- ಕೃಷಿ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ।
ಕನ್ನಡಪ್ರಭ ವಾರ್ತೆ, ದಾವಣಗೆರೆ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರೈತರಿಗೆ ಕೃತಕ ಅಭಾವ ಸೃಷ್ಟಿಯಾಗದಂತೆ ಬಿತ್ತನೆಬೀಜ, ರಸಗೊಬ್ಬರ ಸಮರ್ಪಕ ವಿತರಣೆ ಮಾಡಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಸೂಚಿಸಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ತಾಲೂಕಿನ ಆನಗೋಡು ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿ, ರೈತರಿಗೆ ವಿತರಣೆ ಮಾಡಲು ದಾಸ್ತಾನು ಮಾಡಿರುವ ಬಿತ್ತನೆಬೀಜ, ರಸಗೊಬ್ಬರ ಪರಿಶೀಲನೆ ನಡೆಸಿದ ಅವರು, ಕೃಷಿ ಅಧಿಕಾರಿಗಳಿಗೆ ಸಲಹೆ ನೀಡಿದರು.''''''''ಎಂ.ಕೆ., ಡಿಕೆಸಿ, ಗಂಗಾ ಕಾವೇರಿ'''''''' ರೈತರ ಬೇಡಿಕೆ ಇರುವ ಮೆಕ್ಕೆಜೋಳ ಬಿತ್ತನೆ ಬೀಜಗಳು. ಆದರೆ, ಇಲ್ಲಿ ಬೇರೆ ಕಂಪನಿಗಳ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕೂಡಲೇ ಜಂಟಿ ಕೃಷಿ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ, ರೈತರ ಬೇಡಿಕೆಗೆ ಅನುಗುಣವಾಗಿ ಮೆಕ್ಕೆಜೋಳ ಬಿತ್ತನೆ ಬೀಜ, ರಸಗೊಬ್ಬರ ತರಿಸಿ ವಿತರಣೆ ಮಾಡಬೇಕು. ರೈತರಿಗೆ ಬೇಡವಾದ ಬಿತ್ತನೆ ಬೀಜ ಇಲ್ಲಿ ದಾಸ್ತಾನು ಮಾಡಲಾಗಿದೆ. ಕೂಡಲೇ ಈ ಬಿತ್ತನೆ ಬೀಜಗಳನ್ನು ವಾಪಸ್ ಕಳುಹಿಸಿ, ರೈತರಿಗೆ ಅಗತ್ಯ ಬೇಕಾದ ಬಿತ್ತನೆ ಬೀಜಗಳ ವಿತರಿಸಬೇಕೆಂದು ತಾಕೀತು ಮಾಡಿದರು.
ಬಿತ್ತನೆ ಬೀಜಗಳನ್ನು ಪ್ರಾಯೋಗಿಕವಾಗಿ ಬೀಜ ಹಾಕಿ, ಪರೀಕ್ಷೆಗೆ ಒಳಪಡಿಸಬೇಕು. ಅದು ಉತ್ಕೃಷ್ಟವಾಗಿ ಮೊಳಕೆಯೊಡೆದರೆ ಆ ಬೀಜಗಳನ್ನು ರೈತರಿಗೆ ವಿತರಿಸಬೇಕು. ಈಗ ರೈತರಿಗೆ ಬೇಕಾದ ಬೀಜ ತಂದು ಪರೀಕ್ಷೆಗೊಳಪಡಿಸಿ ವಿತರಿಸಬೇಕೆಂದರೂ ಕನಿಷ್ಠ ಒಂದೂವರೆ ವಾರ ಸಮಯ ಬೇಕು. ಈ ಕೆಲಸ ಪೂರ್ವದಲ್ಲಿಯೇ ಮಾಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎಒ ಗೈರು: ತರಾಟೆ
- - - -27ಕೆಡಿವಿಜಿ33, 34ಃ: