-ಆತಂಕ ಬೇಡ
ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳು ಹಣ ಬರಲಿಲ್ಲ ಎಂದು ಗೊಂದಲಗಳಿಗೆ ಒಳಗಾಗದೆ ಈಗಾಗಲೇ ನೀಡಿರುವ ದಾಖಲೆಗಳಂತೆ ಯಥಾಸ್ಥಿತಿ ಇರುವಂತೆ ಪಂಚ ಗ್ಯಾರಂಟಿಗಳ ಸಭೆಯಲ್ಲಿ ಠರಾವು ಪಾಸ್ ಮಾಡಿ, ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸಿ.ಹೆಚ್. ಶ್ರೀನಿವಾಸ್ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಗ್ಗೆ ಫಲಾನುಭವಿಗಳು ಆತಂಕ ಪಡಬಾರದು, ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡುವ ಅಕ್ಕಿಯನ್ನು ಜನರು ಮಾರಾಟ ಮಾಡುತ್ತಿದ್ದಾರೆ. ಈ ಅಕ್ಕಿಯು ಸತ್ವ ಭರಿತವಾಗಿದ್ದು ಇಂತಹ ಪೌಷ್ಟಿಕತೆ ಇರುವ ಅಕ್ಕಿಯನ್ನು ಮಾರಾಟ ಮಾಡದಂತೆ ಊಟಕ್ಕೆ ಉಪಯೋಗಿಸಿರಿ ಎಂದು ನಾಗರಿಕರಿಗೆ ಸಲಹೆ ನೀಡಿ, ಪಡಿತರ ಅಕ್ಕಿಯನ್ನು ಪಡೆವ ಫಲಾನುಭವಿಗಳು ಕಾಳ ಸಂತೆಕೋರರಿಗೆ ಮಾರಾಟ ಮಾಡುವುದು ಅಪರಾಧವಾಗಿದ್ದು, ಅಂತವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಸಿ.ಡಿ.ಪಿ.ಒ ನಿರ್ಮಲ, ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿ, ತಾಲೂಕಿನಲ್ಲಿ 78.223 ಜನ ಫಲಾನುಭವಿಗಳು ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದು, ತಿಂಗಳಿಗೆ ಈ ಎಲ್ಲಾ ಫಲಾನುಭವಿಗಳಿಂದ 15.64.46000 ಹಣ ವಿತರಣೆ ಮಾಡುತ್ತಿದ್ದು ಕಳೆದ 32 ತಿಂಗಳಿನಿಂದ ₹500 ಕೋಟಿ 62 ಲಕ್ಷದ 72ಸಾವಿರ ಹಣವನ್ನು ಕಳೆದ ಜೂನ್ ತಿಂಗಳ ವರೆಗೆ ವಿತರಣೆ ಮಾಡಲಾಗಿರುವ ಬಗ್ಗೆ ಮಾಹಿತಿ ನೀಡಿದರು.
ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ಮಹಮ್ಮದ್ ಜಬೀಉಲ್ಲಾ ಕೆರೆಬಿಳಚಿಯ ರಸ್ತೆ ಬದಿಯ ಮೊರಾರ್ಜಿ ಶಾಲೆಯ ಮುಂಭಾಗದಲ್ಲಿ ನಿಲುಗಡೆ, ಶಾಲೆಯ ಮುಂದಿನ ರಸ್ತೆಯಿಂದ ಕೆರೆಬಿಳಚಿ ಗ್ರಾಮದ ಮಾರ್ಗ ಹೊಸೂರು ಕಡೆ ಬಸ್ ಓಡಿಸಬೇಕು ಎಂದು ಡಿಪೋ ಮ್ಯಾನೇಜರ್ ಅವರಿಗೆ ತಿಳಿಸಿದರು.
ಯುವನಿಧಿ ಯೋಜನೆಯ ಅಧಿಕಾರಿ ಯುವನಿಧಿ ಫಲಾನುಭವಿಗಳಿಗೆ ಸಂದಾಯವಾದ ಹಣಕಾಸಿನ ಮಾಹಿತಿಯನ್ನು ನೀಡಿದರು.
ವಿ.ಸೂ