ಕವಿತಾಳ: ಮಕ್ಕಳ ಮೇಲೆ ಸದಾ ನಿರ್ಬಂಧ ಹೇರುವ ಮೂಲಕ ಅವರ ಬೆಳವಣಿಗೆಗೆ ತಡೆಯೊಡ್ಡುವ ಕೆಲಸವನ್ನು ಪಾಲಕರು ಮಾಡಬಾರದು ಎಂದು ಕೊಡೆಕಲ್ ಗುರು ದುರುದುಂಡೇಶ್ವರ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಗುರು ಪಾಟೀಲ್, ಸವಿತಾ ಹುಬ್ಬಳಿ, ಈಶ್ವರ ಉಬ್ರಾಣಿ, ರಾಜ್ ಕರಣ್ ವೇದಿಕೆ ಮೇಲೆ ಇದ್ದರು.
ಕನ್ನಡ ವಾಹಿನಿಯ ಕೋಗಿಲೆ ತಂಡದ ಮಹನ್ಯ ಗುರು ಪಾಟೀಲ ಅವರ ತಂಡದಿಂದ ಸಂಗೀತ ಕಾರ್ಯಕ್ರ ನಡೆಯಿತು. ಮಹನ್ಯ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹನ್ಯ ಪಾಟೀಲರ ಅಭಿಮಾನಿ ಕಸನದೊಡ್ಡಿಯ ಅನಿಲ್ ಕುಮಾರ ಆರ್‌ಸಿಬಿ ಟೀ ಶರ್ಟ್ ನೀಡಿ ಸನ್ಮಾನಿಸಿದರು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾವುರಾರು ಜನರು ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಸ್ವಾದಿಸಿದರು.