ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)
ವಿದ್ಯಾರ್ಥಿ ದೆಸೆಯಲ್ಲಿಯಲ್ಲಿಯೇ ಹೆಚ್ಚೆಚ್ಚು ಓದಿ, ಆತ್ಮವಿಶ್ವಾಸ ಪಡೆದುಕೊಳ್ಳಿ. ಓದುವುದಕ್ಕೆ ಎಂತದ್ದೇ ಮಿತಿ ಇಟ್ಟುಕೊಳ್ಳಬೇಡಿ ಎಂದು ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣಂದ ಎಸ್ಪಿ ಜಗದೀಶ ಅಡಹಳ್ಳಿ ಹೇಳಿದರು.ಪಟ್ಟಣದ ಕುರುಹಿನಶೆಟ್ಟಿ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕೌಶಲ್ಯ, ಭವಿಷ್ಯದ ಕನಸು ಹಾಗೂ ಬದುಕಿನ ಮೌಲ್ಯಗಳನ್ನು ಕಟ್ಟಿಕೊಳ್ಳಲು ಮಂಗಳವಾರ ಹಮ್ಮಿಕೊಂಡ ಪ್ರೇರಣಾದಾಯಿ ಕಾರ್ಯಕ್ರಮ ಜ್ಞಾನಗಂಗಾಮೃತ-ಮೌಲ್ಯಾಮೃತವನ್ನು ಉದ್ದೇಶಿಸಿ ಮಾತನಾಡಿ, ಜನಪ್ರತಿನಿಧಿಗಳಾಗಿ ಜನಸೇವೆ ಮಾಡಬೇಕೆಂದರೆ ಸಾಕಷ್ಟು ಸಮಯ ಬೇಕಾಗಬಹುದು. ಆದರೆ, ಪದವಿ ಮುಗಿಸಿ ಚೆನ್ನಾಗಿ ಓದಿ ಯಾರು ಬೇಕಾದರು ಅಧಿಕಾರಿಗಳಾಗಿ ಜನಸೇವೆ ಮಾಡಲು ಸಂವಿಧಾನಬದ್ಧ ಅವಕಾಶವಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಶಿವಶಂಕರ ಶಿವಾಚಾರ್ಯ ಶ್ರೀ ಆಶೀರ್ವಚನ ನೀಡಿ, ಜ್ಞಾನಕ್ಕೆ ಮಿತಿಯಲ್ಲ. ಅದು ಎಲ್ಲಿ ಸಿಕ್ಕರೂ ಅದನ್ನು ಸ್ವೀಕರಿಸಿ. ಈಗ ಗಳಿಸಿದ ಜ್ಞಾನ ಭವಿಷ್ಯದಲ್ಲಿ ಕೈಬಿಡುವುದಿಲ್ಲ. ಜ್ಞಾನಕ್ಕೆ ಸಮಾನವಾದ ಮತ್ತೊಂದು ಮೌಲ್ಯವಿಲ್ಲ ಎಂದರು.ಮುಖಂಡ ಬಸವರಾಜ ಬಾಳಿಕಾಯಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎಂ.ಎಂ.ಜಾಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ತೇರದಾಳ ಮತಕ್ಷೇತ್ರದ ಮುಖಂಡ ಪ್ರವೀಣ ನಾಡಗೌಡ, ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ, ಸಿರ‍್ಪಿ ಮಹೇಶ ಸೋರಗಾಂವಿ, ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾವತಿ ಕೋಷ್ಟಿ, ಶ್ರೀಕಾಂತ ಅಡಹಳ್ಳಿ, ಪ್ರಭು ಬಾದರದಿನ್ನಿ, ಸಿದ್ರಾಯ ಸೋಂದಕರ, ಬಾಜಿರಾವ ಬನಸೋಡ್, ಶಿವಪ್ಪ ಖವಾಸಿ, ಶಿಕ್ಷಕರಾದ ಸಂತೋಷ ಖವಾಸಿ, ಶಂಕರ ತಿಗಣಿ, ಉಮೇಶ ಕಳಸದ, ವಿಶ್ವನಾಥ ಉಪ್ಪಿನ ಸೇರಿದಂತೆ ಸಿಬ್ಬಂದಿ, ಮಕ್ಕಳು ಇದ್ದರು. ಪೊಲೀಸ್ ವರಿಷ್ಠಾಧಿಕಾರಿ ಮಕ್ಕಳೊಂದಿಗೆ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರಿಸಿದರು.ಯಾವುದೇ ಹುದ್ದೇ ಕಡಿಮೆಯನಲ್ಲ. ಹಾಗಾಗಿ ಶಾಲಾ ಹಂತದಲ್ಲಿಯೇ ತಾವು ಏನಾಗಬೇಕೆಂದು ಯೋಜನೆ ಮಾಡಿಕೊಳ್ಳಿ. ಅದಕ್ಕೆ ಶಿಕ್ಷಕರ ಸಲಹೆ, ಮಾರ್ಗದರ್ಶನ ಪಡೆಯಿರಿ. ಬಾವಿಯಲ್ಲಿನ ಕಪ್ಪೆಯಂತೆ ಒಂದೇ ಸ್ಥಳಕ್ಕೆ ಸೀಮಿತಗೊಳ್ಳದೆ ಪ್ರಪಂಚ ಜ್ಞಾನ ಪಡೆಯಬೇಕು. ಶಿಕ್ಷಕರು ಸಹ ಸ್ಪರ್ಧಾತ್ಮಕ ಪರೀಕ್ಷೆಗಳ ಜ್ಞಾನ ಹೊಂದಿ ಮಕ್ಕಳಿಗೆ ಅವುಗಳ ಬಗ್ಗೆ ತಿಳಿಹೇಳಬೇಕು.
-ಜಗದೀಶ ಅಡಹಳ್ಳಿ, ಎಸ್ಪಿ ವಿಶಾಖಪಟ್ಟಣಂ.