ಕಾನೂನು ತೊಡಕು ನೆಪ ಹೇಳಿ ರೈತರ ಸತಾಯಿಸದಿರಿ

KannadaprabhaNewsNetwork |  
Published : Nov 15, 2026, 01:30 AM IST
ಫೋಟೊ:೧೪ಕೆಪಿಸೊರಬ-೦೨ : ಸೊರಬ ತಾಲೂಕಿನ ದುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮವನ್ನು ತಹಶೀಲ್ದಾರ್ ಕೆ. ಪುರಂದರ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

Do not harass farmers by citing legal hurdles as an excuse.

-ರೈತರಿಗೆ ಆಸರೆ ಆಗಿ

-ತಹಸೀಲ್ದಾರ್‌ ಪುರಂದರ ತಾಕೀತು । ದುಗೂರು ಗ್ರಾಪಂ ವ್ಯಾಪ್ತಿ ಪ್ರಜಾಸೇವಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಸೊರಬ

ಕಾನೂನು ಜನರಿಗಾಗಿಯೇ ಇರುವುದು. ಸಂಬಂಧಪಟ್ಟ ಅಧಿಕಾರಿಗಳು ಕಾನೂನಿನ ತೊಡಕು ಹೇಳಿ ರೈತನನ್ನು ಸತಾಯಿಸುವುದು ಸರಿಯಲ್ಲ. ಅದರಲ್ಲಿ ಇರುವ ಅವಕಾಶ ಬಳಸಿಕೊಂಡು ಮಾನವೀಯತೆ ಮೇರೆಗೆ ಸಹಾಯ ಮಾಡಬೇಕು ಎಂದು ತಹಸೀಲ್ದಾರ್‌ ಕೆ. ಪುರಂದರ ತಿಳಿಸಿದರು.

ತಾಲೂಕಿನ ದುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ರೈತರು ತಮ್ಮ ಜಮೀನಿನ ಪಹಣಿ, ಇ-ಖಾತಾ, ಸರ್ವೆ ನಂಬರ್ ವ್ಯತ್ಯಾಸ, ಪೋಡಿ, ವಾರಸು ಮುಂತಾದ ಹಲವು ಕಾನೂನಿನ ತೊಡಕುಗಳಲ್ಲಿ ಸಿಲುಕಿದ್ದಾರೆ. ಅಂತಹ ರೈತರಿಗೆ ಆಸರೆಯಾಗಬೇಕು ಎಂದರು.

ಭತ್ತದ ಕೊಯ್ಲು ಆರಂಭವಾಗುವ ಮುನ್ನವೇ ತಾಲೂಕಿನಾದ್ಯಂತ ಕಟಾವು ಯಂತ್ರಗಳಿಗೆ ಏಕ ಬೆಲೆ ನಿಗದಿ ಮಾಡಬೇಕು ಎಂದು ತಹಸೀಲ್ದಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿವರ್ಷ ಕೊಯ್ಲು ಸಮಯದಲ್ಲಿ ಯಂತ್ರದ ಮಾಲೀಕರು ತಮಗೆ ಬೇಕಾದ ದರ ಕೇಳುತ್ತಾರೆ. ರೈತರು ಅನಿವಾರ್ಯವಾಗಿ ಹೆಚ್ಚಿನ ಹಣ ಕೊಟ್ಟು ಕೊಯ್ಲು ಮಾಡಿಸಿಕೊಳ್ಳಬೇಕಾಗುತ್ತದೆ. ಇದನ್ನು ತಪ್ಪಿಸಲು ಕೊಯ್ಲು ಆರಂಭವಾಗುವ ಮುಂಚೆಯೇ ರೈತರ ಪ್ರತಿನಿಧಿಗಳು ಮತ್ತು ಕಟಾವು ಯಂತ್ರ ಮಾಲೀಕರನ್ನು ಒಟ್ಟಿಗೆ ಕರೆಸಿ ಸಭೆ ನಡೆಸಿ, ಸಮನ್ವಯ ಸಾಧಿಸಿ ತಾಲೂಕಿನಾದ್ಯಂತ ಒಂದೇ ದರ ನಿಗದಿಪಡಿಸಬೇಕು ಎಂದರು.

