತಿರುಪತಿಗೆ ಮೆಟ್ಟಿಲು ಮೂಲಕ ಹತ್ತಿ ಅಲ್ಲಿ ಕೇಶ ಮುಡಿ ನೀಡಿ ನಂತರ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಈ ವೇಳೆ ಮಾತನಾಡಿದ ರಾಜೀವ್‌ಗೌಡ ಅವರು, ಡಿ.ಕೆ ಶಿವಕುಮಾರ್ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದು ಈ ನಾಡಿನ ಕೋಟ್ಯಂತರ ಯುವಕರು, ರಾಜಕಾರಣಿಗಳು, ಸಮುದಾಯದವರು ಹಾಗೂ ಅವರ ಬೆಂಬಲಿಗರ ಕನಸಾಗಿತ್ತು. ಇದೀಗ ಅಂತಹ ಅಪರೂಪದ ಕ್ಷಣ ಹತ್ತಿರವಾಗುತ್ತಿದ್ದು ಯಾವುದೇ ವಿಘ್ನಗಳು ಎದುರಾಗದಂತೆ ಡಿಕೆಶಿ ಅವರು ಮುಖ್ಯಮಂತ್ರಿ ಆಗಲಿ ಎಂದು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಮೆಟ್ಟಿಲು ಹತ್ತಿಕೊಂಡು ಬಂದು ಕೇಶ ಮುಡಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದರು.ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನ ರಾಜೀವ್‌ಗೌಡ, ಕಾಂಗ್ರೆಸ್ ಮುಖಂಡ ವರದಣ್ಣ ಸೇರಿ ಅವರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸುದ್ದಿ ಚಿತ್ರ ೧ :

ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಲೆಂದು ಹರಕೆ ಹೊತ್ತಿದ್ದ ಶಿಡ್ಲಘಟ್ಟದ ಮುಖಂಡ ರಾಜೀವ್‌ಗೌಡ ಅವರು ತಮ್ಮ ಕುಟುಂಬ, ಕಾರ್ಯಕರ್ತರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಕೇಶ ಮುಡಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಖಂಡ ಶ್ರೀನಿವಾಸಮೂರ್ತಿ ಜೆಡಿಎಸ್‌ ಸೇರ್ಪಡೆ
ಅಡ್ಡಮತ: ವರಿಷ್ಠರ ಭೇಟಿಗೆ ಬಿವೈವಿ, ಅಶೋಕ್‌ ದೆಹಲಿಗೆ