ಮಾನವೀಯತೆಯಿಂದ ಸ್ಪಂದಿಸಿ:

ಕಾರ್ಯನಿರ್ವಾಹಕ ಶಶಿಧರ್ ಮಾತನಾಡಿ, ಸಾರ್ವಜನಿಕರು ಕಚೇರಿಗೆ ಬಂದಾಗ ಸಿಬ್ಬಂದಿ ಮಾನವೀಯತೆಯಿಂದ ಸ್ಪಂದಿಸಿ ಕೆಲಸ ಮಾಡಬೇಕು. ಕಚೇರಿಗೆ ಬಂದ ಜನರನ್ನು ಗಂಟೆಗಟ್ಟಲೆ ಕಾಯಿಸುವುದು, ಸರಿಯಾಗಿ ಮಾಹಿತಿ ನೀಡದೇ ಅಲೆದಾಡಿಸುವುದು ಸರಿಯಲ್ಲ. ಕಚೇರಿಗೆ ಬಂದ ಪ್ರತಿಯೊಬ್ಬರನ್ನು ಗೌರವದಿಂದ ಮಾತನಾಡಿಸಿ, ಅವರ ಸಮಸ್ಯೆಯನ್ನು ತಾಳ್ಮೆಯಿಂದ ಕೇಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ತೋಟಗಾರಿಕೆ ಅಧಿಕಾರಿ ಪ್ರಭು ಶಂಕರ್ ಮಾತನಾಡಿ, ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಸಮೀಕ್ಷೆ ತಮ್ಮ ಮೊಬೈಲ್‌ನಿಂದಲೇ ಬೆಳೆ ಎಂಟ್ರಿ ಮಾಡಿಸಬಹುದು. ಇದರಿಂದ ಬೆಳೆ ವಿಮೆ, ಪರಿಹಾರ, ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಬೆಳೆ ವಿಮೆ ಮಾಡಿಸಿದ ರೈತರು ಮರಣ ಹೊಂದಿದರೆ, ಅವರ ಪರವಾಗಿ ಕುಟುಂಬದವರು ಪರಿಹಾರ ಪಡೆಯಲು ಸಾಧ್ಯವಿದೆ. ಇದಕ್ಕಾಗಿ ₹೧೦೦ ಸ್ಟಾಂಪ್ ಪೇಪರ್‌ನ ಅರ್ಜಿಯಲ್ಲಿ ಸಹಿ ಹಾಕಿ ಕೊಟ್ಟರೆ ಸಾಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಇಕ್ಬಾಲ್ ಜಾತಿಗೇರ್, ಎಪಿಎಂಸಿ ಕಾರ್ಯದರ್ಶಿ ಆಶಾ, ತಾಲೂಕು ಆರೋಗ್ಯಾಧಿಕಾರಿ ಡಾ. ಹರ್ಷ ಪಾಟೀಲ್, ವಲಯ ಅರಣ್ಯಾಧಿಕಾರಿ ಶ್ರೀಪಾದ್ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ, ಲೋಕೋಪಯೋಗಿ ಇಲಾಖೆ ಎಇಇ ಕಿರಣ್ ಕುಮಾರ್, ಮೆಸ್ಕಾಂ ಎಇಇ ಸತ್ಯಪ್ರಕಾಶ್, ತೋಟಗಾರಿಕೆ ಅಧಿಕಾರಿ ಪ್ರಭು ಶಂಕರ್, ದೀಪಕ್, ಶ್ರೀಶೈಲ, ಸಂಗೀತ ಚೌಹಾಣ್, ಆರ್‌ಐ ಮೇಘರಾಜ್, ಪಿಡಿಓ ನಾಗರಾಜ್, ಮೋಹನ್ ಇದ್ದರು.

ಫೋಟೊ: ೧೪ಕೆಪಿಸೊರಬ-೦೨

ಸೊರಬ ತಾಲೂಕಿನ ದುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮವನ್ನು ತಹಸೀಲ್ದಾರ್‌ ಕೆ. ಪುರಂದರ ಉದ್ಘಾಟಿಸಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಂಪ್ಲಿಯಿಂದ ಮುನಿರಾಬಾದ್‌ನತ್ತ ಹೆಜ್ಜೆ ಹಾಕಿದ ನೂರಾರು ರೈತರು
ಜನರ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ: ಅಶೋಕ ಶಿಗ್ಗಾಂವಿ